ಮೈಸೂರು

ಮಾಸಾಂತ್ಯಕ್ಕೆ ತಂಬಾಕು ಹರಾಜು ಮಾರುಕಟ್ಟೆ ಆರಂಭ

Published On :

ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಆ. 1
ಈ ತಿಂಗಳ ಅಂತ್ಯಕ್ಕೆ ತಂಬಾಕು ಹರಾಜು ಮಾರುಕಟ್ಟೆ ಪ್ರಾರಂಭಿಸಲು ಉದ್ದೇಶಿಸಲಾಗಿದ್ದು, ಉತ್ತಮ ಗುಣಮಟ್ಟದ ತಂಬಾಕನ್ನು ಮಾರುಕಟ್ಟೆಗೆ ತಂದು ಉತ್ತಮ ಬೆಲೆ ಪಡೆಯುವಂತೆ ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ನರಸಿಂಹಯ್ಯ ಹೇಳಿದರು.
ತಾಲೂಕಿನ ಕಗ್ಗುಂಡಿ ಹರಾಜು ಮಾರುಕಟ್ಟೆ 4ರ ಪ್ರಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ತಂಬಾಕು ರೈತರ ಸಭೆಯಲ್ಲಿ ಮಾತನಾಡಿದರು. ತಂಬಾಕು ರೈತರು ತಂಬಾಕಿನಲ್ಲಿ ಅನ್ಯಪದಾರ್ಥ ಬೆರೆಸದಂತೆ ಜಾಗೃತಿ ವಹಿಸುವಂತೆ ಸಲಹೆ ನೀಡಿದರು. ರೈತರಿಗೆ ಕಳೆದ ವರ್ಷ ಬೆಳೆ ನಷ್ಟ ಉಂಟಾಗಿದ್ದು, ತಂಬಾಕು ರೈತರಿಗೆ ಒಂದು ಹೆಕ್ಟೇರ್‌ಗೆ 2 ಸಾವಿರಗಳಂತೆ ಈಗಾಗಲೆ ರೈತರ ಬ್ಯಾಂಕಿನ ಖಾತೆಗೆ ಪಾವತಿಸಿದೆ ಎಂದು ತಿಳಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಪ್ರಕಾಶ್‌ರಾಜೇ ಅರಸ್ ಮಾತನಾಡಿ, ಕೇಂದ್ರ ತಂಬಾಕು ಮಂಡಳಿಯ ಅಧ್ಯಕ್ಷರು, ನಿರ್ದೇಶಕರು ಹಾಗೂ ಈ ವ್ಯಾಪ್ತಿಯ ಜನಪ್ರತಿನಿಧಿಗಳನ್ನೊಳಗೊಂಡಂತೆ ಪ್ರಮುಖರ ಸಭೆಯನ್ನು ಮಾರುಕಟ್ಟೆಗೆ ಮುಂಚೆ ಕರೆದು ಇವರಿಗೆ ರೈತರ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಬೇಕೆಂದು ಹೇಳಿದರು.
ತಂಬಾಕು ಮಂಡಳಿ ವಿಚಕ್ಷಣದಳದ ಅಧಿಕಾರಿ ನಾಗಯ್ಯ ಮಾತನಾಡಿ, ಕಳ್ಳ ಮಾರುಕಟ್ಟೆಯಲ್ಲಿ ತಂಬಾಕು ಸಾಗಿಸುವುದು ಅಪರಾಧವಾಗಿದ್ದು, ಈ ಬಗ್ಗೆ ವಿಶೇಷ ದಳಕ್ಕೆ ರೈತರು ಮಾಹಿತಿ ನೀಡುವಂತೆ ತಿಳಿಸಿದರಲ್ಲದೆ, ವಿಶೇಷ ದಳಕ್ಕೆ ದೂರು ನೀಡುವ ರೈತರ ಹೆಸರನ್ನು ಗುಪ್ತವಾಗಿಡಲಾಗುವುದು ಎಂದು ತಿಳಿಸಿದರು.
ಪ್ರಗತಿಪರ ರೈತ ನಾಗರಾಜ್ ಮಾತನಾಡಿದರು. ಸಭೆಯಲ್ಲಿ ಹರಾಜು ಅಧೀಕ್ಷಕ ಶ್ರೀನಿವಾಸ್, ಕಾಶಿರಾಮನಾಯ್ಕ, ಪಾಟೀಲ್, ಪ್ರಗತಿಪರ ರೈತರಾದ ಪರಮೇಶ್, ಕೆ.ಸಿ. ರಾಜಶೇಖರಯ್ಯ, ರಾಮಚಂದ್ರು, ಮುತ್ತುರಾಜ್, ರಾಮನಾಯಕ್, ಎಪಿಎಂಸಿ ಸದಸ್ಯರಾದ ಸುರೇಶ್, ಲೋಕೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.