ದ್ರಾಕ್ಷಿ ಬೆಳೆ ನಾಶ, ಪರಿಹಾರಕ್ಕೆ ಯತ್ನ: ಶಾಸಕ
ಚಿಕ್ಕಬಳ್ಳಾಪುರ: ತಾಲೂಕಿನಲ್ಲಿ ಬಿದ್ದ ಅಲಿಕಲ್ಲು ಮಳೆಗೆ ಸಮೃದ್ಧವಾಗಿ ಬೆಳೆದಿದ್ದ ದ್ರಾಕ್ಷಿ ಬೆಳೆ ನಾಶವಾಗಿರುವುದರಿಂದ ರೈತರಿಗೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವುದಾಗಿ ಶಾಸಕ ಕೆ.ಸುಧಾಕರ್ ತಿಳಿಸಿದರು.
ತಾಲೂಕಿನ ಕಣಿತಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಅಲಿಕಲ್ಲು ಮಳೆಯಿಂದ ನಾಶವಾಗಿರುವ ದ್ರಾಕ್ಷಿ ಬೆಳೆಯನ್ನು ಪರಿಶೀಲಿಸಿದ ಅವರು, ದ್ರಾಕ್ಷಿ ಬೆಳೆ ನಾಶಕ್ಕೆ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ಕಣಿತಹಳ್ಳಿ ಗ್ರಾಮದಲ್ಲಿ ನೂರು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ದ್ರಾಕ್ಷಿ ಹಾಗೂ ತರಕಾರಿ ಬೆಳೆಗಳು ಅಲಿಕಲ್ಲು ಮಳೆಗೆ ನಾಶವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿಯನ್ನು ಪಡೆದುಕೊಂಡಿದ್ದು ಈಗಾಗಲೇ ಜಿಲ್ಲಾಧಿಕಾರಿಯವರ ಗಮನ ಸೆಳೆದಿದ್ದೇನೆ ಎಂದರು.
ಬೆಳೆ ನಾಶದಿಂದ ನಷ್ಟವನ್ನು ಅನುಭವಿಸಿರುವ ಪ್ರತಿ ರೈತನಿಗೆ ಸರ್ಕಾರದಿಂದ ಪ್ರತಿ ಒಂದು ಹೆಕ್ಟೇರ್‌ಗೆ ರು.12 ಸಾವಿರ ರುಪಾಯಿ ಪರಿಹಾರ ದೊರೆಯುತ್ತದೆ. ರೈತ ಪ್ರತಿ ಒಂದು ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ಬೆಳೆಯಬೇಕಾದರೆ ರು.1ಲಕ್ಷದವರೆಗೆ ಖರ್ಚಾಗಲಿದ್ದು, ಸರ್ಕಾರ ನೀಡುವ ಪರಿಹಾರ ಕಡಿಮೆಯಾಗಿದೆ.ಪ್ರಸ್ತುತ ಸರ್ಕಾರದಿಂದ ವಿತರಿಸುವ ಪರಿಹಾರ ಹಣವನ್ನು ಪಡೆದುಕೊಳ್ಳಲು ರೈತರು ಪಡೆದುಕೊಳ್ಳಬೇಕೆಂದ ಅವರು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಗೆ ರೈತರ ನಿಯೋಗ ಕರೆದೊಯ್ದು ಹೆಚ್ಚಿನ ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಗುವುದು ಎಂದರು.
ಮಹಾರಾಷ್ಟ್ರದಲ್ಲಿ ನಿಗದಿ ಪಡಿಸಿರುವಂತೆ ರೈತರಿಗೆ ಬೆಳೆ ನಷ್ಟಕ್ಕೆ ರು. 50 ಸಾವಿರ ಪರಿಹಾರ ನೀಡುವಂತೆ, ನಮ್ಮಲ್ಲೂ ನೀಡಲು ಸರ್ಕಾರ ಮುಂದಾಗುವಂತೆ ಒತ್ತಾಯಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ತಹಸೀಲ್ದಾರ್ ಜಗದೀಶ್, ಸಹಾಯಕ ಕೃಷಿ ನಿರ್ದೇಶಕ ರಾಮು, ತೋಟಗಾರಿಕ ಇಲಾಖೆ ಸಹಾಯಕ ನಿರ್ದೇಶಕ ಮುನೇಗೌಡ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಇಲ್ಲಿ ಇಕ್ಕಟ್ಟಿನಲ್ಲೇ ಓಡಾಡಬೇಕು..!
ಟೇಕಲ್: ಇದು ಟೇಕಲ್ ತೊರಲಕ್ಕಿ ರಸ್ತೆಯ ಟೇಕಲ್ ಸಮೀಪದ ಪ್ರಮುಖ ರಸ್ತೆಯ ತಿರುವು ಕತೆ. ಈ ರಸ್ತೆಯ ತಿರುವು ಸ್ಥಳ ಚಿಕ್ಕದಾಗಿದ್ದು, ರಸ್ತೆಗೆ ಕಾಂಕ್ರಿಟ್ ಹಾಕಿ ಮೋರಿಯನ್ನು ಅಗಲ ಮಾಡದೆ ಇರುವ ಕಾರಣ, ಇಕ್ಕಟ್ಟಿನ ಜಾಗದಲ್ಲೇ ವಾಹನಗಳು ಓಡಾಡುವ ಸ್ಥಿತಿ ಉಂಟಾಗಿದೆ.
ಮತ್ತೊಂದೆಡೆ ರಸ್ತೆ ತಿರುವಿನ ಬಲಭಾಗದಲ್ಲಿ ವಿದ್ಯುತ್ ಹಾದು ಹೋಗುವ ಟ್ರಾನ್ಸ್ ಫಾರ್ಮರ್ ಇದ್ದು ಓಡಾಡುವ ವಾಹನಗಳು ಸ್ವಲ್ಪ ಆಯ ತಪ್ಪಿದರೂ, ವಿದ್ಯುತ್ ಅವಘಡ ಉಂಟಾಗುವುದರಲ್ಲಿ ಸಂಶಯವೇ ಇಲ್ಲ. ಟೇಕಲ್ ತೊರಲಕ್ಕಿ ರಸ್ತೆಯು ಬಹಳ ವರ್ಷಗಳಿಂದ ಡಾಂಬರೀಕರಣ ಕಾಣದೆ, ನನೆಗುದಿಗೆ ಬಿದ್ದಿತ್ತು. ಇದೀಗ ಉತ್ತಮ ರಸ್ತೆಯಾಗಿದ್ದು ಬಹಳ ದಿನಗಳಿಂದ ಈ ಪ್ರಮುಖವಾದ ತಿರುವು ಮೋರಿಯನ್ನು ಮತ್ತಷ್ಟು ಅಗಲ ಮಾಡ ಬೇಕಾಗಿತ್ತು. ಆದರೆ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಈ ರೀತಿಯಾದ ಕಾಮಗಾರಿಯಾಗಿದ್ದು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಯೇ ಎಂಬುದು ಪಾದಚಾರಿಗಳ ಪ್ರಶ್ನೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

