ಮಂಡ್ಯ

ಟ್ರಾನ್ಸ್‌ಫಾರ್ಮರ್ ಅಳವಡಿಕೆ ಒತ್ತಾಯಿಸಿ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ  ಭಾರತೀನಗರ ಮಾ.25
ಕೆಟ್ಟು ಹೋಗಿರುವ ಟಿ.ಸಿ.ಯಿಂದ 1 ತಿಂಗಳಿಂದ ಗ್ರಾಮಕ್ಕೆ ವಿದ್ಯುತ್ ಪೂರೈಕೆ ಆಗದಿರುವುದರಿಂದ ಆಕ್ರೋಶಗೊಂಡ ಕಾಡನಪುರದದೊಡ್ಡಿ (ಕೆ.ಪಿ.ದೊಡ್ಡಿ) ಹಾಗೂ ಅಣ್ಣೂರು ಗ್ರಾಮಸ್ಥರು ಇಲ್ಲಿನ ಸೆಸ್ಕ್ ಕಚೇರಿಗೆ  ಬೀಗ ಜಡಿದು ಪ್ರತಿಭಟಿನೆ ನಡೆಸಿದರು.
ವಿದ್ಯುತ್ ಅಭಾವದಿಂದಾಗಿ ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗಿದೆ. ವಿದ್ಯಾರ್ಥಿಗಳಿಗೂ ಓದಲು ತೊಂದರೆ ಆಗಿದೆ. ಅಧಿಕಾರಿಗಳ ಸಮಾಧಾನದ ಮಾತುಗಳಿಂದ ನಾವು ಅವರಿಗೆ ನೀಡಿದ್ದ ಒಂದು ತಿಂಗಳು ಕಾಲಾವಧಿ ಮುಗಿದಿದೆ. ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದೆ ಎಂದು ಕಿಡಿಕಾರಿದರು.
ಸಹಾಯಕ ಕಾರ್ಯಪಾಲಕ ಅಭಿಯಂತರರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಕೂಡಲೇ ಪರಿಹರಿಸಬೇಕೆಂದು ಪಟ್ಟು ಹಿಡಿದಿದ್ದ ಪ್ರತಿಭಟನಾಕಾರರನ್ನು ಚೆಸ್ಕಾಂನ ಜೆ.ಇ. ರಾಜೇಶ್ ಅವರು ಸಮಾಧಾನಗೊಳಿಸಿ ಏ.1 ರೊಳಗೆ ವಿದ್ಯುತ್ ಸಮಸ್ಯೆ ಹಾಗೂ ಟಿ.ಸಿ. ಸಮಸ್ಯೆ ಸರಿಪಡಿಸುವುದಾಗಿ ಲಿಖಿತ ಭರವಸೆ ನೀಡಿದರು. ಬಳಿಕ ಪತ್ರಿಭಟನೆ ಹಿಂತೆಗೆದುಕೊಳ್ಳಲಾಯಿತು.
ಪ್ರತಿಭಟನೆಯಲ್ಲಿ ಕೆ.ಪಿ.ದೊಡ್ಡಿ ಗ್ರಾಮದ ಕೆ.ಎಲ್. ಶಿವರಾಮು, ಪುಟ್ಟಸ್ವಾಮಿ, ಅಣ್ಣೂರು ಗ್ರಾ.ಪಂ ಅಧ್ಯಕ್ಷ ಮಾಜಿ ಅಧ್ಯಕ್ಷ ಸಿದ್ದೇಗೌಡ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.