ಚಿಕ್ಕಬಳ್ಳಾಪುರ ಜಿಲ್ಲೆ: ಫಲಿತಾಂಶ ಕುಸಿತ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಮೇ 9
ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಒಟ್ಟು 14230 ವಿದ್ಯಾರ್ಥಿಗಳಲ್ಲಿ ಒಟ್ಟು 7847 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.55.14 ಫಲಿತಾಂಶದೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಕಳೆದ ವರ್ಷಕ್ಕಿಂತ ಹಿನ್ನಡೆಯನ್ನು ಅನುಭವಿಸಿ ಜಿಲ್ಲಾವಾರು 18 ನೇ ಸ್ಥಾನದಿಂದ 20 ನೇ ಸ್ಥಾನಕ್ಕೆ ಬಂದು ಬೀಳುವ ಮೂಲಕ ನಿರಾಶೆ ಮೂಡಿಸಿದೆ.
ವಿದ್ಯಾರ್ಥಿ ಜೀವನದಲ್ಲಿ ಮಹತ್ತರವಾದ ತಿರುವನ್ನು ನೀಡುವ ಘಟ್ಟ ದ್ವಿತೀಯ ಪಿಯುಸಿ. ಇಲ್ಲಿ ಹೆಚ್ಚಿನ ಫಲಿತಾಂಶ ಗಳಿಸುವುದರೊಂದಿಗೆ ಮುಂದಿನ ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಹೆಜ್ಜೆ ಹಾಕಲಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಜಿಲ್ಲಾವಾರು ಉತ್ತಮ ಸ್ಥಾನವನ್ನು ಪಡೆಯಲು ಮುಂದಾಗಬೇಕಿದ್ದ ಇಲ್ಲಿನ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದ ಈ ಹಿಂದಿನದಕ್ಕಿಂತ ಹೆಚ್ಚಳವಾಗಬೇಕಾಗಿದ್ದ ಫಲಿತಾಂಶ ಈ ಬಾರಿ ಕುಸಿದಿದೆ.
ಬಾಲಕಿಯರೇ ಮೇಲುಗೈ: ಎಂದಿನಂತೆ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪ್ರಮುಖವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರದ ಪ್ರದೇಶದ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಫಲಿತಾಂಶವನ್ನು ಪಡೆದಿರುವುದು ವಿಶೇಷವಾಗಿದೆ. ಜಿಲ್ಲೆಯಲ್ಲಿ ಒಟ್ಟು 14230ವಿದ್ಯಾರ್ಥಿಗಳಲ್ಲಿ 7847 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ(55.14) ಫಲಿತಾಂಶ ದಕ್ಕಿದೆ. ಇದರಲ್ಲಿ ಹೊಸದಾಗಿ ಪರೀಕ್ಷೆ ಬರೆದ 11037 ವಿದ್ಯಾರ್ಥಿಗಳಲ್ಲಿ ರಲ್ಲಿ 6971 (ಶೇ.63.16),723 ಖಾಸಗಿ ವಿದ್ಯಾರ್ಥಿಗಳಲ್ಲಿ 183 (ಶೇ.25.31),2470 ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 693 ಮಂದಿ ಉತ್ತೀರ್ಣರಾಗಿದ್ದಾರೆ.7770 ಬಾಲಕರಲ್ಲಿ 3972 (ಶೇ 51.12), 6460 ವಿದ್ಯಾರ್ಥಿ ನಿಯರಲ್ಲಿ 3875(ಶೇ.59.98) ಮಂದಿ ಉತ್ತೀರ್ಣರಾಗಿದ್ದಾರೆ.11309 ನಗರ ವ್ಯಾಪ್ತಿಯ ವಿದ್ಯಾರ್ಥಿಗಳಲ್ಲಿ 5923(ಶೇ.52.37), 6130 ಬಾಲಕರಲ್ಲಿ 2899 ಶೇ(47.29) ಮತ್ತು 5179 ವಿದ್ಯಾರ್ಥಿನಿಯರಲ್ಲಿ 3024 (ಶೇ.58.39) ಮತ್ತು ಗ್ರಾಮೀಣ ಭಾಗದ 2921 ವಿದ್ಯಾರ್ಥಿಗಳಲ್ಲಿ 1924 (ಶೇ.65.87), 2419 ಹೊಸಬರಲ್ಲಿ 1751 (ಶೇ.72.39), 1640 ಬಾಲಕರಲ್ಲಿ 1073 (ಶೇ.65.43) ಮತ್ತು 1281 ವಿದ್ಯಾರ್ಥಿನಿಯಲ್ಲಿ 851 ಮಂದಿ (ಶೇ.66.43)ಉತ್ತೀರ್ಣರಾಗಿದ್ದಾರೆ.
ಇನ್ನೂ ಕಲಾ ವಿಭಾಗದಲ್ಲಿ 5069 ವಿದ್ಯಾರ್ಥಿಗಳಲ್ಲಿ 2030 ಮಂದಿ (ಶೇ.40.05),3389 ಹೊಸ ವಿದ್ಯಾರ್ಥಿಗಳಲ್ಲಿ 1621 ಮಂದಿ (ಶೇ.47.83),454 ಖಾಸಗಿ ವಿದ್ಯಾರ್ಥಿಗಳಲ್ಲಿ 106(ಶೇ.24.35),1226 ಪುನಾರವರ್ತಿತ ವಿದ್ಯಾರ್ಥಿಗಳಲ್ಲಿ 303 (ಶೇ.24.71),2776 ಬಾಲಕರಲ್ಲಿ 946 (ಶೇ.34.08),2293 ವಿದ್ಯಾರ್ಥಿನಿಯರಲ್ಲಿ 1084 (ಶೇ.47.27) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 5046 ವಿದ್ಯಾರ್ಥಿಗಳಲ್ಲಿ 3331 ಮಂದಿ (ಶೇ.66.01),4193 ಹೊಸ ವಿದ್ಯಾರ್ಥಿಗಳಲ್ಲಿ 3063 ಮಂದಿ (ಶೇ.73.05),269 ಖಾಸಗೀ ವಿದ್ಯಾರ್ಥಿಗಳಲ್ಲಿ 77 (ಶೇ.28.62),584 ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 191 (ಶೇ.32.71),2802 ಬಾಲಕರಲ್ಲಿ 1730 (ಶೇ.61.61),2238 ವಿದ್ಯಾರ್ಥಿನಿಯರಲ್ಲಿ 1601 (ಶೇ.71.54) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 4115 ವಿದ್ಯಾರ್ಥಿಗಳಲ್ಲಿ 2486 ಮಂದಿ (ಶೇ.60.41), 3455 ಹೊಸ ವಿದ್ಯಾರ್ಥಿಗಳಲ್ಲಿ 2287 ಮಂದಿ (ಶೇ.66.19),660 ಪುನಾರವರ್ತಿತ ವಿದ್ಯಾರ್ಥಿಗಳಲ್ಲಿ 199(ಶೇ.30.15),2186 ಬಾಲಕರಲ್ಲಿ 1296 (ಶೇ.59.29),1929 ವಿದ್ಯಾರ್ಥಿನಿಯರಲ್ಲಿ 1190 (ಶೇ.61.69) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ 2013 ರಲ್ಲಿ ಒಟ್ಟು 15117 ವಿದ್ಯಾರ್ಥಿಗಳಲ್ಲಿ 8519 ಮಂದಿ (ಶೇ.56.36), 8047 ಬಾಲಕರಲ್ಲಿ 4258(ಶೇ.52.91) ಮತ್ತು 7070 ವಿದ್ಯಾರ್ಥಿನಿಯರಲ್ಲಿ 4261(ಶೇ.60.77) ಪಾಸಾಗಿದ್ದು ಗ್ರಾಮೀಣ ಭಾಗ ಶೇ.63.97 ರಷ್ಟು ಮತ್ತು ನಗರ ಪ್ರದೇಶದಲ್ಲಿ ಶೇ.54.36 ರಷ್ಟು ಫಲಿತಾಂಶ ಬಂದಿತ್ತು.
ಕನ್ನಡ ಇಳಿಕೆ: ಕನ್ನಡ ಮಾಧ್ಯಮಕ್ಕೆ ಸಂಬಂಧಪಟ್ಟಂತೆ ಒಟ್ಟು 6509 ವಿದ್ಯಾರ್ಥಿಗಳಲ್ಲಿ 2885 (ಶೇ.44) ವಿದ್ಯಾರ್ಥಿಗಳು, ನಗರ ವ್ಯಾಪ್ತಿಯಲ್ಲಿ 5043 ವಿದ್ಯಾರ್ಥಿಗಳಲ್ಲಿ 2093(ಶೇ.41.5) ಮತ್ತು 1466 ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ 792 (ಶೇ.54.02) ಮತ್ತು ಆಂಗ್ಲ ಮಾಧ್ಯಮಕ್ಕೆ ಸಂಬಂಧಪಟ್ಟಂತೆ ಒಟ್ಟು 7721 ವಿದ್ಯಾರ್ಥಿಗಳಲ್ಲಿ 4862 ವಿದ್ಯಾರ್ಥಿಗಳು (ಶೇ.64.27), 6266 ನಗರ ವ್ಯಾಪ್ತಿಯ ವಿದ್ಯಾರ್ಥಿಗಳಲ್ಲಿ 3830 (ಶೇ.61.12) ಮತ್ತು 1455 ಒಟ್ಟು 1132 ವಿದ್ಯಾರ್ಥಿಗಳು (ಶೇ.77.8) ಪಾಸಾಗಿದ್ದಾರೆ. ಪರಿಶಿಷ್ಟ ಜಾತಿ ಶೇ.44.79 ಮತ್ತು ಪರಿಶಿಷ್ಟ ಪಂಗಡ ಶೇ.46.5, ಸಾಮಾನ್ಯ ವರ್ಗ ಶೇ.56.88, 2ಎ ಶೇ.59.74, 2ಬಿ ಶೇ.50.53, 3ಎ ಶೇ.63.29, 3ಬಿ ಶೇ.65.71 ಮತ್ತು ಇತರೆ ವರ್ಗ ಶೇ.67.32 ಫಲಿತಾಂಶವನ್ನು ಪಡೆದುಕೊಂಡಿದೆ.
ಕೆಜಿಎಫ್ ಕ್ಷೇತ್ರಕ್ಕೆ ಮೊದಲ ಸ್ಥಾನ
ಕೆಜಿಎಫ್: ಸುಂದರಪಾಳ್ಯ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯು ಫಲಿತಾಂಶದಲ್ಲಿ ಶೇ.97ಗಳಿಸಿ ಕೆಜಿಎಫ್ ಕ್ಷೇತ್ರಕ್ಕೆ ಮೊದಲ ಸ್ಥಾನ ಪಡೆದುಕೊಂಡಿದೆ. ಕಳೆದ 2013ನೇ ಸಾಲಿನಲ್ಲಿ ಶೇ.99 ಪಡೆಯುವಲ್ಲಿ ಸುಂದರಪಾಳ್ಯ ಸರ್ಕಾರಿ ಕಾಲೇಜು ಜಿಲ್ಲೆಗೆ ಪ್ರಥಮ ಸ್ಥಾನವನ್ನು ಗಳಿಸಿತ್ತು. ಕಾಲೇಜಿನಲ್ಲಿ ಒಟ್ಟು 190 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 183 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 23 ಅತ್ಯುನ್ನತ ಶ್ರೇಣಿಯಲ್ಲಿ, ಪ್ರಥಮ ಶ್ರೇಣಿ 137, ದ್ವಿತೀಯ ಶ್ರೇಣಿಯಲ್ಲಿ 20 ಮತ್ತು ತೃತೀಯ ಶ್ರೇಣಿಯಲ್ಲಿ 3 ವಿದ್ಯಾರ್ಥಿಗಳು ಈ ಸಾಲಿನ ಪರೀಕ್ಷೆಯಲ್ಲಿ ಕಾಲೇಜಿಗೆ ಫಲಿತಾಂಶವನ್ನು ನೀಡಿದ್ದಾರೆ.
ಖಾಸಗಿ ಸಂಸ್ಥೆಗಳಕಡಿವಾಣಕ್ಕೆ ಸರ್ಕಾರ ವಿಫಲ: ಆರೋಪ
ಚಿಂತಾಮಣಿ: ಚಿಂತಾಮಣಿಯಲ್ಲಿ ಲಂಗು ಲಗಾಮು ಇಲ್ಲದೆ ಶಿಕ್ಷಣ ವ್ಯಾಪಾರೀಕರಣ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ ಹಾಕಲು ಶಿಕ್ಷಣ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಪೋಷಕರು ಹಾಗೂ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ನಗರದ ಹಲವು ಪ್ರತಿಷ್ಠಿತ ಶಾಲಾ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆಗಳು ನಡೆಯುತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿ ಪೋಷಕರಿಂದ ಸಾವಿರಾರು ರೂಪಾಯಿ ಡೊನೇಷನ್ವ್ಸೂಲಿಯಲ್ಲಿ ತೊಡಗಿವೆ. ದಾಖಲಾತಿ ಸಂಗ್ರಹಿಸಬೇಕಾದ ಶುಲ್ಕ, ಪಾಲಿಸಬೇಕಾದ ಮೀಸಲಾತಿ ನಿಯಮಗಳು, ಕುರಿತು ಸರ್ಕಾರ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಮೂಲಕ ಸುತ್ತೋಲೆ ಹೊರಡಿಸಿದ್ದರೂ ಶಿಕ್ಷಣ ಸಂಸ್ಥೆಗಳನ್ನು ಇದನ್ನು ಪಾಲಿಸುತ್ತಿಲ್ಲ ಎಂದು ಪೋಷಕರು ಮತ್ತು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಕೆಲವು ಶಿಕ್ಷಣ ಸಂಸ್ಥೆಗಳು ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಇಲ್ಲ ಸಲ್ಲದ ಆಸೆ ಆಮಿಷ ತೋರಿ, ಗುಪ್ತವಾಗಿ ಹೆಚ್ಚಿನ ಪ್ರಮಾಣದಲ್ಲಿ ಶುಲ್ಕವನ್ನು ವಸೂಲಿ ಮಾಡುತ್ತಿವೆ. ಇದರ ನಿಯಂತ್ರಣಕ್ಕೆ ಸ್ಥಳೀಯ ಹಲವು ಅಧಿಕಾರಿಗಳು ಮುಂದಾಗುತ್ತಿಲ್ಲ. ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಇನ್ನೊಂದೆಡೆ ಸರ್ಕಾರಿ ಕಾಲೇಜಿನಲ್ಲಿ ಕೆಲಸ ಮಾಡುವ ಅನೇಕ ಪ್ರಾಧ್ಯಾಪಕರು ತಮ್ಮದೇ ಸ್ವಂತ ಖಾಸಗಿ ಕಾಲೇಜು ಆರಂಭಿಸಿ ಇಲ್ಲವೇ ಪಾಲುದಾರರಾಗುತ್ತಿದ್ದಾರೆ. ಆ ಕಾಲೇಜುಗಳಲ್ಲಿ ಬೋಧನೆ ಮಾಡಿ, ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

