'ಸಂವಿಧಾನ ಪಾಲಿಸಿದರೆ ಸೌಹಾರ್ದ ಬದುಕು'
ಮೇಲುಕೋಟೆ: ಸಂವಿಧಾನದ ಆಶಯ ಅರಿತರೆ ಸೌಹಾರ್ದಯುತ ಸಮಾಜ ನಿರ್ಮಾಣವಾಗಲು ಸಹಕಾರಿಯಾಗುತ್ತದೆ ಎಂದು ಅಂಬೇಡ್ಕರ್ ವಿಚಾರವೇದಿಕೆ ಅಧ್ಯಕ್ಷ ಕದಲಗೆರೆ ನರಸಿಂಹಯ್ಯ ಅಭಿಪ್ರಾಯಪಟ್ಟರು.
ಮೇಲುಕೋಟೆ ಹೋಬಳಿಯ ಜಕ್ಕನಹಳ್ಳಿ ವೃತ್ತದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವಿಚಾರವೇದಿಕೆ ಮತ್ತು ಕನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಒಕ್ಕೂಟ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂವಿಧಾನದ ಆಶಯಗಳು ಮತ್ತು ಅಲ್ಲಿ ಉಲ್ಲೇಖಿತವಾಗಿರುವ ಹಕ್ಕುಗಳ ಬಗ್ಗೆ ಗ್ರಾಮೀಣ ಪ್ರದೇಶದ ಬಹಳಷ್ಟು ಜನರಿಗೆ ಇಂದಿಗೂ ಅರಿವಿಲ್ಲ. ಗಣರಾಜ್ಯವಾಗಿ 64 ವರ್ಷ ಕಳೆದರೂ ಸಂವಿಧಾನದ ಆಶಯ ಈಡೇರಿಲ್ಲ. ಈ ಕುರಿತು ಜಾಗೃತಿ ಉಂಟು ಮಾಡಬೇಕಾದ ಅಗತ್ಯವಿದೆ ಎಂದರು.
ವಕೀಲ ಜಕ್ಕನಹಳ್ಳಿ ಸಂತೋಷ್ಕುಮಾರ್ ಮಾತನಾಡಿ, ಸರ್ಕಾರದ ಸೌಕರ್ಯಗಳು ಮತ್ತು ಸವಲತ್ತುಗಳು ಇಂದಿಗೂ ಅರ್ಹರಿಗೆ ತಲುಪುತ್ತಿಲ್ಲ. ಸಂವಿಧಾನ ನೀಡಿದ ಹಕ್ಕುಗಳು ಉಲ್ಲಂಘನೆಯಾಗುತ್ತಿದೆ. ಹಲವು ಸರ್ಕಾರಿ ಶಾಲೆಗಳಲ್ಲಿ ಇಂದಿಗೂ ಮೂಲ ಸೌಕರ್ಯ ಇಲ್ಲ. ಹೀಗಾಗಿ ಬಡ ಮಕ್ಕಳು ಸೌಲಭ್ಯ ವಂಚಿರಾಗುತ್ತಿದ್ದಾರೆ. ಮಹಿಳೆಯರು ದುರ್ಬಲರು ಹಾಗೂ ಶೋಷಿತ ವರ್ಗಗಳ ಸಬಲೀಕರಣ ಆಗಬೇಕು ಎಂದರು.
ಇದೇ ವೇಳೆ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಮೇಲುಕೋಟೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಶೋಕ್, ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯದಂತೆ ಸಮಾನತೆಯಿಂದ ಸಹಬಾಳ್ವೆ ನಡೆಸಿ ಶಾಂತಿ, ಸೌಹಾರ್ದಯುತ ಜೀವನ ಸಾಗಿಸಬೇಕು ಎಂದರು.
ಅಂಬೇಡ್ಕರ್ ವಿಚಾರ ವೇದಿಕೆ ಕಾರ್ಯದರ್ಶಿ ಮಧುಸೂದನ್, ಕಾರ್ಯಕರ್ತರಾದ ಅತ್ತಿಗನಹಳ್ಳಿ ಶಿವಣ್ಣ, ಸಣಬ ಅನಂತು, ಅಮೃತಿ ಮಹದೇವು, ಶಂಕರ್, ಜಕ್ಕನಹಳ್ಳಿನಟರಾಜು, ವಕೀಲ ಗೌಡಗೆರೆ ಸುರೇಶ್, ಮಹೇಶ್, ಮೇಲುಕೋಟೆ ದೇವಸ್ಥಾನದ ಸದಸ್ಯ ಅರಕನಗೆರೆ ಪುರುಷೋತ್ತಮ್, ಎಸ್. ದೇವರಾಜು ಎನ್. ಮರೀಗೌಡ, ಗ್ರಾಪಂ ಸದಸ್ಯ ಕದಲಗೆರೆ ನಾರಾಯಣ ಮತ್ತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

