ಆದಿಶ್ರೀ ಬಡವರ ಆಶಾಕಿರಣ
ಭಾರತೀನಗರ: ಇಲ್ಲಿನ ಸಿ.ಎ. ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘದ ವತಿಯಿಂದ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಭಾವಪೂರ್ವ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ರಂಗ ಶ್ಲೋಕಗೀತೆಯೊಂದಿಗೆ ಉದ್ಘಾಟಿಸಿದರು.
ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ ಮಾತನಾಡಿ, ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರು ನಾಡಿನ ಶಕ್ತಿಯಾಗಿದ್ದರು. ಅವರು ಧಾರ್ಮಿಕ, ಶಿಕ್ಷಣ, ಆಧ್ಯಾತ್ಮಿಕ, ಕಲೆ, ಆರೋಗ್ಯ, ರಂಗಕಲೆ ಹಲವಾರು ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದರೆಂದು ಬಣ್ಣಿಸಿದರು.
ಅವರು ಹಳ್ಳಿಗಾಡಿನ ಬಡಜನರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು. ಬಡಮಕ್ಕಳ ವಿದ್ಯಾದಾನ ಮತ್ತು ಅವರಿಗೆ ಬೇಕಾದ ಎಲ್ಲಾ ಸಕಲ ಸವಲತ್ತು ಒದಗಿಸಲು ಸಾಕಷ್ಟು ಶ್ರಮಿಸಿದರು.
ಚುಂಚುನಗಿರಿ ಕ್ಷೇತ್ರವನ್ನು ಒಂದು ಧಾರ್ಮಿಕ ಕ್ಷೇತ್ರವನ್ನಾಗಿ ಮಾಡಿ ಆ ಕ್ಷೇತ್ರವನ್ನು ಜನಮನದಲ್ಲಿ ಉಳಿದುಕೊಳ್ಳುವ ಹಾಗೆ ಮಾಡಿದರು. ಅಂತಹ ಮಹಾನ್ ದೈವ ಸ್ವರೂಪರಾದ ಬಾಲಗಂಗಾಧರನಾಥ ಸ್ವಾಮೀಜಿ ಅವರ ಅಗಲಿಕೆಯಿಂದ ಒಂದು ದೊಡ್ಡ ಶಕ್ತಿಯನ್ನೇ ಇಲ್ಲದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಗುರುದೇವರಹಳ್ಳಿ ಸಿದ್ದರಾಜು, ತಿಪ್ಪೂರು ಕೃಷ್ಣ, ಅಂದಾನಿ, ಕ್ಯಾತಘಟ್ಟದ ಗಿರೀಶ್, ಯಡಗನಹಳ್ಳಿ ಆತ್ಮಾನಂದ, ಯಮ್ಮನಹಳ್ಳಿ ಪುಟ್ಟಸ್ವಾಮಿ, ದೇವರಹಳ್ಳಿ ಪುಟ್ಟಸ್ವಾಮಿ, ಕಳ್ಳಿಮೆಳೆದೊಡ್ಡಿ ಸಿದ್ದರಾಜು, ಎ.ಬಿ. ಹಳ್ಳಿ ಸುರೇಶ್, ಅಣ್ಣೂರು ಶಿವಲಿಂಗೇಗೌಡ, ಡಿ.ಎ. ಕೆರೆ ಪ್ರಕಾಶ್, ಮಣಿಗೆರೆ ನಂಜುಂಡಸ್ವಾಮಿ, ಮಡೇನಹಳ್ಳಿ, ಶ್ರೀನಿವಾಸ್, ಶಿಕ್ಷಕರಾದ ಗೊಲ್ಲರದೊಡ್ಡಿ ಶಿವಲಿಂಗಯ್ಯ, ಸಿ.ಎಸ್. ಮಾದೇಗೌಡ, ತೈಲೂರು ಸಿದ್ದರಾಜು ಸೇರಿದಂತೆ ಇತರರಿದ್ದರು.
ಕಾಡುಕೊತ್ತನಹಳ್ಳಿ: ಸಮೀಪದ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುಣ್ಯತಿಥಿಯವರ ಅಂಗವಾಗಿ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ಬಿ.ಬಸವರಾಜು ಇತರರು ಇದ್ದರು.
ಶ್ರದ್ಧಾಂಜಲಿ: ಭಾರತೀನಗರದಲ್ಲಿ ಗ್ರಾಮಸ್ಥರಿಂದ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಶ್ರದ್ಧಾಜಂಲಿ ಸಭೆ ಹಮ್ಮಿಕೊಂಡಿದ್ದರು.
ಡಾ. ಬಾಲಗಂಗಾಧನಾಥ ಸ್ವಾಮೀಜಿಗೆ ವಿಶೇಷ ಪೂಜೆಯನ್ನು ಸಾರ್ವಜನಿಕರು ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

