'ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ'
ಪಾಂಡವಪುರ: ತಾಲೂಕಿನ ಬಸ್ತಿಹಳ್ಳಿ, ಗಿರಿಯಾರಹಳ್ಳಿ, ಅಂತನಹಳ್ಳಿ, ಬಿಂಡಹಳ್ಳಿ ಹಾಗೂ ಬನ್ನಂಗಾಡಿ, ಕೆಂಪೇಗೌಡನಕೊಪ್ಪಲು ಗ್ರಾಮಗಳಲ್ಲಿ ಪರಿಶಿಷ್ಟ ಕಾಲೋನಿಗೆ 1.15 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಅಭಿವೃದ್ಧಿ, ಕಾಂಕ್ರೀಟ್, ಡ್ರೈನೇಜ್, ಕಾಮಗಾರಿಗೆ ಶಾಸಕ ಸಿ.ಎಸ್. ಪುಟ್ಟರಾಜು ಭೂಮಿ ಪೂಜೆ ನೇರವೇರಿಸಿದರು.
ಚಿನಕುರಳಿ ಹೇಮಾವತಿ ಉಪವಿಭಾಗ 9 ಕಾವೇರಿ ನೀರಾವರಿ ಇಲಾಖೆ ವತಿಯಿಂದ ಎಸ್ಸಿಪಿ ಯೋಜನೆಯಡಿ ಹಾಗೂ ಲೋಕೋಪಯೋಗಿ ಇಲಾಖೆ ವತಿಯಿಂದ ಮೇಲ್ಕಂಡ ಗ್ರಾಮಗಳಾದ ಬಸ್ತಿಹಳ್ಳಿ -40 ಲಕ್ಷ, ಗಿರಿಯಾರಹಳ್ಳಿ 23 ಲಕ್ಷ, ಅಂತನಹಳ್ಳಿ 30 ಲಕ್ಷ, ಬಿಂಡಹಳ್ಳಿ 12 ಲಕ್ಷ, ಬನ್ನಂಗಾಡಿ 5 ಲಕ್ಷ, ಕೆಂಪೇಗೌಡಲಕೊಪ್ಪಲು ಪ್ರಧಾನಮಂತ್ರಿ ಯೋಜನೆಯಡಿ ರಸ್ತೆ ಅಭಿವೃದ್ಧಿಗೆ 5 ಲಕ್ಷ ಹಾಗೂ ಇತರೆ ವಿವಿಧ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಈ ಬಡವಾಣೆಗಳಲ್ಲಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಅಭಿವೃದ್ಧಿಗೆ ತೀವ್ರ ನಿರ್ಲಕ್ಷ್ಯ ವಹಿಸಲಾಗಿತ್ತು. ಇದರಿಂದ ಕಾಲೋನಿಯಲ್ಲಿ ಓಡಾಡಲು ಜನರಿಗೆ ತುಂಬ ತೊಂದರೆಯಾಗುತ್ತಿತ್ತು. ಗ್ರಾಮೀಣ ಭಾಗದ ಜನತೆಗೆ ಪ್ರಮುಖವಾಗಿ ಮೂಲ ಸೌಕರ್ಯ ಒದಗಿಸಲು ಹಲವಾರು ಯೋಜನೆಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡಿ ಇದನ್ನು ಸಮರ್ಪಕ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅದ್ದರಿಂದ ಗ್ರಾಮೀಣ ಜನರು ಕಾಮಗಾರಿ ಗುಣಮಟ್ಟದ್ದಾಗಿರುವಂತೆ ಎಚ್ಚರ ವಹಿಸಬೇಕೆಂದು ಮನವಿ ಮಾಡಿದರು. ಪ್ರಸ್ತುತ ಮಳೆ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಆದ್ಯತೆ ಮೇರೆಗೆ ಕುಡಿಯುವ ನೀರನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಇದೇ ಸಂದರ್ಭ ಗ್ರಾಪಂ ಅಧ್ಯಕ್ಷೆ ದೇವಮ್ಮ, ಮಾಜಿ ತಾಪಂ ಅಧ್ಯಕ್ಷ ಬಿ.ಡಿ. ಹುಚ್ಚೇಗೌಡ, ಮಾಜಿ ಸದಸ್ಯ ಶ್ರೀನಿವಾಸ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಕುಬೇರ್, ಗ್ರಾಪಂ ಸದಸ್ಯರಾದ ಲೋಕೇಶ್, ಚಂದ್ರಮ್ಮ, ಮುಖಂಡರಾದ ನಂಜಪ್ಪ, ಬೋರಪ್ಪ, ನಾಗರಾಜು, ಶಿವಸ್ವಾಮಿ, ಗುತ್ತಿಗೆದಾರರಾದ ಕಾಳೇಗೌಡ, ಲವಕುಮಾರ್, ಇ.ಇ. ಗಿರೀಶ್, ಎಇಇ ಅನಂತಪದ್ಮನಾಭ, ಸಹಾಯಕ ಎಂಜಿನಿಯರ್ ಸಿ.ಟಿ. ಸುರೇಶ್, ಉಮೇಶ್, ಪುನೀತ್, ನಿವೃತ್ತ ಶಿಕ್ಷಕ ಶಿವಯ್ಯ ಹಾಗೂ ಗ್ರಾಮದ ಯಜಮಾನರು ಉಪಸ್ಥಿತರಿದ್ದರು.
ಇದೇ ಸಂದರ್ಭ ಬಸ್ತಿಹಳ್ಳಿ ಗ್ರಾಮದಲ್ಲಿ ಹಿರಿಯರಿಗೆ ಮಾಶಾಸನ ಪತ್ರವನ್ನು ಶಾಸಕ ಸಿ.ಎಸ್. ಪುಟ್ಟರಾಜು ವಿತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

