ಮಂಡ್ಯ

ಹರಾಜು ಕಟ್ಟೆ ನಿರ್ಮಾಣಕ್ಕೆ ಚಾಲನೆ

Published On :

ಭಾರತೀನಗರ: ಸಮೀಪದ ಗುಡಿಗೆರೆ ಏಳನೀರು ಮಾರುಕಟ್ಟೆಯಲ್ಲಿ ನೂತನವಾಗಿ 14ಲಕ್ಷ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಹರಾಜು ಕಟ್ಟೆ ನಿರ್ಮಾಣ ಕಾಮಗಾರಿಯ ಗುದ್ದಲಿಪೂಜೆಯನ್ನು ಎಪಿಎಂಸಿ ಅಧ್ಯಕ್ಷ ಮೂಡ್ಯಚಂದ್ರು ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಗುಡಿಗೆರೆ ಎಪಿಎಂಸಿ ಸದಸ್ಯ ವಿಜಯ್ಕುಮಾರ್ ಮಾತನಾಡಿ, ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ಅವರು ಗುಡಿಗೆರೆಯಲ್ಲಿ ಗೋಮಾಳವಿದ್ದ ಸರ್ಕಾರಿ ಜಾಗವನ್ನು ಎಳನೀರು ಮಾರುಕಟ್ಟೆ ನಿರ್ಮಾಣ ಮಾಡಲು ಸರ್ಕಾರದಿಂದ ಮಂಜೂರಾತಿ ಮಾಡಿಸಿದ್ದರಿಂದ ಇಲ್ಲಿನ ನೂರಾರು ರೈತರಿಗೆ ಮತ್ತು ಕಾರ್ಮಿಕರಿಗೆ ತುಂಬಾ ಅನುಕೂಲವಾಗಿದೆ ಎಂದರು. ಜಿಪಂ ಅನುದಾನದಲ್ಲಿ 10 ಲಕ್ಷ ಹಾಗೂ ಸಮಿತಿಯಿ ನಿಧಿಯಿಂದ 4ಲಕ್ಷ ವೆಚ್ಚದಲ್ಲಿ ಮುಚ್ಚಿನ ಹರಾಜು ಕಟ್ಟೆ ನಿರ್ಮಾಣ ಮಾಡಲಾಗುತ್ತಿದ್ದು, ಗುತ್ತಿಗೆದಾರರು ಉತ್ತಮ ಗುಣಮಟ್ಟದೊಂದಿಗೆ ಕಡಿಮೆ ಅವಧಿಯಲ್ಲಿ ಕಾಮಗಾರಿ ಮುಗಿಸಿ ಮಾರುಕಟ್ಟೆ ವ್ಯವಹಾರಕ್ಕೆ ಬಿಡಬೇಕೆಂದು ತಿಳಿಸಿದರು.
ಮಾರುಕಟ್ಟೆಗೆ ಬಾಕಿದ ಶೌಚಾಲಯ ವ್ಯವಸ್ಥೆ ಹಾಗೂ ವಿದ್ಯುತ್ ದೀಪಗಳನ್ನು ಹಾಕಿಸಲು ಗ್ರಾಪಂ ಅಧ್ಯಕ್ಷರು ಗಮನಹಸಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಉಪನಿರ್ದೇಶಕಿ ಡಿ.ಆರ್. ಪುಷ್ಪಾ, ಸಮಿತಿಯ ಉಪಾಧ್ಯಕ್ಷ ಬಿಳಿಗೌಡ, ಕಾರ್ಯದರ್ಶಿ ವೆಂಕಟೇಶ್ರೆಡ್ಡಿ, ಎಇಇ ಧರ್ಮೇಗೌಡ, ಸದಸ್ಯರಾದ ಮಂಜುಳಾ ಕೇಶವ್, ಸವಿತಾ ಎಂ.ಕೆ. ರಾಜಣ್ಣ, ಎಳನೀರು ಮಾರುಕಟ್ಟೆಯ ಸಂಸ್ಥಾಪಕ ನಾಗಯ್ಯ, ಗ್ರಾಪಂ ಅಧ್ಯಕ್ಷ ವೆಂಕಟೇಶ್, ಡಾ. ಬೋರೇಗೌಡ, ದಾಸೇಗೌಡ, ಗ್ರಾಪಂ ಸದಸ್ಯರಾದ ಗುಡಿಗೆರೆ ರಾಘವೇಂದ್ರ, ಶಿವಲಿಂಗು, ದೊರೆ, ಗುತ್ತಿಗೆದಾರ ಅರುಣ್ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.