'ಗ್ರಾಮೀಣ ಭಾಗದಲ್ಲಿ ಮಾತ್ರ ದೇಶದ ಸಂಸ್ಕೃತಿ ಉಳಿದಿದೆ'
ಮಾಲೂರು: ಆಧುನೀಕತೆಯ ಹೆಸರಲ್ಲಿ ಪಟ್ಟಣಗಳಲ್ಲಿ ವಿದೇಶಿ ಸಂಸ್ಕೃತಿ ಅಬ್ಬರ ಹೆಚ್ಚಾಗಿರುವ ಈ ಕಾಲದಲ್ಲಿ ಗ್ರಾಮೀಣ ಭಾಗದಲ್ಲಿ ಕಲೆಯನ್ನು ಉಳಿಸಿ ಬೆಳಸುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಬಾಪೂಜಿ ವಿದ್ಯಾ ಸಂಸ್ಥೆ ಅಧ್ಯಕ್ಷ ಎಂ.ವಿ. ಹನುಮಂತಯ್ಯ ಹೇಳಿದರು.
ಅವರು ತಾಲೂಕಿನ ಚಿಕ್ಕ ಇಗ್ಗಲೂರು ಗ್ರಾಮದಲ್ಲಿ ಶ್ರೀ ಶಂಭುಲಿಂಗೇಶ್ವರ ಸಂಗೀತ ಕಲಾ ಟ್ರಸ್ಟ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಹಳ್ಳಿಗಳ ರಾಷ್ಟ್ರವಾಗಿರುವ ನಮ್ಮ ದೇಶದಲ್ಲಿ ಸಂಸ್ಕೃತಿ ಉಳಿದಿರುವುದು ಗ್ರಾಮೀಣ ಭಾಗದಲ್ಲಿ ಮಾತ್ರ ಎಂದೆನ್ನೆಸುತ್ತಿದೆ. ಈ ಗ್ರಾಮೀಣ ಭಾಗದ ಕಲೆ, ಸಂಗೀತ, ನಾಟ್ಯ ಕಲೆ, ಆಟಗಳಿಗೆ ಇಲ್ಲಿ ಉತ್ತಮ ಪ್ರೋತ್ಸಾಹ ದೊರೆತರೆ ಯುವ ಜನತೆ ರಾಷ್ಟ್ರ-ವಿದೇಶ ಮಟ್ಟದಲ್ಲಿ ಬೆಳೆಯಲು ಸಾಧ್ಯ ಎಂದರು.
ಜಿ.ಪಂ. ಮಾಜಿ ಅಧ್ಯಕ್ಷ ಬಿ.ಎಂ. ಕೃಷ್ಣಪ್ಪ, ರವಿಶಂಕರ್, ಟ್ರಸ್ಟ್ ಅಧ್ಯಕ್ಷ ರಾಮಲಿಂಗಪ್ಪ, ಪ್ರಾಂಶುಪಾಲ ರಾಮಚಂದ್ರ, ವೆಂಕಟಸ್ವಾಮಿ, ಕೋಟಾ ಲಕ್ಷ್ಮಣ್, ಮಾ.ವೆಂ. ತಮ್ಮಯ್ಯ, ಶ್ರೀನಿವಾಸ್, ವೇಣುಗೋಪಾಲ್ವಹ್ನಿ, ಕೃಷ್ಣಪ್ಪ, ನಂಜಪ್ಪ, ನಾರಾಯಣಸ್ವಾಮಿ, ಪಟ್ಲಪ್ಪ, ಅಶ್ವಥಪ್ಪ, ರಾಮಯ್ಯ, ಮಾ.ಕೃ. ಸುರೇಶ್, ಕನ್ನಡ ಹರೀಶ್ ಇದ್ದರು.
ಆಸನಗಳನ್ನು ಬೇಕಾಬಿಟ್ಟಿ ಬಿಸಾಡಿರುವ ಸಿಬ್ಬಂದಿ!
ಶ್ರೀನಿವಾಸಪುರ: ತಾಲೂಕು ಕಚೇರಿಯಲ್ಲಿ ದುರಸ್ತಿಗೊಳ್ಳಬೇಕಾದ ಕೆಲ ವಸ್ತುಗಳನ್ನು ಬೇಕಾಬಿಟ್ಟಿಯಾಗಿ ಕಚೇರಿ ಆವರಣದಲ್ಲಿ ಎಸೆದಿರುವ ಸಿಬ್ಬಂದಿ ತಮ್ಮ ಬೇಜವಾಬ್ದಾರಿಯನ್ನು ತೋರ್ಪಡಿಸಿದ್ದಾರೆ.
ಮನುಷ್ಯನು ಉಪಯೋಗಿಸುವ ವಸ್ತುಗಳು ಕೆಲವೊಂದು ವಸ್ತುಗಳು ಕೆಟ್ಟು ಹೋಗುತ್ತವೆ. ಅಂದ ಮಾತ್ರಕ್ಕೆ ಆ ವಸ್ತುಗಳನ್ನು ಸಾಮಾನ್ಯವಾಗಿ ಯಾರೂ ಬಿಸಾಡುವುದಿಲ್ಲ. ಅವುಗಳನ್ನು ಸೂಕ್ತ ರೀತಿಯಲ್ಲಿ, ದುರಸ್ತಿ ಮಾಡಿಸುತ್ತಾರೆ. ಆದರೆ ಶ್ರೀನಿವಾಸಪುರ ತಾಲ್ಲೂಕು ಪಂಚಾಯ್ತಿ ಕಾರ್ಯಾಲಯದ ಕಚೇರಿಯಲ್ಲಿ ಉಪಯೋಗಿಸುತ್ತಿದ್ದ ಕುರ್ಚಿ ಹಾಗೂ ಇನ್ನಿತರ ಉಪಕರಣಗಳು ಅಲ್ಪ ರಿಪೇರಿಗೆ ಬಂದಿರುವುದನ್ನೇ ನೆಪವಾಗಿಸಿಕೊಂಡು ಬೇಕಾಬಿಟ್ಟಿಯಾಗಿ ಬಿಸಾಡಿ ಇಲ್ಲಿನ ಸಿಬ್ಬಂದಿ ತಮ್ಮ ಬೇಜವಾಬ್ದಾರಿ ಪ್ರದರ್ಶಿಸಿದ್ದಾರೆ.
ಇದರ ಪರಿಣಾಮ, ಕಚೇರಿಗೆ ಬರುವ ಸಾರ್ವಜನಿಕರು ಕುಳಿತುಕೊಳ್ಳಲು ಕುರ್ಚಿಗಳಿಲ್ಲದೇ, ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಪ-ಸ್ವಲ್ಪ ಕೈಕಾಲುಗಳನ್ನು ಮುರಿದುಕೊಂಡಿರುವ ಕುರ್ಚಿಗಳನ್ನು ರಿಪೇರಿ ಮಾಡಿಸಿಕೊಳ್ಳವುದಕ್ಕೆ ಆಗದೆ ಇಲ್ಲಿನ ತಮ್ಮ ಬೇಜಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

