ವಿಜೃಂಭಣೆಯ ಕರಿಘಟ್ಟದ ವೆಂಕಟರಮಣಸ್ವಾಮಿ ರಥೋತ್ಸವ
ಶ್ರೀರಂಗಪಟ್ಟಣ: ಚಿಕ್ಕ ತಿರುಪತಿ ಎಂದೇ ಖ್ಯಾತಿಯಾಗಿರುವ ಸಮೀಪದ ಕರಿಘಟ್ಟದ ವೆಂಕಟರಮಣಸ್ವಾಮಿ ದೇವರ ವೈಭವದ ರಥೋತ್ಸವ ಬುಧವಾರ ಜರುಗಿತು.
ವೆಂಕಟರಮಣನ ಉತ್ಸವ ಮೂರ್ತಿಗೆ ಒಡವೆ ವೈಢೂರ್ಯಗಳೂ ಸೇರಿದಂತೆ ವಿವಿಧ ಅಲಂಕಾರಗಳನ್ನು ಮಾಡಿ ರಥದಲ್ಲಿ ಕುಳ್ಳಿರಿಸಿ, ದೇವಸ್ಥಾನದ ಸುತ್ತ ಒಂದು ಸುತ್ತಿನ ಪ್ರದಕ್ಷಿಣೆ ಹಾಕವುದರ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ದೇವಾಲಯದ ಪ್ರಧಾನ ಅರ್ಚಕ ಶೇಷಭಟ್ಟರ ನೇತೃತ್ವದಲ್ಲಿ ವಿಶೇಷ ಪೂಜೆಗಳು ನರೆವೇರಿದವು. ಎಡಿಸಿ ಶಂಕರಪ್ಪ, ಐಎಎಸ್ ಪ್ರೊಬೆಷನರಿ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ತಹಸೀಲ್ದಾರ್ ಅರುಳ್‌ಕುಮಾರ್, ಉಪ ತಹಸೀಲ್ದಾರ್ ಸಿದ್ದಪ್ಪ ರಥೋತ್ಸವಕ್ಕೆ ಚಾಲನೆ ನೀಡಿದರು. ರಥ ಎಳೆಯುತ್ತಾ ಅಪಾರ ಭಕ್ತ ಸಮೂಹ 'ಗೋವಿಂದ... ಗೋವಿಂದ...' ಎಂದು ವೆಂಕಟರಮಣನ ಭಕ್ತಿ ಪೂರಕ ನಮನ ಸಲ್ಲಿಸಿದರು.
ಕರಿಘಟ್ಟದ ವೆಂಕಟರಮಣನ ದರ್ಶನ ಪಡೆಯಲು, ರಾಜ್ಯ ಮತ್ತು ಹೊರ ರಾಜ್ಯಗಳಿಂದ ಅಪಾರ ಭಕ್ತ ಸಮೂಹವೇ ಹರಿದು ಬಂದಿತ್ತು. ಕೆಲ ಭಕ್ತರು ವಾಹನಗಳನ್ನೇರಿ ಕರಿಘಟ್ಟ ಬೆಟ್ಟವನ್ನು ತಲುಪಿದ್ದರೆ ಮತ್ತೆ ಕೆಲ ಭಕ್ತರು ಬೆಟ್ಟಕ್ಕಿರುವ 1001 ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನ ಪಡೆದರು. ಇನ್ನು ಹರಕೆ ಹೊತ್ತ ಭಕ್ತರು ಮೆಟ್ಟಿಲುಗಳ ಅಲ್ಲಲ್ಲಿ ಮತ್ತು ಬೆಟ್ಟದ ಮೇಲೆ ಪಾನಕ, ಮಜ್ಜಿಗೆ, ಕೊಸಂಬರಿ, ಪುಳಿಯೊಗರೆ ಮತ್ತು ಮೊಸರನ್ನಗಳನ್ನು ವಿತರಿಸುವ ಮೂಲಕ ಭಕ್ತರ ಧಣಿವನ್ನು ನಿವಾರಿಸಿ ತಮ್ಮ ಹರಕೆ ತೀರಿಸಿಕೊಂಡರು.
ಶ್ರೀರಂಗಪಟ್ಟಣ ಪೋಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

