ಮಂಡ್ಯ

ಹುಣಸೂರು- ವಿರಾಜಪೇಟೆ ಹೆದ್ದಾರಿ ಕಾಮಗಾರಿಗೆ ಚಾಲನೆ

Published On :

ಹುಣಸೂರು: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹುಣಸೂರು - ವಿರಾಜಪೇಟೆ ಹೆದ್ದಾರಿಗೆ ಚಾಲನೆ ನೀಡಿ ಮೈಸೂರು ಮತ್ತು ಕೊಡಗಿನ ಜನತೆಯ ಬೇಡಿಕೆ ಈಡೇರಿಸಿದಂತಾಗಿದೆ ಎಂದು ವಿಧಾನ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಸಂತಸ ವ್ಯಕ್ತಪಡಿಸಿದರು.
ತಾಲೂಕಿನ ಆನೆಚೌಕೂರು, ಪಂಚವಳ್ಳಿ, ತಿತಿಮತಿ, ಗೋಣಿಕೊಪ್ಪ ಹಾಗೂ ವಿರಾಜಪೇಟೆ ರಸ್ತೆ ಅಭಿವೃದ್ಧಿ ಲೋಕೋಪಯೋಗಿ ಇಲಾಖೆಯ ವತಿಯಿಂದ ರಾಜ್ಯ ಹೆದ್ದಾರಿ ಕಾಮಗಾರಿಗೆ ಕೋಟ್ಯಂತರ ರು. ಬಿಡುಗಡೆಯಾಗಿದೆ ಎಂದರು.
ಆನೆಚೌಕೂರು ಬಳಿ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ವಿವಿಧೆಡೆಯಿಂದ ಬರುವ ಪ್ರವಾಸಿಗರು ಕೊಡಗಿನ ವಿರಾಜಪೇಟೆ, ಗೋಣಿಕೊಪ್ಪ ರಸ್ತೆಯಲ್ಲಿ ಸಂಚರಿಸುವವರು ಜನಪ್ರತಿನಿಧಿಗಳನ್ನು ಬೈದುಕೊಂಡು ನರಕಯಾತನೆ ಅನುಭವಿಸಿ ಪ್ರಯಾಣಿಸುತ್ತಿದ್ದರು. ಅರಣ್ಯ ಇಲಾಖೆಯಿಂದ ಕೆಲವು ಕಾನೂನಿನ ತೊಡಕು ಇದ್ದರೂ ಅವನ್ನು ನಿವಾರಿಸಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವಾಗ್ದಾನ ಈಡೇರಿದೆ: ಯುವಜನ ಮತ್ತು ಕ್ರೀಡಾ ಸಚಿವ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಈ ಹಿಂದೆ ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ನೀಡಿದ್ದ ವಾಗ್ದಾನ ಇಂದು ಈಡೇರಿದೆ. ರಸ್ತೆ ಮಾಡುವ ಸಂದರ್ಭದಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಅದರಲ್ಲೂ ಕೊಡಗಿನಾದ್ಯಾಂತ ಮಳೆ ಹೆಚ್ಚು ಇರುವುದರಿಂದ ಮಳೆಯ ನೀರು ರಸ್ತೆಯ ಎರಡೂ ಬದಿಯಲ್ಲಿ ಹರಿದು ಹೋಗುವಂತೆ ರಸ್ತೆ ನಿರ್ಮಾಣ ಮಾಡುವಂತೆ ಸೂಚಿಸಿದರು.
ಶಾಸಕ ಎಚ್.ಪಿ. ಮಂಜುನಾಥ್ ಮಾತನಾಡಿ, ಮೈಸೂರಿನಿಂದ ಹುಣಸೂರು ಮೂಲಕ ಕೊಡಗಿಗೆ ಸಂಪರ್ಕ ಕಲ್ಪಿಸುವ ರೇಲ್ವೆ ಮಾರ್ಗ ಕಲ್ಪಿಸಲು ಪ್ರಸ್ತುತ ಬಜೆಟ್‌ನಲ್ಲಿ ಕೈ ಬಿಟ್ಟು ಹೋಗಿದೆ. ಆದರೆ ಮಿನಿ ಬಜೆಟ್‌ನಲ್ಲಿ ಸೇರಿಸಲು ಸಂಸದ ಎಚ್. ವಿಶ್ವನಾಥ್ ಅವರಲ್ಲಿ ಮನವಿ ಮಾಡುವುದಾಗಿ ಹೇಳಿದರು.
ಕೊಡಗು ಜಿಪಂ ಉಪಾಧ್ಯಕ್ಷೆ ಉಷಾದೇವಮ್ಮ, ತಾ.ಪಂ. ಅಧ್ಯಕ್ಷ ಅರುಣ್ ದೇವಯ್ಯ, ಉಪಾಧ್ಯಕ್ಷೆ ಊರ್ಮಿಳ, ಜಿ.ಪಂ. ಸದಸ್ಯರಾದ ಕಾಂತಿ ಬೆಳ್ಳಿಯಪ್ಪ, ಮಣಿಸುಬ್ಬಯ್ಯ, ಮಣಿಹುತ್ತಪ್ಪ, ಕೊಡಗು ಗೌಡ ಸಮಾಜದ ಒಕ್ಕೂಟದ ಬಿ.ಬಿ. ಸುಬ್ಬಯ್ಯ, ಪ್ರೊ.ಬೆಳ್ಳಿಯಪ್ಪ, ಪಿರಿಯಾಪಟ್ಟಣ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಲಕ್ಷ್ಮೇಗೌಡ, ತಾ.ಪಂ. ಮಾಜಿ ಸದಸ್ಯ ಪರಮೇಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.