ಕೋಲಾರ

ರೈತರ ಅನುಕೂಲಕ್ಕಾಗಿ ಕೆ-ಕಿಸಾನ್ ಯೋಜನೆ

Published On :

ಮಾಲೂರು: ರೈತರ ಅನುಕೂಲಕ್ಕಾಗಿ ಕೆ-ಕಿಸಾನ್ ಯೋಜನೆಯನ್ನು ಜಾರಿಗೆ ತಂದಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳಿ ಎಂದು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕಿ ಭವ್ಯರಾಣಿ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಕಸಬಾ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಕೆ-ಕಿಸಾನ್ ಹಾಗೂ ಎಐಎಸ್‌ಎಸ್ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ.ಈ ಯೋಜನೆಯಡಿ ಮೊದಲಿಗೆ ಕಸಬಾ ಹೋಬಳಿಯ ಎಲ್ಲಾ ರೈತರ ಮಾಹಿತಿಯನ್ನು ಸಂಗ್ರಹಿಸಿ ಗಣಕೀಕರಣ ಮಾಡಲಾಗುತ್ತದೆ.ಇನ್ನೂ ಮುಂದೆ ಈ ಮಾಹಿತಿಯನ್ನು ಅಧರಿಸಿ ರೈತರಿಗೆ ಕೃಷಿ ಇಲಾಖೆಯಿಂದ ದೂರೆಯುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು. ಈ ಯೋಜನೆಯಿಂದ ಎಲ್ಲಾ ರೈತರ ಸಮಗ್ರ ಮಾಹಿತಿ ಒಂದೇ ಕಡೆ  ಲಭ್ಯವಾಗುವುದರಿಂದ ರೈತರು ಪದೇ ಪದೇ ದಾಖಲೆಗಳನ್ನು ಒದಗಿಸುವ ಅವಶ್ಯಕತೆ ಬರುವುದಿಲ್ಲ ಎಂದರು.  ರೈತರು ಖರೀದಿಸಿದ ಪರಿಕರಗಳಿಗೆ ಗಣಕೀಕರಣ ನಗದು ಬಿಲ್ಲು ನೀಡುವ ಸೌಲಭ್ಯ ಈ ಯೋಜನೆಯಡಿ ಸಿಗಲಿದೆ ಎಂದರು.ಕುಟುಂಬದ ಹೆಚ್ಚುವರಿ ಸದಸ್ಯರ ನೋಂದಣಿ ಅವಕಾಶ ಇರುವುದರಿಂದ ಪರಿಕರಗಳನ್ನು ಪಡೆಯುವುದು ಸುಲಭವಾಗಲಿದೆ ಎಂದ ಕೃಷಿ ಅಧಿಕಾರಿಗಳು ಕೃಷಿ ಭೂಮಿಯ ಸರಿಯಾದ ಮಾಹಿತಿ ದೂರೆತು ಮುಂದಿನ ಯೋಜನೆ ರೂಪಿಸಲು ಸಹಕಾರಿಯಾಗಲಿದೆ ಎಂದರು.ಈ ಯೋಜನೆಯ ಫಲ ಸಿಗಬೇಕಾದರೆ ರೈತರು ತಾವೂ ಹೂಂದಿರುವ ಜಮೀನನ ಎಲ್ಲಾ ಸರ್ವೆ ನಂಬರ್ ಗಳ ಪಹಣಿಯ ಜೆರಾಕ್ಸ್ ಪ್ರತಿ, ಬ್ಯಾಂಕ್ ಖಾತೆ, ಪಾಸ್ ಬುಕ್‌ನ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಚುನಾವಣಾ ಗುರುತಿನ ಚೀಟಿ, ನಮೂನೆಯ ಮಾಹಿತಿ ನೀಡಬೇಕು ಎಂದರು.
ಈ ಯೋಜನೆಯಡಿ ನೋಂದಣಿಯಾಗದೇ ಇಲಾಖೆಯಿಂದ ಯೂವೂದೇ ಸೌಲಭ್ಯ ಒದಗಿಸಲು ಬರುವುದಿಲ್ಲ.ರೈತರ ನೋಂದಣಿ ಕೆಲಸಕ್ಕಾಗಿ ಮತ್ತು ಅಗತ್ಯ ದಾಖಲೆಗಳನ್ನು ಪಡೆಯಲು ಭೂಚೇತನಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ರೈತ ಅನುವುಗಾರರನ್ನು ನಿಯೋಜಿಸಲಾಗಿದ್ದು,ಅವರೂಂದಿಗೆ ಸಹಕರಿಸಿ ಅಗತ್ಯ ಮಾಹಿತಿ ಮತ್ತು ದಾಖಲೆಗಳ ಜೆರಾಕ್ಸ್ ಪ್ರತಿ ನೀಡಬೇಕಾಗಿ ಕೋರಿದ್ದಾರೆ. ಕೃಷಿ ಅಧಿಕಾರಿ ಮುನಿರಾಜು ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.