ಕೋಲಾರ

ಸಮಾಜ ಕಲ್ಯಾಣ ಇಲಾಖೆ ಅವ್ಯವಹಾರ ಸಿಒಡಿಗೆ: ಡಿಸಿ

Published On :

ಕೋಲಾರ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಸ್‌ಡಿಸಿ ನಾರಾಯಣಸ್ವಾಮಿ ಎಸಗಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಾಗಿ ಸಿಒಡಿಗೆ ವಹಿಸಲು ಚಿಂತನೆ ನಡೆಸಿದೆ ಎಂದು ಡಿಸಿ ಡಿ.ಕೆ.ರವಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಗರಣವು ಮೇಲ್ನೋಟಕ್ಕೆ ರು.2.33 ಕೋಟಿಯಾಗಿದೆ. ಇದೇ ರೀತಿ ಈ ಹಿಂದೆಯೂ ಹಲವಾರು ಹಗರಣಗಳೂ ನಡೆದಿದ್ದು, ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ವಂಚಿಸಿರುವುದರಿಂದ ಇಲಾಖೆಯಲ್ಲಿನ ಎಲ್ಲ ಹಗರಣಗಳನ್ನು ಸಿಒಡಿಗೆ ವಹಿಸುವುದು ಸೂಕ್ತವೆನ್ನಿಸಿದೆ ಎಂದರು. ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಆರೋಪಿ ನಾರಾಯಣಸ್ವಾಮಿ, ಕಾಮಗಾರಿಗಳ ಆದೇಶ ಪತ್ರಗಳನ್ನು ಗುತ್ತಿಗೆದಾರರು ತಂದು ಕೊಟ್ಟರು ಎಂದು ಹೇಳುತ್ತಿದ್ದಾರೆ. ಆದರೆ, ಗುತ್ತಿಗೆದಾರರ ಹೆಸರನ್ನು ಮಾತ್ರ ಬಹಿರಂಗ ಪಡಿಸುತ್ತಿಲ್ಲವೆಂದರು. ಈಗಾಗಲೇ ನಾರಾಯಣಸ್ವಾಮಿ ರು.15 ಲಕ್ಷ ಬಿಡುಗಡೆ ಮಾಡಿದ್ದು ಈ ಹಗರಣ ಮೇಲ್ನೋಟಕ್ಕೆ ರು. 2.33 ಇದ್ದರೂ ಇನ್ನೂ ಹೆಚ್ಚು ಅವ್ಯವಹಾರ ನಡೆದಿರಬಹುದು ಎಂದು  ಶಂಕಿಸಿದರು. ಹಗರಣಗಳ ಹಿಂದೆ ದೊಡ್ಡ ಜಾಲವೇ ಇರಬಹುದಾಗಿದ್ದು ಕೆಲವು ಪ್ರಭಾವಿತ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಈ ಪ್ರಕರಣದಲ್ಲಿ ಶಾಮೀಲಾಗಿರುವ ಸಂಭವವಿದೆ ಎಂದರು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ಅಲ್ಪ ಸಂಖ್ಯಾತರ ಇಲಾಖೆ, ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮ ಈ ಮೂರು ಇಲಾಖೆಗಳಲ್ಲಿ ಹೆಚ್ಚಾಗಿ ಹಗರಣಗಳಿಗೆ ಅವಕಾಶವಿದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡಿ ಬೆಳೆದಿರುವ ನನಗೆ ವಿದ್ಯಾರ್ಥಿ ನಿಲಯದಲ್ಲಿ ನಡೆಯಲಿರುವ ಅವ್ಯವಹಾರ, ದುರ್ಬಳಕೆ ಎಲ್ಲವೂ ಚೆನ್ನಾಗಿ ತಿಳಿದಿದೆ. ಕೆಲವು ಗುತ್ತಿಗೆದಾರರು ನಡೆಸುತ್ತಿದ್ದ ದಂಧೆಗಳಿಗೆ ಕಡಿವಾಣ ಹಾಕಿದೆ. ಏನಾದರೂ ವಂಚನೆ ಪ್ರಕರಣ ತಿಳಿದು ಬಂದಲ್ಲಿ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಎಸ್‌ಇಪಿ, ಎಸ್‌ಡಿಪಿ ಯೋಜನೆಗಳಲ್ಲಿ 6 ಕ್ಷೇತ್ರ ಸೇರಿದಂತೆ  ಇಲಾಖೆಯಲ್ಲಿ ಕೋಟ್ಯಂತರ ರುಪಾಯಿ ಇದೆ. ಜನಪ್ರತಿನಿಧಿಗಳ ಶಿಫಾರಸು ಮೇರೆಗೆ ಕೆಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಆದರೆ ಮೊನ್ನೆ ನಡೆದಿರುವ ಹಗರಣವು ಹೆಚ್ಚುವರಿಯಾಗಿ ಮೂಲಭೂತ ಸೌಲಭ್ಯಗಳ ಕಾಮಗಾರಿಗೆ ಮಂಜೂರು ಮಾಡಿರುವ ಪ್ರಕರಣವಾಗಿದೆ ಇದರಲ್ಲಿ ಆಯುಕ್ತರ ಪತ್ರವನ್ನೇ ಪೋರ್ಜರಿ ಮಾಡಲಾಗಿದೆ ಎಂದರು ಅಚ್ಚರಿಗೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.