ಕೋಲಾರ

'ಟಿವಿ ಸಂಸ್ಕೃತಿಯಿಂದ ಸಾಹಿತ್ಯ ಮೂಲೆಗುಂಪು'

Published On :

ಚಿಕ್ಕಬಳ್ಳಾಪುರ: ಇಂದು ಟಿವಿ ಸಂಸ್ಕೃತಿ ಹೆಚ್ಚಾಗಿ ಪುಸ್ತಕ-ಸಾಹಿತ್ಯ-ಸಂಸ್ಕೃತಿ ಮೂಲೆಗುಂಪಾಗುತ್ತಿರುವುದು ದುರಾದೃಷ್ಟಕರ ಎಂದು ಸಾಹಿತಿ ಜರಗನಹಳ್ಳಿ ಶಿವಶಂಕರ್ ವಿಷಾದ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಮಹೇಶ್-ಚಿಕ್ಕಬಳ್ಳಾಪುರ ರವರ 'ವಾಮನ-ಭಾಮನ' ಕವನ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿ, ಯಾವುದೇ ಮನೆಗೆ ಹೋದರೂ ಟಿವಿಯಲ್ಲಿ ಬರುವ ಧಾರವಾಹಿ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ವೀಕ್ಷಣೆಯಲ್ಲಿ ಜನ ನಿರತರಾಗಿತ್ತಾರೆ. ಆದರೆ ಪುಸ್ತಕ, ಸಾಹಿತ್ಯದ ಕಡೆಗೆ ಗಮನಕೊಡಲು ಮುಂದಾಗುವುದಿಲ್ಲ. ಇದು ಹೀಗೆ ಮುಂದುವರೆದರೆ ಪುಸ್ತಕ ಸಾಹಿತ್ಯ ಎನ್ನುವುದು ಕೇವಲ ಕಲ್ಪನೆಯಾಗಿ ಉಳಿಯುವ ದಿನಗಳು ದೂರವಿಲ್ಲ. ಇಂದು ಸಾಹಿತಿಗಳ ಕೊರತೆ ಎದ್ದು ಕಾಣುತ್ತಿದೆ. ಸಾಹಿತ್ಯಪ್ರಿಯ ಪ್ರತಿಭೆಗಳನ್ನು ಪ್ರೋತ್ಸಾಹಿಸಿದಾಗ ದೊಡ್ಡಮಟ್ಟದ ಪ್ರತಿಭೆಗಳನ್ನು ಕಾಣಬಹುದಾಗಿದೆ ಎಂದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಪೂರ್ಣಾನಂದಮಹಾರಾಜ್ ಮಾತನಾಡಿ, ಸಾಹಿತ್ಯ ಹೃದಯದ ಭಾವನಗಳಿಗೆ ಶಕ್ತಿ ನೀಡುತ್ತದೆ, ಅದರಿಂದ ಜೀವನದಲ್ಲಿ ಉಲ್ಲಾಸವನ್ನು ಕಾಣಬಹುದಾಗಿದೆ. ಸಾಹಿತ್ಯವನ್ನು ಹೆಚ್ಚು ಹೆಚ್ಚು ಬೆಳೆಸುವ ದಿಸೆಯಲ್ಲಿ ನಾವು ಮೆನ್ನಡೆಯಬೇಕಾಗಿದೆ ಎಂದರು. ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಪ್ರಾಣಿ-ಪಕ್ಷಿ ಸಂಕುಲಗಳ ಬಗ್ಗೆ ವಿಶೇಷ ಆಸಕ್ತಿಯನ್ನು ಮೈಗೂಡಿಸಿಕೊಳ್ಳಬೇಕು, ಇಂದು ನಾನಾ ವಿಧದಲ್ಲಿ ಪರಿಸರ ಕಲುಶಿತಗೊಳ್ಳುತ್ತಿದೆ ಎಂದರು. ಇದೇ ಸಂದರ್ಭಧಲ್ಲಿ ಕಾಕನ ಕೋಟೆ ಚಿತ್ರದ ಕಾಡು ಕುದುರೆ ಓಡಿ ಬಂದಿತ್ತಾ... ಹಾಡನ್ನು ಹಾಡಿ ಶಿವಮೊಗ್ಗ ಸುಬ್ಬಣ್ಣ ಗಮನ ಸೆಳೆದರು. ಸಾಹಿತಿ ಗೋಪಾಲಗೌಡಕಲ್ವಮಂಜಲಿ, ಪ್ರಾಂಶುಪಾಲ ಬಿ.ವಿ. ಕೃಷ್ಣ, ಚಿತ್ರ ವಿನ್ಯಾಸಕಾರ ಪುಂಡಲೀಕ ಕಲ್ಲಿಗನೂರ ಮಾತನಾಡಿದರು. ತಹಸೀಲ್ದಾರ್ ನಡೇಶ್, ವಾಮನ-ಭಾಮನ ಕರ್ತೃ ಮಹೇಶ್ ಚಿಕ್ಕಬಳ್ಳಾಪುರ, ಕೆ.ವಿ. ಡಿಇಡಿ ಕಾಲೇಜಿನ ಉಪನ್ಯಾಸಕ ಎಂ. ಹಾಲಪ್ಪ, ಪತ್ರಕರ್ತ ಎಂ. ಕೃಷ್ಣಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.