ಕೋಲಾರ

ಗುಡಿಬಂಡೆ ಪಪಂ ಸಭೆ: ಹಲವು ಸಮಸ್ಯೆಗಳ ಚರ್ಚೆ

Published On :

ವಾರ್ಡಿನ ಸಮಸ್ಯೆಗಳ ಗಮನ ಸೆಳೆದ ಸದಸ್ಯರು
ಗುಡಿಬಂಡೆ: ಪಪಂ ಅಧ್ಯಕ್ಷ ರಿಯಾಜ್ ಪಾಷ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಟ್ಟಣದ ಅಭಿವೃದ್ಧಿ ಹಾಗೂ ಸಮಸ್ಯೆಗಳ ನಿವಾರಣೆ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ದ್ವಾರಕಿನಾಥ್ ನಾಯ್ಡು, ತಮ್ಮ ವಾರ್ಡ್‌ನಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಿಂದ ಜನರಿಗೆ ತೊಂದರೆಯಾಗುತ್ತಿದೆ. ಅದನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು. ಪಟ್ಟಣದಲ್ಲಿ ಹಾದುಹೋಗಿರುವ ರಾಜಾ ಕಾಲುವೆಯಲ್ಲಿ ಹೂಳು ತುಂಬಿದ್ದು, ತೆಗೆಯಬೇಕು. ರಿಕ್ರಿಯೇಷನ್ ಕ್ಲಬ್‌ಗೆ ಸಂಬಂದಪಟ್ಟ ಸ್ಥಳ ಸಾರ್ವಜನಿಕ ಆಸ್ತಿಯಾಗಿದ್ದು, ಅದನ್ನು ಕೂಡಲೇ ಪಪಂ ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಪಪಂ ಉಪಾಧ್ಯಕ್ಷ ರಾಜಣ್ಣ ಮಾತನಾಡಿ, 'ತಮ್ಮ ವಾರ್ಡಿನಲ್ಲಿ ನೀರಿನ ಕೊರತೆಯಿದ್ದು, ಕೊಳವೆ ಬಾವಿ ಕೊರೆಸಲು ಕ್ರಮಕೈಗೊಳ್ಳಬೇಕು. ಬೀದಿ ದೀಪಗಳ ವ್ಯವಸ್ಥೆ ಮಾಡಬೇಕು' ಎಂದು ಹೇಳಿದರು. ರಮೇಶ್ ಬಾಬು ಮಾತನಾಡಿ,  ಎಸ್‌ಸಿ ಎಸ್‌ಟಿ ಕಾಲೋನಿಗೆ ಪ್ರತ್ಯೇಕ ಕೊಳವೆ ಬಾವಿ, ಚರಂಡಿ ಮತ್ತು ಸಿಮೆಂಟ್ ರಸ್ತೆ ನಿರ್ಮಾಣ, ಸಮುದಾಯಕ್ಕೆ ಸ್ಮಶಾನ ಭೂಮಿ ಮುಂತಾದ ಸೌಲಭ್ಯ ನೀಡಬೇಕು ಎಂದು ಸಭೆಗೆ ತಿಳಿಸಿದು.  ಉಳಿದಂತೆ ಸಭೆಯಲ್ಲಿ ಸರ್ಕಾರಿ ಸುತ್ತೋಲೆ, ಆಡಿಟ್ ವರದಿ, ಜಮಾ-ಖರ್ಚಿನ ವಿವರಗಳನ್ನು ಓದಲಾಯಿತು. ನಂತರ ಬೀದಿ ದೀಪಗಳು, ತಾಜ್ಯ ಸಂಸ್ಕರಣೆ, ಪಿಜಿಆರ್ ಘಟಕ ನಿರ್ವಹಣೆ, ಒಳಚರಂಡಿ ಯೋಜನೆ ಅನುಷ್ಠಾನ ಸೇರಿದಂತೆ ಮೊದಲಾದ ವಿಷಯಗಳ ಬಗ್ಗೆ ಸದೀರ್ಘ ಚರ್ಚಿಸಲಾಯಿತು. ಸಭೆಯಲ್ಲಿ ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ, ಸದಸ್ಯರಾದ ಚಂದ್ರಶೇಖರನಾಯ್ಡು, ಲಕ್ಷ್ಮೀಕಾಂತಮ್ಮ, ಸುಮಿತ್ರಮ್ಮ, ರಮೇಶ್‌ಬಾಬು, ಅಪ್ಸರ್, ಲಕ್ಷ್ಮೀ, ವೆಂಕಟಲಕ್ಷ್ಮಮ್ಮ, ಸಿಬ್ಬಂದಿ ತ್ಯಾಗರಾಜ್, ಜಯರಾಮ್, ಮುನಿಕೃಷ್ಣ, ಶಿವಣ್ಣ ಸೇರಿದಂತೆ ಹಲವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.