ನಂಜನಗೂಡು ಪುರಸಭೆ: 129 ಮಂದಿ ಕಣದಲ್ಲಿ
ನಂಜನಗೂಡು: ಮಾ.7 ರಂದು ನಡೆಯುವ ಪುರಸಭಾ ಚುನಾವಣೆಗೆ ಕಣದಲ್ಲಿ ಅಂತಿಮವಾಗಿ 129 ಮಂದಿ ಉಳಿದಿದ್ದಾರೆ. ನಾಮಪತ್ರ ವಾಪಾಸ್ ಪಡೆಯಲು ಕಡೆಯ ದಿನವಾದ ಬುಧವಾರ 8 ಮಂದಿ ತಮ್ಮ ನಾಮಪತ್ರ ವಾಪಸ್ ಪಡೆದರು. ಮಾಜಿ ಪುರಸಭಾ ಸದಸ್ಯೆ ಜೆಡಿಎಸ್ನ ಅಲೀಂ ಅಬಿ, ಸಿದ್ದರಾಜು ಹಾಗೂ ಕಾಂಗ್ರೆಸ್ನ ಶ್ರೀಕಂಠ ಸೇರಿದಂತೆ ಐವರು ಪಕ್ಷೇತರರು ತಮ್ಮ ನಾಮಪತ್ರ ವಾಪಸ್ ಪಡೆದರು.
ಚುನಾವಣೆಯ ಅಂತಿಮ ಕಣ ಸಿದ್ಧಗೊಂಡಿದ್ದು, ಗುರುವಾರದಿಂದ ಪ್ರಚಾರ ಚುರುಕುಗೊಳ್ಳುವ ಸಾಧ್ಯತೆ ಇದೆ. ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ವಾರ್ಡ್ಗಳಲ್ಲಿ ಈಗಾಗಲೆ ಒಂದು ಸುತ್ತಿನ ಪ್ರಚಾರಕಾರ್ಯ ಮುಗಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪುರಸಭೆ ಅಧಿಕಾರ ಹಿಡಿಯಲು ಹರಸಾಹಸಕ್ಕಿಳಿದಿವೆ. ಬಿಜೆಪಿ ತನ್ನ ವರ್ಚಸ್ಸನ್ನು ಉಳಿಸಿಕೊಳ್ಳಲು ಪರದಾಡುತ್ತಿದೆ.
ಇನ್ನು ಕೆಜೆಪಿ ತನ್ನ ಖಾತೆ ತೆರೆಯಲು ಹವಣಿಸುತ್ತಿದೆ. ಮಾಜಿ ಸಚಿವ ಎಂ. ಮಹದೇವ್, ಮಾಜಿ ಪುರಸಭಾಧ್ಯಕ್ಷ ಎನ್. ನರಸಿಂಹಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಶಾಸಕ ವಿ. ಶ್ರೀನಿವಾಸಪ್ರಾಸಾದ್ ಅನಾರೋಗ್ಯದಿಂದಾಗಿ ವಿಶ್ರಾಂತಿಯಲ್ಲಿರುವ ಕಾರಣ, ಸಂಸದ ಆರ್. ಧ್ರುವನಾರಾಯಣ ಚುನಾವಣೆಯ ಉಸ್ತುವಾರಿ ಹೊತ್ತಿದ್ದರೂ, ಮುಖಂಡ ಯು.ಎನ್. ಪದ್ಮನಾಭರಾವ್ ಹೆಗಲಿಗೆ ಹೊಣೆ ಹೊರಿಸಲಾಗಿದೆ. ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಎಸ್. ಮಹದೇವಯ್ಯ ಕೆಜೆಪಿಗೆ ಜೀವ ತುಂಬಿದ್ದಾರೆ. ಒಂದೆರಡು ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳ ಆರ್ಭಟ ಜೋರಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

