ಮಂಡ್ಯ

ನಾಪತ್ತೆಯಾಗಿದ್ದ ಗೃಹಿಣಿ ಕೊಲೆ

Published On :

ಪಾಂಡವಪುರ: ಕಳೆದ ನಾಲ್ಕೂವರೆ ತಿಂಗಳ ಹಿಂದೆ ನಿಗೂಢವಾಗಿ ಕಣ್ಮರೆಯಾಗಿದ್ದ ತಾಲೂಕಿನ ಚಿಕ್ಕಾಡೆ ಗ್ರಾಮದ ಗೃಹಿಣಿಯೊಬ್ಬರು ಹತ್ಯೆಯಾಗಿರುವ ಅಂಶ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಧರ್ಮರಾಜು ಎಂಬವರ ಪತ್ನಿ ಸುನಂದಾ(25) ಹತ್ಯೆಯಾದ ಗೃಹಿಣಿ.
ಘಟನೆ ವಿವರ: ಚಿಕ್ಕಾಡೆ ಗ್ರಾಮದ ಧರ್ಮರಾಜು ಎಂಬವರ ಪತ್ನಿ ಸುನಂದಾ ಅವರು ಕಳೆದ 2012ರ ಸೆಪ್ಟೆಂಬರ್ 5ರಂದು ಸಂಜೆ 5 ಗಂಟೆ ಸಮಯದಲ್ಲಿ ತಮ್ಮ ಜಮೀನಿಗೆ ಹೋಗಿದ್ದರು. ಆದರೆ, ನಂತರ ಆಕೆ ಮನೆಗೆ ವಾಪಸ್ಸಾಗಿರಲಿಲ್ಲ. ಜೊತೆಗೆ ಆಕೆಯ ಬಳಿ ಇದ್ದ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಮಾರನೇ ದಿನ ಆಕೆಯ ಅಣ್ಣ ಕಾಳೇಗೌಡ ಅವರು ತನ್ನ ತಂಗಿ ಕಾಣೆಯಾಗಿದ್ದಾರೆ ಎಂದು ಪಾಂಡವಪುರ ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಾಗ ಸ್ವಿಚ್ ಆಫ್ ಆಗಿದ್ದ ಮೊಬೈಲ್ ಅದೇ ಗ್ರಾಮದ ನಾಗಣ್ಣ ಅವರ ಪುತ್ರ ಮಹೇಂದ್ರನ ಬಳಿ ಇದ್ದುದ್ದು ಜ. 23ರಂದು ಬುಧವಾರ ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ಮಹೇಂದ್ರನನ್ನು ಠಾಣೆಗೆ ಕರೆದೊಯ್ದ ಪೊಲೀಸರು ವಿಚಾರಣೆ ನಡೆಸಿದಾಗ ಹತ್ಯೆ ಮಾಡಿರುವ ಅಂಶ ಬಯಲಿಗೆ ಬಂದಿತು ಎನ್ನಲಾಗಿದೆ. ಸತ್ಯಾಂಶ ಒಪ್ಪಿಕೊಂಡು ಆರೋಪಿ ನಾನು ಮತ್ತು ನಮ್ಮ ಗ್ರಾಮದ ಧರ್ಮರಾಜು ಅವರ ಪುತ್ರ ವಿನೋದ ಸಾಲ ಮಾಡಿಕೊಂಡಿದ್ದೇವು. ಆ ಸಾಲ ತೀರಿಸಲು ಪ್ರಯತ್ನ ನಡೆಸುತ್ತಿದ್ದ ವೇಳೆ ಪ್ರತಿದಿನ ಚಿನ್ನದ ಸರ ಹಾಕಿಕೊಂಡು ಜಮೀನಿಗೆ ಬರುತ್ತಿದ್ದ ಸುನಂದಾ ಸೆಪ್ಟೆಂಬರ್ 5 ರಂದು ಜಮೀನಿನ ಬಳಿಗೆ ಬಂದಾಗ ಕಬ್ಬಿನ ಗದ್ದೆಗೆ ಎಳೆದೊಯ್ದು ಆಕೆಯ ಸರ ಕಿತ್ತುಕೊಂಡು ಆಕೆಯ ಹತ್ಯೆಗೈದು ಶವವನ್ನು ಕಬ್ಬಿನ ಗದ್ದೆಯ ಸೀಳು ನಾಲೆಗೆ ಎಸೆದು ಬಂದೆವು ಎಂದು ಆರೋಪಿ ಮಹೇಂದ್ರ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಈ ಕುರಿತು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಪತ್ರಕರ್ತರಿಗೆ ತಿಳಿಸಿದರು.
ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಚಿನ್ನದ ಸರ ಮತ್ತು ಮೊಬೈಲ್  ವಶಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.