ಕೋಲಾರ

ರು. 8 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

Published On :

ದೊಡ್ಡಮಾಲೂರು-ಶ್ರಾವಂಡನಹಳ್ಳಿ ರಸ್ತೆಗೆ ಗುದ್ದಲಿ ಪೂಜೆ
ಮಧುಗಿರಿ: ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯಲ್ಲಿ 8 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಕೆ.ಎನ್. ರಾಜಣ್ಣ ಗುದ್ದಲಿ ಪೂಜೆ ನೆರವೇರಿಸಿದರು.
ದೊಡ್ಡಮಾಲೂರು-ಶ್ರಾವಂಡನಹಳ್ಳಿ ರಸ್ತೆಗೆ  1 ಕೋಟಿ ವೆಚ್ಚದ ಕಾಮಗಾರಿಯನ್ನು ಗುತ್ತಿಗೆದಾದಾರರು ಶೀಘ್ರ  ಗುಣ ಮಟ್ಟದ ರಸ್ತೆ ನಿರ್ಮಾಣ ಮಾಡಬೇಕು ಎಂದರು.
ತೆರಿಯೂರು-ಆಂಧ್ರ ಗಡಿಗೆ ರಸ್ತೆ ಅಗಲೀಕರಣ, ಡಾಂಬರೀಕರಣಕ್ಕೆ  5 ಕೋಟಿ, ಯಾಕಾರ್ಲಹಳ್ಳಿ -ಚಂದನದೂರು ರಸ್ತೆಗೆ 2 ಕೋಟಿ,  ಕಾಮಗಾರಿಗೆ ಚಾಲನೆ ನೀಡಿದ ರಾಜಣ್ಣ, ಚುನಾವಣೆ ವೇಳೆ ಈ ಹೋಬಳಿ ಜನರು ಹೆಚ್ಚು ಮತ ನೀಡಿದ್ದು, ಈ ಭಾಗದ ಜನರ ಮೇಲೆ ಹೆಚ್ಚು ಪ್ರೀತಿ, ವಿಶ್ವಾಸವಿದೆ ಎಂದರು.
ದೊಡ್ಡಮಾಲೂರಿನಲ್ಲಿ ಪಶುವೈದ್ಯ ಶಾಲೆ ತೆರಿಯೂರಿನಲ್ಲಿ 12 ಕೋಟಿ  ವೆಚ್ಚದ ವಿದ್ಯುತ್ ಉಪ ಸ್ಥಾವರ ಘಟಕ ಸ್ಥಾಪಿಸಿ ಸಚಿವ ಡಿ.ಕೆ. ಶಿವಕುಮಾರ ಕರೆಸಿ ಶಂಕುಸ್ಥಾಪನೆ ನೆರವೇರಿಸುವುದಾಗಿ ತಿಳಿಸಿದರು.
ತೆರಿಯೂರು  ಗ್ರಾಮಕ್ಕೆ  ನೀರು ಸಂಸ್ಕರಣ ಘಟಕ ಸ್ಥಾಪಿಸಿ ಶುದ್ಧ ಕುಡಿವ ನೀರು ಕೊಡಲು ಅಗತ್ಯ ಕ್ರಮ ಕೈಗೊಳ್ಳವುದಾಗಿ ತಿಳಿಸಿದರು.
ತಾಪಂ ಉಪಾಧ್ಯಕ್ಷ ಜಿ. ನರಸಿಂಹಯ್ಯ, ವಿಎಸ್‌ಎಸ್‌ಎನ್ ಅಧ್ಯಕ್ಷ ಸಂಜೀವಗೌಡ, ಜಿಪಂ ಸದಸ್ಯೆ ಶಾಂತಲ, ತಹಸೀಲ್ದಾರ್ ಕೆ. ರಮೇಶ್, ಇಇ ವಾಸುದೇವ್, ಡಿಸಿಸಿ ಬ್ಯಾಂಕ್ ಸೀತಾರಾಮು, ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಆಶಾ ಪ್ರಸನ್ನಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.