ಕೋಲಾರ

ಕೋಚಿಮುಲ್ ಚುನಾವಣೆಗೆ ಅಭ್ಯರ್ಥಿಗಳ ಪೈಪೋಟಿ

Published On :

ಮುಳಬಾಗಲು: ಕೋಲಾರ-ಚಿಕ್ಕಬಳ್ಳಾಪುರ ಸಹಕಾರಿ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ ಮುಳಬಾಗಲು ಕ್ಷೇತ್ರದ ನಿರ್ದೇಶಕರ ಸ್ಧಾನಕ್ಕೆ ಅಭ್ಯರ್ಥಿಗಳ ಆಯ್ಕೆಗೆ ಭಾರಿ ಪೈಪೋಟೆ ನಡೆಯುತ್ತಿದೆ.
ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಗಳಿಂದ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಕಾಂಗ್ರೆಸ್,ಬಿಜೆಪಿಯಲ್ಲಿ ಒಮ್ಮತದ ಅಭಿಪ್ರಾಯಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಜೆಡಿಎಸ್‌ನಲ್ಲಿ ಆಯ್ಕೆ ಕಗ್ಗಾಂಟಾಗಿದೆ.
ಒಕ್ಕೂಟದ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಜೆಡಿಎಸ್‌ನಿಂದ ಎರಡು ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಈಗ ಮತ್ತೊಂದು ಬಾರಿಗೆ ಅವಕಾಶಬೇಕೆಂದು ಪಟ್ಟು ಹಿಡಿದಿದ್ದಾರೆ. ಆದರೆ, ಜೆಡಿಎಸ್‌ನಲ್ಲಿ 9 ಅಭ್ಯರ್ಥಿಗಳು ಇರುವುದರಿಂದ ಒಮ್ಮತದ ಆಯ್ಕೆ ಕಷ್ಟವಾಗಿದೆ. ಜಿಪಂ ಮಾಜಿ ಸದಸ್ಯ ಬಿ.ವಿ.ಶ್ಯಾಮೇಗೌಡ, ತಾಪಂ ಮಾಜಿ ಉಪಾಧ್ಯಕ್ಷ ನಲ್ಲೂರು ರಘುಪತಿರೆಡ್ಡಿ, ಪೆತ್ತಾಂಡ್ಲಹಳ್ಳಿ ಸೂರ್ಯನಾರಾಯಣಗೌಡ, ಕವತನಹಳ್ಳಿ ಮುನಿಶಾಮಿಗೌಡ, ಜಿಪಂ ಸದಸ್ಯ ಕೆ.ಆರ್.ಕಿಟ್ಟಪ್ಪ, ಆರ್‌ಎಂಸಿ ಉಪಾಧ್ಯಕ್ಷ ಸೊಣ್ಣೇಗೌಡ, ಸನ್ಯಾಸಪಲ್ಲಿ ರಾಜು, ನಾಗಮಂಗಲ ಶಂಕರಪ್ಪ, ಕುರುಡುಮಲೆ ಮಂಜುನಾಥ್ ಜೆಡಿಎಸ್‌ನಿಂದ ಆಯ್ಕೆ ಬಯಸಿರುವ ಆಕಾಂಕ್ಷಿಗಳು. ಇವರಲ್ಲಿ ಒಬ್ಬರನ್ನು ಆಯ್ಕೆಮಾಡಲು ತಾಲೂಕು ಜೆಡಿಎಸ್ ಅಧ್ಯಕ್ಷ ಅಲಂಗೂರು ಶಿವಣ್ಣ ಹಾಗೂ ಹಿರಿಯ ಮುಖಂಡ ಕೆ.ವಿ.ಶಂಕರಪ್ಪ ಇನ್ನಿತರರ ತಂಡ ರಚನೆ ಮಾಡಲಾಗಿದೆ.
ಕಾಂಗ್ರೆಸ್‌ನಲ್ಲಿ ಉತ್ತನೂರು ಶ್ರೀನಿವಾಸ್, ಆರ್.ರಾಜೇಂದ್ರಗೌಡ, ಕಲ್ಲುಪಲ್ಲಿ ಪ್ರಕಾಶ್ ಆಕಾಂಕ್ಷಿಗಳಾಗಿದ್ದು, ಒಂದೆರಡು ದಿನಗಳಲ್ಲಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದೆಂದು ತಾಲೂಕು ಕಾಂಗ್ರೆಸ್ ಅವಣೆ  ಅಧ್ಯಕ್ಷ ಜಿ.ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಕಮಲದಲ್ಲಿ ಮುಖಂಡರ ನಿರ್ಧಾರ, ಬಿಜೆಪಿಯಲ್ಲಿ ಈಗಾಗಲೇ ಪಕ್ಷದ ಬೆಂಬಲಿತ 15 ಡೇರಿ ಅಧ್ಯಕ್ಷರ ಸಭೆ ಕರೆಯಲಾಗಿದೆ. ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಸಿ.ಕೆ.ರಾಧವಲ್ಲಭಗೌಡರವರನ್ನು ಅಭ್ಯರ್ಧಿಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.