ಎಚ್.ಡಿ. ಕೋಟೆ: ಕ್ಷೀರ ಭಾಗ್ಯ ಯೋಜನೆಗೆ ಚಾಲನೆ
ಎಚ್.ಡಿ. ಕೋಟೆ: ರಾಜ್ಯ ಸರ್ಕಾರವು ಶಾಲಾ ಹಾಗೂ ಅಂಗನವಾಡಿ ಮಕ್ಕಳಿಗೆ ಜಾರಿಗೆ ತಂದಿರುವ ಕ್ಷೀರಭಾಗ್ಯ ಯೋಜನೆಗೆ ತಹಸೀಲ್ದಾರ್ ಕೃಷ್ಣ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಗುರುವಾರ ಚಾಲನೆ ನೀಡಿದರು.
ಸರ್ಕಾರವು ಹೊಸದಾಗಿ ತಂದಿರುವ ಈ ಯೋಜನೆಯು ಮಕ್ಕಳಿಗೆ ಹೆಚ್ಚಿನ ಪ್ರಯೋಜವಾಗಿದ್ದು, ಇಂತಹ ಯೋಜನೆಗಳು ಫಲಪ್ರದವಾಗಲು ಸರ್ಕಾರದ ಜೊತೆಗೆ ಸರ್ಕಾರಿ ಅಧಿಕಾರಿಗಳು ಕೈ ಜೋಡಿಸಬೇಕು ಎಂದು ತಿಳಿಸಿದರು. ಇಒ ಲಿಂಗರಾಜು, ಬಿಒ ಮಂಜುನಾಥ್, ಸಿಡಿಪಿಒ ರಾಮಕೃಷ್ಣ, ಮೇಲ್ವಿಚಾರಕರಾದ ಮಹದೇವಸ್ವಾಮಿ, ವೈದ್ಯೆ ಪುಷ್ಪರಾಣಿ, ಶಾಲೆಯ ಭೂದಾನಿಗಳಾದ ಎಚ್.ಎಸ್. ನಾಗೇಶ್ರಾವ್ ಹಾಗೂ ನಾಗರಾಜಶೆಟ್ಟಿ, ಶಾಲೆಯ ಮುಖ್ಯಶಿಕ್ಷಕ ಸೋಮನಾಯಕ, ಆದರ್ಶ ಶಾಲೆಯ ಮುಖ್ಯ ಶಿಕ್ಷಕಿ ಹೇಮಲತಾ ಹಾಗೂ ಶಿಕ್ಷಕರು ಹಾಗೂ ಪೋಷಕರು ಭಾಗವಹಿಸಿದ್ದರು.
ಅಶುದ್ಧ ನೀರು ಪೂರೈಕೆ
ಹುಣಸೂರು: ಟ್ಯಾಂಕ್ ಸ್ವಚ್ಛಗೊಳಿಸದೆ ನೀರನ್ನು ಸರಬರಾಜು ಮಾಡುತ್ತಾರೆಂದು ಬನ್ನಿಕುಪ್ಪೆ ಗ್ರಾಪಂ ಸದಸ್ಯ ಬಿ.ಎನ್. ಅಮಾಸೆ ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ. ತಾಲೂಕಿನ ಮರಳಯ್ಯನಕೊಪ್ಪಲು ಗ್ರಾಮದ ನೀರಿನ ಟ್ಯಾಂಕಿಗೆ ಅಳವಡಿಸಿದ್ದ ಏಣಿ ಮುರಿದು ಮೂರು ತಿಂಗಳುಗಳೇ ಕಳೆದಿದ್ದರೂ, ಪಂಚಾಯಿತಿಯವರು ದುರಸ್ತಿಪಡಿಸಿಲ್ಲ. ಓವರ್ಹೆಡ್ ಟ್ಯಾಂಕಿಗೆ ಅಳವಡಿಸಿದ್ದ ಏಣಿ ಮುರಿದು ಬಿದ್ದಿರುವ ಕುರಿತು ಪಂಚಾಯಿತಿ ಸಭೆಯಲ್ಲಿ ಪ್ರಸ್ತಾಪಿಸಿದ್ದೇವೆ. ಪಂಚಾಯಿತಿ ಪಿಡಿಒಗೂ ತಿಳಿಸಿದ್ದೇವೆ. ಆದರೂ ಕ್ರಮ ಕೈಗೊಳ್ಳುತ್ತಿಲ್ಲ.ತಾಲೂಕಿನಾದ್ಯಂತ ಡೆಂಘೀಆಗಾಗ ಕಾಣಿಸಿಕೊಳ್ಳುತ್ತಿದೆ. ಇಷ್ಟೆಲ್ಲ ಅವಘಡಗಳು ನಡೆಯುತ್ತಿದ್ದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಕೂಡಲೇ ಹಿರಿಯ ಅಧಿಕಾರಿಗಳು ಕೂಡಲೇ ಶುದ್ಧ ಕುಡಿಯುವ ನೀರು ಪೂರೈಸಬೇಕೆಂದು ನಟರಾಜ ಪಟೇಲ್, ಮಾದೇಗೌಡ, ಬಸವರಾಜಪ್ಪ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ತಿಂಗಳ ತಿರುಳು ಕಾರ್ಯಕ್ರಮ
ಹುಣಸೂರು: ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಹೆಚ್ಚಿಸುವಲ್ಲಿ ಪೂರಕವಾಗಿದೆ ಎಂದು ಗ್ರಾಪಂ ಅಧ್ಯಕ್ಷ ಎಚ್.ಬಿ. ಶ್ರೀಧರ್ ಅಭಿಪ್ರಾಯಪಟ್ಟರು. ತಾಲೂಕಿನ ಹಿರಿಕ್ಯಾತನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ತಿಂಗಳ ತಿರುಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ದಿನೇಶ್ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಕೆ.ಎಂ. ವಾಡಿ ಹಾಗೂ ಹಿರಿಕ್ಯಾತನಹಳ್ಳಿ ಕ್ಲಸ್ಟರ್ನ ಸಿಆರ್ಪಿ ಜಯರಾಮೇಗೌಡ, ಮುಖ್ಯಶಿಕ್ಷಕ ಚನ್ನಬಸಪ್ಪ, ಎಸ್ಡಿಎಂಸಿ ಸದಸ್ಯೆ ಪಾರ್ವತಿ, ಶಿಕ್ಷಕರಾದ ನಟರಾಜ್, ಎಚ್.ಜೆ. ಯೋಗೇಂದ್ರ, ಸುಮ, ಮೋಹನ್, ಸುಲೋಚನ, ಜಗದೀಶ್ ಭಾಗವಹಿಸಿದ್ದರು. ಮುಖ್ಯ ಶಿಕ್ಷಕ ಚನ್ನಬಸಪ್ಪನವರ ಹುಟ್ಟುಹಬ್ಬದ ಅಂಗವಾಗಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ಬುಕ್ ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

