ಮಂಡ್ಯ

ಎಲ್ಲ ವರ್ಗದವರ ಸಹಕಾರ ಅಗತ್ಯ

Published On :

ಆದಿಚುಂಚನಗಿರಿ/ಮಂಡ್ಯ: ಹಿರಿಯ ಶ್ರೀಗಳು ಮಾರ್ಗದರ್ಶನ, ಹಾಕಿಕೊಟ್ಟ ದಾರಿಯಲ್ಲಿ ಸಾಗಲು ಎಲ್ಲ ವರ್ಗದ ಜನರ ಸಹಕಾರ ಬಹಳ ಮುಖ್ಯ ಎಂದು ನೂತನ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳು ಮಂಗಳವಾರ ಅಭಿಪ್ರಾಯಪಟ್ಟರು. ಭಕ್ತ ಸಂಗಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿ, ನಿರ್ಮಲಾನಂದನಾಥರು, ಜ.5 ರಂದು ಜಗದ್ಗುರು ಬಾಲಗಂಗಾಧರನಾಥ ಶ್ರೀಗಳು ಶ್ರೀಮಠಕ್ಕೆ ಭೇಟಿ ಕೊಟ್ಟ ಕೊನೆಯ ದಿನ. ಆ ದಿನ ಸ್ವತಃ ಪೂಜೆ ನೆರವೇರಿಸಿದ ಶ್ರೀಗಳು ಈ ದೇಹ ಸಾರ್ವಜನಿಕರಿಗೆ, ನೊಂದವರ ಸೇವೆ ಮಾಡಲು ಇನ್ನು ಹಾತೊರೆಯುತ್ತದೆ. ಈ ದೇಹದ ಮುಖಾಂತರ ಸಾಕಷ್ಟು ಸೇವೆ ಆಗಿದೆ. ಮನಸ್ಸು ಮಾಡಿದ್ದರೆ ಇನ್ನಷ್ಟು ಸೇವೆ ನೀಡಬಹುದಿತ್ತು ಎಂದು ಹೇಳಿ ಕಣ್ಮರೆಯಾಗಿದು ನೋವುಂಟು ಮಾಡಿದೆ ಎಂದರು.  ಶ್ರೀಗಳ ಇಷ್ಟದಂತೆ ಶ್ರೀಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ತಾವುಗಳೆಲ್ಲರೂ ಎಂದಿನಂತೆ ಶ್ರೀಮಠದೊಂದಿಗೆ ನಿರಂತರ ಸಂಪರ್ಕ ಹೊಂದಿ ಸಹಕಾರ ನೀಡುವಂತೆ ಭಕ್ತ ಸಮೂಹವನ್ನು ಕೋರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.