ಕೋಲಾರ

ಜೇನುದಾಳಿ: ಸಾರ್ವಜನಿಕರ ಆತಂಕ

Published On :

ಗೌರಿಬಿದನೂರು: ತಾಲೂಕಿನ ಮಂಚೇನಹಳ್ಳಿಯಿಂದ ಬಾಲರೆಡ್ಡಿಹಳ್ಳಿ ನರಸಿಂಹಸ್ವಾಮಿ ದೇವಾಲಯಕ್ಕೆ ಹೋಗುವ ರಸ್ತೆ ಬದಿಯಿರುವ ಬೃಹತ್ ಮರಗಳಲ್ಲಿ ಗೂಡುಕಟ್ಟಿರುವ ಜೇನುಹುಳಗಳು ಪ್ರತಿ ನಿತ್ಯ ದಾಳಿ ಮಾಡಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ಕೆಲ ದಿನಗಳ ಹಿಂದೆ ಜೇನು ದಾಳಿಯಿಂದ 60 ವರ್ಷದ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಂತರದ ಎರಡು ದಿನಗಳಲ್ಲಿಯೇ ವೃದ್ದೆಯೊಬ್ಬರು ಜೇನು ಹುಳುಗಳ ದಾಳಿಗೆ ಒಳಗಾಗಿ ಆಸ್ಪತ್ರೆ ಸೇರಿದ್ದು, ಆಕೆಯನ್ನು ರಕ್ಷಿಸಿಲು ಹೋದ  ಪೊಲೀಸರೂ ಜೇನು ದಾಳಿಗೆ ತುತ್ತಾಗಿದ್ದಾರೆ. ಬಾಲರೆಡ್ಡಿಹಳ್ಳಿ, ಮಿಣಕನಗುರ್ಕಿ, ಬುದ್ದಿವಂತನಹಳ್ಳಿ, ಮಂಚೇನಹಳ್ಳಿ ಮುಂತಾದ ಗ್ರಾಮಗಳ ರಸ್ತೆ ಬದಿ ಮರಗಳಲ್ಲಿರುವ ಜೇನು ಮನಬಂದಂತೆ ದಾಳಿ ನಡೆಸುತ್ತಿವೆ. ಮಂಚೇನಹಳ್ಳಿಯ ಚಿಕ್ಕಬಳ್ಳಾಪುರ ಗೌರಿಬಿದನೂರು ಮುಖ್ಯರಸ್ತೆಯ ಸಮೀಪದ ಇಂಡೇನ್ ಪೆಟ್ರೋಲ್ ಬಂಕ್ ಸಮೀಪದಲ್ಲಿರುವ ಬೃಹತ್ ಮರದಲ್ಲಿ ಸುಮಾರು 15 ಕ್ಕೂ ಹೆಚ್ಚು ಬೆಟ್ಟದ ಜೇನುಗೂಡುಗಳಿದ್ದು, ಪ್ರತಿ ನಿತ್ಯ ದಾರಿಹೋಕರು ಜೇನು ದಾಳಿಯಿಂದ ಆಸ್ಪತ್ರೆ ಸೇರುವ ಸ್ಥಿತಿ ನಿರ್ಮಾಣ ವಾಗಿದೆ. ಬೇಸಿಗೆಯಲ್ಲಿ ಬೆಟ್ಟಕ್ಕೆ ಬೆಂಕಿ ತಗಲುವುದರಿಂದ, ನೀರಿನ ಅಭಾವದಿಂದ ಜೇನುಸಮೂಹಗಳು ವಲಸೆ ಬಂದು ಗ್ರಾಮಗಳ ಬಳಿ ಕಟ್ಟಡಗಳು ಮರಗಳಲ್ಲಿ ಆಶ್ರಯ ಪಡೆದು, ಸಾರ್ವಜನಿಕರ ಮೇಲೆ ನಿತ್ಯ ದಾಳಿ ಮಾಡುತ್ತಿರುವುದು ಆತಂಕದ ವಿಷಯವಾಗಿದ್ದು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.