ಶಾಲೆ ಗೇಟಿನ ಪಿಲ್ಲರ್ ಕುಸಿದು ಬಾಲಕ ಸಾವು
ಕೆಜಿಎಫ್: ಮಧ್ಯಾಹ್ನ ಊಟದ ಸಮಯದಲ್ಲಿ ಶಾಲಾ ಕೊಠಡಿಯಿಂದ ಹೊರಬರುತ್ತಿದ್ದಾಗ ಶಾಲೆ ಆವರಣದಲ್ಲಿ ನಿರ್ಮಿಸಿರುವ ಗೇಟಿನ ಎರಡು ಪಿಲ್ಲರ್ ಪೈಕಿ ಒಂದು ಕುಸಿದು ಬಿದ್ದ ಪರಿಣಾಮ ಒಂದನೇ ತರಗತಿಯ ವಿದ್ಯಾರ್ಥಿ ಕೌಶಿಕ್(6) ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಕಾರ್ಮೆಲ್ ಆಂಗ್ಲ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಮೃತಪಟ್ಟ ಕೌಶಿಕ್ ಪೆದ್ದಪಲ್ಲಿ ಗ್ರಾಮದ ನಿವಾಸಿ ಗಣೇಶ್ ಹಾಗೂ ಲೇಸಾ ದಂಪತಿಗಳ ಏಕೈಕ ಸುಪುತ್ರನಾಗಿದ್ದು ಈ ಕುಟುಂಬದ ವಂಶಕ್ಕೆ ಒಬ್ಬನೇ ಗಂಡು ಮಗನಾಗಿದ್ದ ಎಂದು ಗಣೇಶ್ ತಮ್ಮ ದುಖವನ್ನು ತೋಡಿಕೊಂಡಿಕೊಂಡರು.
ಶಾಲೆಯ ಆಡಳಿತ ಮಂಡಳಿಯು ಶಾಲೆಯ ಆವರಣದಲ್ಲಿ ಮೂರು ಅಡಿಗಳ ಎರಡು ಪಿಲ್ಲರ್ ಸ್ಥಂಭವನ್ನು ನಿರ್ಮಿಸಿದ್ದು ಅದಕ್ಕೆ ಯಾವುದೇ ಸರಿಯಾದ ಸೂಕ್ತ ಅಡಿಪಾಯವಿಲ್ಲದೆ ಪಿಲ್ಲರ್ಗಳನ್ನು ನಿರ್ಮಿಸಿದ್ದು ಶಾಲಾ ಮಕ್ಕಳ ನೂಕುನುಗ್ಗಲಿಂದಾಗಿ ಪಿಲ್ಲರ್ ಕುಸಿದು ಕೌಶಿಕ್ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿಸಲಾಗಿದೆ. ನ್ಯೂ ಕಾರ್ಮೆಲ್ ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳಿಂದ ಹಾಗೂ ಪೋಷಕರಿಂದ ಮಾಸಿಕ ಹಾಗೂ ವಾರ್ಷಿಕ ಶುಲ್ಕವನ್ನು ವಸೂಲಿ ಮಾಡುವತ್ತ ಹೆಚ್ಚಿನ ಗಮನ ಹರಿಸುತ್ತಿದ್ದು ಮಕ್ಕಳ ಜೀವನದ ಬಗ್ಗೆ ಯಾವುದೇ ಕ್ರಮವನ್ನು ಜರುಗಿಸಿಲ್ಲ ಎಂದು ಗ್ರಾಮಸ್ಥರು ಸಾರ್ವಜನಿಕರು ಹಾಗೂ ಮಕ್ಕಳ ಪೋಷಕರು ಆರೋಪಿಸಿದರು.
ಇತ್ತ ವಿದ್ಯಾರ್ಥಿ ಕೌಶಿಕ್ ಗೋಡೆಕುಸಿತದಿಂದ ಮೃತಪಟ್ಟ ನಂತರ ಪೆದ್ದಪಲ್ಲಿ ಗ್ರಾಮಸ್ಥರು ಕೌಶಿಕ್ನ ಕುಟುಂಬಸ್ಥರು ದಲಿತ ಸಂಘರ್ಷ ಸಮಿತಿಯ ಮುಖಂಡರು ನಾಗರೀಕರು ಶಾಲೆಯ ಆಡಳಿತ ಮಂಡಳಿಯ ಮುಖ್ಯಸ್ಥರು ಈ ಘಟನೆಗೆ ನೇರ ಹೊಣೆಗಾರರು ಎಂದು ಆಕ್ರೋಶ ವ್ಯಕ್ತಪಡಿಸಿದ ಕೂಡಲೇ ಪೊಲೀಸರು ಆಡಳಿತ ಮಂಡಳಿಯ ಮುಖ್ಯಸ್ಥರನ್ನು ಬಂಧಿಸಿ ಸೂಕ್ತ ಕಾನೂನು ರೀತ್ಯ ಕ್ರಮವನ್ನು ಜರುಗಿಸಬೇಕು ಇಲ್ಲವಾದಲ್ಲಿ ಶಾಲೆಯ ಮುಂದೆ ಮೃತದೇಹವನ್ನಿಟ್ಟು ಪ್ರತಿಭಟಿಸುವುದಾಗಿ ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

