ಮಂಡ್ಯ

ಸವಿತಾ ಸಮಾಜದಿಂದ ಆದಿಶ್ರೀ ಸ್ಮರಣೆ

Published On :

ಮಂಡ್ಯ: ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುಣ್ಯತಿಥಿಯನ್ನು ನಗರದಲ್ಲಿ ಸವಿತಾ ಸಮಾಜದ ವತಿಯಿಂದ ಆಚರಿಸಲಾಯಿತು.  ನಗರದ ಪೇಟೆ ಬೀದಿಯಲ್ಲಿರುವ ಮಹಾಲಕ್ಷ್ಮಿ ಸಮುದಾಯ ಭವನದಲ್ಲಿ ಸವಿತಾ ಸಮಾಜದ ಪದಾಧಿಕಾರಿಗಳಿಂದ ಪುಣ್ಯತಿಥಿ ಆಚರಿಸಿ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಸವಿತಾ ಸಮಾಜದ ಜಿಲ್ಲಾಧ್ಯಕ್ಷ ವಿ.ಆಂಜನಪ್ಪ ಮಾತನಾಡಿ, ಎಲ್ಲಾ ವರ್ಗದವರಿಗೂ ತ್ರಿವಿಧ ದಾಸೋಹ ನೀಡಿರುವ ಮೂಲಕ ಹಿಂದುಳಿದ ವರ್ಗಗಳ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಚುಂಚಶ್ರೀ ಕೊಡುಗೆ ಅಪಾರವಾಗಿದೆ. ಗೋಹತ್ಯೆ ನಿಷೇದ ಕಾಯ್ದೆ ಜಾರಿಗಾಗಿ ಹಂಬಲಿಸಿದ ಗೋ ರಕ್ಷಕರಾಗಿದ್ದರು. ಸವಿತಾ ಸಮಾಜದ ಕಾಳಜಿ ಹೊಂದಿದ ಶ್ರೀಗಳು ಮಹಾಲಕ್ಷ್ಮಿ ದೇವಸ್ಥಾನಕ್ಕೆ ದೇವತಾ ವಿಗ್ರಹ ಹಾಗೂ ದತ್ತಿ ನೀಡುವ ಮೂಲಕ ಪೋತ್ಸಾಹಿಸಿದರು ಎಂದರು. ಈ ಸಂದರ್ಭದಲ್ಲಿ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಾಜಣ್ಣ, ಮಹಾಲಕ್ಷ್ಮಿ ನರಸಿಂಹಮೂರ್ತಿ, ನಾರಾಯಣ್, ಪರಮೇಶ್, ರವಿಕುಮಾರ್, ಪುಟ್ಟಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.