ಕೋಲಾರ

ಪೊಲೀಸ್ ಪೇದೆ ನೇಮಕಕ್ಕೆ ದೇಹದಾರ್ಢ್ಯ ಪರೀಕ್ಷೆ

Published On :

ಕೆಜಿಎಫ್: ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಖಾಲಿ ಇರುವ 46 ಸಿಪಿಸಿ ಮತ್ತು 11 ಮಹಿಳಾ ಪೇದೆಗಳಿಗೆ ಸಹಿಷ್ಣುತೆ ಮತ್ತು ದೇಹದಾರ್ಢ್ಯ ಪರೀಕ್ಷೆಯನ್ನು ಸೋಮವಾರ ಬೆಳಗ್ಗೆ ಉರಿಗಾಂ ವ್ಯಾಪ್ತಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿತ್ತು. ಜಿಲ್ಲಾ ವರಿಷ್ಠಾಧಿಕಾರಿ ಅಜಯ್ ಹಿಲೋರಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿಕೊಂಡಿದ್ದ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ದಾಖಲಾತಿಗಳೊಂದಿಗೆ ಹಾಜರಾಗಿ ದೇಹದಾರ್ಢ್ಯ  ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಪರೀಕ್ಷೆಗೆ ಮೊದಲದಿನವಾದ ಸೋಮವಾರ ಬೆಳಗ್ಗೆ ರಾಜ್ಯದ ವಿವಿಧ ತಾಲ್ಲೂಕುಗಳಿಂದ ವಿದ್ಯಾರ್ಥಿಗಳು ಮತ್ತು  ಅರ್ಹ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವೇಗದ ಓಟ, ಎತ್ತರದ ಜಿಗಗಿತ, ಲಾಂಗ್ ಜಂಪ್, ಎತ್ತರ ಮತ್ತು ಎದೆ ಅಳತೆ ಮುಂತಾದ ಪರೀಕ್ಷೆಗಳನ್ನು ಆಯೋಜಿಸಲಾಗಿತ್ತು. ಈ ವೇಳೆ ಕೆಜಿಎಫ್ ಪೊಲೀಸ್ ಇಲಾಖೆ ವತಿಯಿಂದ ಅಭ್ಯರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಈ ವೇಳೆ ಡಿವೈಎಸ್ಪಿ ಎ.ಕೆ.ವಿವೇಕಾನಂದ ಸೇರಿದಂತೆ ವೃತ್ತ ನಿರೀಕ್ಷಕರು ಹಾಗೂ ಪಿಎಸ್‌ಐಗಳು ಸಿಬ್ಬಂದಿ ಹಾಜರಿದ್ದರು.
ನಿಸ್ವಾರ್ಥ ಸೇವೆಯಿಂದ ನೆಮ್ಮದಿ: ಶಾಸಕ
ಮುಳಬಾಗಲು: ನಿಸ್ವಾರ್ಥ ಸೇವೆಯಿಂದ ದೇವತಾ ಕಾರ್ಯ ಆಚರಿಸುವುದರಿಂದ ನೆಮ್ಮದಿ  ಸಿಗುತ್ತದೆಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು. ತಾಲೂಕಿನ ಅವಣೆ ಹೋಬಳಿ ಮಿಣಜೇನಹಳ್ಳಿ ಗ್ರಾಮದಲ್ಲಿ ಸೋಮವಾರ ಪ್ರಸನ್ನ ಚೌಡೇಶ್ವರಿ ದೇವಾಲಯದ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, 'ಸಮಾನ ಮನಸ್ಕರಿಂದ ದೇವಾಲಯ ಜಿರ್ಣೋದ್ಧಾರಗೊಂಡಿದೆ ಎಂದರು. ಆದಿಚುಂಚುನಗಿರಿ ಶಾಖಾ ಮಠದ ಶ್ರೀಮಂಗಳಾನಂದಸ್ವಾಮೀಜಿ ಆರ್ಶಿರ್ವಾಚನ ಮಾಡಿದರು. ದೇವಾಲಯ ಸಂಚಾಲಕ ಬಂಗಾರುಪೇಟೆ ತಾಲ್ಲೂಕು ಕಂಗಾನಲ್ಲೂರಿನ ರಾಮಕೃಷ್ಣಪ್ಪ ಸೇರಿ ಅನೇಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.