ಕೊಲೆ ಪ್ರಕರಣ; ಅಪರಾಧಿ ಕುಟ್ಟಿಬಾ ಜೀವಾವಧಿ ಶಿಕ್ಷೆ
ಕೆಜಿಎಫ್: ಕೊಲೆ ಪ್ರಕರಣವೊಂದು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೆಜಿಎಫ್ ತ್ವರಿತ ವಿಲೇವಾರಿ ನ್ಯಾಯಾಲಯದ ನ್ಯಾಯಾಧೀಶರಾದ ಸುಬ್ರಮಣ್ಯ ಅವರು ತೀರ್ಪು ನೀಡಿದ್ದಾರೆ.
ಕುಟ್ಟಿಬಾ ಅಲಿಯಾಸ್ ಕುಮಾರ್(30)ಎಂಬವರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದು, ಕೊಲೆಯಾದ ಸುರೇಶ್ ಕುಟುಂಬಕ್ಕೆ 50 ಸಾವರ ಹಣ ನೀಡಬೇಕು ಇಲ್ಲವಾದಲ್ಲಿ ಇನ್ನು ಹೆಚ್ಚಿನ 6 ತಿಂಗಳ ಸಜೆ ವಿಧಿಸಲಾಗುತ್ತದೆ ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.
ಘಟನೆ ಹಿನ್ನಲೆ: 2009 ಅಕ್ಟೋಬರ್ 20 ರಂದು ಉರಿಗಾಂ ಠಾಣಾ ವ್ಯಾಪ್ತಿಯ ನಾರ್ತ್ ಟ್ಯಾಂಕ್ ಬ್ಲಾಕ್ ಪ್ರದೇಶದಲ್ಲಿ ಜಾತ್ರಾ ಉತ್ಸವದಲ್ಲಿ ಪಲ್ಲಕಿ ಮೆರವಣಿಗೆ ನಡೆಸುತ್ತಿದ್ದ ವೇಳೆ ಕೊಲೆಯಾದ ಸುರೇಶ್ ಮತ್ತು ಆರೋಪಿ ಕುಟ್ಟಿಬಾ ಅಲಿಯಾಸ್ ಕುಮಾರ್ ಹಾಗೂ ಆತನ ಸಹೋದರರಾದ ಪ್ರಕಾಶ್, ರಾಜನ್ ಹಾಗೂ ತಂದೆ ಜೂನಿಯರ್ ಅಂತೋನಿ ಮಧ್ಯೆ ಜಗಳ ಆಗಿದ್ದು, ಆರೋಪಿ ಕುಟ್ಟಿಬಾ ಚಾಕುವಿನಿಂದ ಸುರೇಶ್ ಹೊಟ್ಟೆಗೆ ತಿವಿದು ಹಲ್ಲೆ ನಡೆಸಿದ್ದರು. ನಂತರ ಸ್ಥಳಿಯರು ಸುರೇಶ್ನನ್ನು ಕೋಲಾರದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಸುರೇಶ್ ಮೃತಪಟ್ಟಿದ್ದರು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹಿಂದಿನ ಕೆಜಿಎಫ್ ತ್ವರಿತ ವಿಲೇವಾರಿ ನ್ಯಾಯಾಧೀಶರಾದ ಕೆ.ಎಚ್. ಕೊಣ್ಣೂರು ಪ್ರಮುಖ ಆರೋಪಿ ಕುಟ್ಟಿಬಾ ಹೊರತು ಪಡಿಸಿ ಉಳಿದ ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶಿಸಿದ್ದರು. ನಂತರ ನ್ಯಾಯಾಧೀಶರಾದ ಸುಬ್ರಮಣ್ಯ ಅವರು ಆರೋಪಿಗೆ ಜೀವಾವಧಿ ಶಿಕ್ಷೆ, ಕೊಲೆಯಾದ ಸುರೇಶ್ನ ಕುಟುಂಬಕ್ಕೆ 50 ಸಾವಿರ ನಗದು ನೀಡಬೇಕು, ತಪ್ಪಿದಲ್ಲಿ 6 ತಿಂಗಳು ಸಜೆ ಹೆಚ್ಚಿಸಲಾಗುವುದು ಎಂದು ತೀರ್ಪ ನೀಡಿದ್ದಾರೆ.0
ಬೆಳೆ ಅಂದಾಜು ಸಮೀಕ್ಷೆ ತರಬೇತಿ
ಶಿಡ್ಲಘಟ್ಟ: ತಾಲೂಕು ಕಚೇರಿಯಲ್ಲಿ ಗ್ರಾಮ ಲೆಕ್ಕಿಗರು, ಕೃಷಿ, ಗ್ರಾಪಂ ಕಾರ್ಯದರ್ಶಿಗಳಿಗೆ ಬೆಳೆ ಅಂದಾಜು ಸಮೀಕ್ಷೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತರಬೇತಿ ಕಾರ್ಯಕ್ರಮದಲ್ಲಿ ಸೆಕೆಂಡ್ ಗ್ರೇಡ್ ತಹಸೀಲ್ದಾರ್ ರಮೇಶ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಮುನಿಯಪ್ಪ, ತಾಲೂಕು ಸಾಂಘಿಕ ಅಧಿಕಾರಿ ಅನಿಲ್ಕುಮಾರ್, ತರಬೇತುದಾರ ಸಿದ್ದೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

