ನಮೋ ಬಿರುಗಾಳಿಗೆ ಕಾಂಗ್ರೆಸ್ ಧೂಳೀಪಟ
ಶಿಡ್ಲಘಟ್ಟ: ರಾಜ್ಯದಲ್ಲಿ ನರೇಂದ್ರ ಮೋದಿಯವರ ಗಾಳಿ ಬೀಸುತ್ತಿದ್ದು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೋಲಾರ ಕ್ಷೆತ್ರದಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ರಾಷ್ಟ್ರದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಎಲ್ಲರೂ ಶ್ರಮಿಸಬೇಕೆಂದು ಬಂಗಾರಪೇಟೆ ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ಕರೆ ನೀಡಿದರು.
ತಾಲೂಕಿನ ಚಿಕ್ಕದಾಸರಹಳ್ಳಿ ಶ್ರೀ ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಲೋಕಸಭೆ ಚುನಾವಣೆಗೆ 60 ದಿನಗಳು ಮಾತ್ರ ಉಳಿದಿದೆ. ತಾಲೂಕಿನ ಭೂತ್ ಮಟ್ಟದ ಕಮಿಟಿಗಳಿಂದ ಹೋಬಳಿ ಮಟ್ಟದ ಸಭೆಗಳನ್ನು ನಡೆಸಬೇಕಾಗಿದೆ ಎಂದರು.
ಭಾವಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು 4 ಭಾರಿ ಗುಜರಾತ್ ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿ ಹಾಗೂ ಅವರ ಆಡಳಿತ ವೈಕರಿ ಬಗ್ಗೆ ಮತದಾರರಿಗೆ ಮನವರಿಕೆ ಮಾಡಬೇಕೆಂದರಲ್ಲದೆ ಗುಜರಾತಿನಲ್ಲಿ 27 ನದಿಗಳನ್ನು ಜೋಡಣೆ ಮಾಡಿ 480 ಕಿಲೋಮೀಟರ್ ಕಾಲುವೆಗಳನ್ನು ತೆರೆದು ಕೃಷಿ, ನೀರಾವರಿ ಹಾಗೂ ಕುಡಿಯುವ ನೀರಿಗೆ ಯಾವುದೇ ಬರ ಇಲ್ಲದಂತಾಗಿದೆ ಎಂದರು. ಕೆ.ಎಚ್. ಮುನಿಯಪ್ಪರವರು ಲೋಕಸಭೆ ಚುನಾವಣೆಯಲ್ಲಿ 6 ಭಾರಿ ಗೆದ್ದಿದ್ದರೂ ಅವರ ಜವಾಬ್ದಾರಿ ಚಿಂತನೆ ಮಾಡಿಲ್ಲ. ಕೇಂದ್ರ ಸಚಿವರಾಗಿ 10 ವರ್ಷ, ಸಂಸತ್ ಸದಸ್ಯರಾಗಿ 30 ವರ್ಷ ಇದ್ದರೂ ಶಾಶ್ವತ ನೀರಾವರಿ ಯೋಜನೆ ಬಗ್ಗೆ ಚಿಂತನೆ ಮಾಡಿಲ್ಲ ಎಂದು ಆರೋಪಿಸಿದರು.
ಕುಡಿಯುವ ನೀರಿಗಾಗಿ ಎತ್ತಿನ ಹೊಳೆ ಯೋಜನೆಗೆ ಚಾಲನೆ ನೀಡಲು ಹೊರಟಿದ್ದಾರೆ. ಆದರೆ ಸರ್ಕಾರ ಕ್ರಿಯಾ ಯೋಜನೆಯಲ್ಲಿ ಸೇರಿಸಿ ಬಜೆಟ್ನಲ್ಲಿ ತರದೆ ಯೋಜನೆ ಶಂಕು ಸ್ಥಾಪನೆ ಮಾಡಲು ಮುಂದಾಗಿರುವುದು ಎಷ್ಟರ ಮಟ್ಟಿಗೆ ಸಮಂಜಸ ಎಂದರು.
ನರೇಂದ್ರಮೋದಿಯವರಲ್ಲಿ ರಾಜಕೀಯ ಇಚ್ಚಾಶಕ್ತಿ ಇದೆ. ಅವರು ಪ್ರಧಾನಿಯಾದರೆ ನದಿ ಜೋಡಣೆ ಮಾಡಿ ದೇಶವನ್ನು ಹಸಿರುಗೊಳಿಸುವುದಾಗಿ ಘೋಷಣೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಶಾಶ್ವತ ನೀರಾವರಿಗಾಗಿ ಪ್ರಮಾಣಿಕ ಪ್ರಯತ್ನ ಮಾಡುತ್ತೆವೆ ಎಂದರು. ಬಿಜೆಪಿ ತಾಲ್ಲೂಕು ಅಧ್ಯಕ್ಷ ಸುರೇಂದ್ರ ಗೌಡ, ಹನುಮಪ್ಪ, ಬಿ. ಮುನಿವೆಂಕಟಪ್ಪ, ಶ್ರೀರಾಮರೆಡ್ಡಿ, ಜೆ.ವಿ. ಸದಾಶಿವ, ಸಿ.ವಿ. ಲೋಕೇಶ್ ಮಾತನಾಡಿದರು. ಮಾರ್ಕಂಡಯ್ಯ, ಬಿ.ಸಿ. ಮೂರ್ತಿ, ದಾಮೋದರ್, ಮೋಹನ್, ಶ್ರೀಧರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

