ಮಂಡ್ಯ

ದಾರಿದ್ರ್ಯ ನಿವಾರಣೆಗೆ ಕೃಷಿಯೇ ದಾರಿ: ನಿರ್ಮಲಾನಂದನಾಥಶ್ರೀ

Published On :

ಕ.ಪ್ರ.ವಾರ್ತೆ, ನಾಗಮಂಗಲ, ಮಾ.25
ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದಾಗ ಮಾತ್ರ ದಾರಿದ್ರ್ಯವನ್ನು ತೊಲಗಿಸಬಹುದು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಆದಿಚುಂಚನಗಿರಿಯಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ 9ನೇ ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ರೈತರ ಕಷ್ಟಗಳನ್ನು ಅರಿತು ಆದಿಶ್ರೀಗಳು ಅನೇಕ ಯೋಜನೆಗಳನ್ನು ರೂಪಿಸಿದ್ದರು. ರೈತರಿಗೂ ಶ್ರೀಮಠಕ್ಕೂ ಅವಿನಾಭಾವ ಸಂಬಂಧವಿದೆ. ಕೃಷಿಗೆ ಮೀಸಲಾದ ರೈತರ ಬೆಳೆಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮವನ್ನು ಆದಿಶ್ರೀಗಳು ರೂಪಿಸಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಬಿ.ಎಂ. ಕೃಷ್ಣಯ್ಯ ಮಾತನಾಡಿ, ವಸ್ತು ಪ್ರದರ್ಶನಗಳು ಕೇವಲ ಮಾರಾಟ ಮತ್ತು ಆಕರ್ಷಣೆಗೆ ಸೀಮಿತವಾಗಬಾರದು. ಮಂಡ್ಯ ಕೃಷಿ ಪ್ರಧಾನವಾದ ಜಿಲ್ಲೆ.  ಕೃಷಿ ಚಟುವಟಿಕ ರೈತನ ಬದುಕನ್ನು ತಿಳಿಗೊಳಿಸುವಂತಹ ಕಾರ್ಯಕ್ರಮಗಳಾಗಿ ಹೊರಹೊಮ್ಮಬೇಕು ಎಂದರು.
ಸಾವಯವ ತತ್ವವನ್ನು ಮೈಗೂಡಿಸಿಕೊಂಡು ರೈತರು ಕೃಷಿ ಉತ್ಪನ್ನಗಳನ್ನು ತಮ್ಮದೇ ಆದ ಪರಿಶ್ರಮದಿಂದ ಉತ್ಪಾದಿಸಬೇಕು. ಗ್ರಾಮೀಣ ಭಾಗದ ರೈತರ ನಾಡಿಮಿಡಿತವನ್ನು ಅರಿತಿದ್ದ ಆದಿಶ್ರೀಗಳು ರೈತರು, ಬಡವರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ಅವರ ಬದುಕನ್ನು ಹಸನಗೊಳಿಸಿದ್ದಾರೆ. ನಾಡಿನಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡುವ ಸಲುವಾಗಿ ಕೋಟಿ ಕೋಟಿ ಸಸಿಗಳನ್ನು ನೆಟ್ಟು ವನ ಸಂವರ್ಧನಾ ಟ್ರಸ್ಟ್ ಸ್ಥಾಪಿಸಿದ್ದಾರೆ. ಆದಿಶ್ರೀಗಳು ಜಾರಿಗೆ ತಂದಿರುವ ಅನೇಕ ಯೋಜನೆಗಳು ಮುಂದುವರಿಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಸಿಇಓ ಪಿ.ಸಿ. ಜಯಣ್ಣ ಉದ್ಘಾಟಿಸಿದರು. ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಎ. ಆನಂದ್, ಬೆಂಗಳೂರು ಕೃಷಿ ವಿವಿ ಎಂ.ಎ. ಶಂಕರ್, ಬಾಲಕೃಷ್ಣೇಗೌಡ, ಮಹಾಸಂಸ್ಥಾನ ಮಠದ ಸಿಇಓ ಜೆ.ಎನ್. ರಾಮಕೃಷ್ಣೇಗೌಡ, ವಸ್ತು ಪ್ರದರ್ಶನ ಕಲಾವಿದರಾದ ಪ್ರಕಾಶ್ ಚಿಕ್ಕಪಾಳ್ಯ, ಬಡಿಗೇರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.