ನಮೋ ಮುಂದೆ ನಿರುದ್ಯೋಗ ನೀಗುವ ಸವಾಲು: ಮೊಯ್ಲಿ
ಬಾಗೇಪಲ್ಲಿ: ನರೇಂದ್ರಮೋದಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣದಿಂದಲೇ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಅವರ ಮನೆಯಿಂದ ವಿಮಾನ ನಿಲ್ದಾಣದವರೆಗೂ ಸುರಂಗ ಮಾರ್ಗ ನಿರ್ಮಾಣಕ್ಕೆ ಮುಂದಾಗುವ ಮೂಲಕ ಇಡೀ ವಿಶ್ವದಲ್ಲಿಯೇ ಅತ್ಯಂತ ದುಬಾರಿ ಪ್ರಧಾನ ಮಂತ್ರಿ ಎನಿಸಿಕೊಳ್ಳಲು ಹೊರಟಂತಿದೆ ಎಂದು ಚಿಕ್ಕಬಳ್ಳಾಪುರ ಸಂಸದ ಎಂ.ವೀರಪ್ಪಮೊಯ್ಲಿ ಲೇವಡಿ ಮಾಡಿದರು.
ಪಟ್ಟಣದ ರಾಮಕೃಷ್ಣ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಿರುದ್ಯೋಗ ಯುವಕರಿಗೆ ಹೆಚ್ಚಿಗೆ ಉದ್ಯೋಗ ಸೃಷ್ಟಿಬೇಕಾದ ಜವಾಬ್ದಾರಿ ಮೋದಿರವರ ಮೇಲಿದೆ. ಆದರೆ, ದೇಶದಲ್ಲಿ ಮತೀಯ ಗಲಭೆಗಳನ್ನು ಉಲ್ಬಣ ಮಾಡಲು ವಿವಿಧ ರೀತಿಯ ಕಾನೂನು ಜಾರಿಗೆ ತರಲು ಹಾಗೂ ಬದಲಾವಣೆ ಮಾಡಲು ಹೊರಟಿದ್ದಾರೆ ಎಂದರು.ಬಿರುಗಾಳಿಯಲ್ಲೂ ಗೆಲ್ಲಿಸಿದ್ದಾರೆ: ಮೋದಿ ಸರ್ಕಾರ ಎದುರಿಸಲು ಕಾಂಗ್ರೆಸ್ನ 44 ಸಂಸದರು ಸಾಕು. ದೇಶದಲ್ಲಿ ಮೋದಿ ಅಲೆ, ಸುನಾಮಿ, ಬಿರುಗಾಳಿಯಲ್ಲಿಯೂ ಕೇಂದ್ರದಲ್ಲಿ ಸಚಿವರಾಗಿದ್ದ 70 ಮಂದಿಯ ಪೈಕಿ ಗೆದ್ದವರು ಕೇವಲ 6 ಮಂದಿ ಮಾತ್ರ. ಎಂದರು.
ಶಾಸಕ ಸುಬ್ಬಾರೆಡ್ಡಿ ಮಾತನಾಡಿ, ವೀರಪ್ಪಮೊಯ್ಲಿ ಕೇಂದ್ರದಲ್ಲಿ ಸಚಿವರಾಗಿದ್ದ ಸಮಯದಲ್ಲಿ ಕ್ಷೇತ್ರಕ್ಕೆ ಕೋಟ್ಯಂತರ ರುಪಾಯಿ ಅನುದಾನ ತಂದಿದ್ದಾರೆ. ಸದುಪಯೋಗ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

