ಮೈಸೂರು

ಗಣಕಯಂತ್ರ ನ್ಯಾಯಿಕ ಸೇವಾ ಕೇಂದ್ರಕ್ಕೆ ಚಾಲನೆ

Published On :

ಕ.ಪ್ರ.ವಾರ್ತೆ ಕೆ.ಆರ್. ನಗರ ಆ. 2
ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಅಂತರ್ಜಾಲದ ಮೂಲಕವೇ ವಕೀಲರು ಮತ್ತು ಕಕ್ಷಿದಾರರು ತಾವಿರುವ ಸ್ಥಳದಲ್ಲಿಯೆ ನ್ಯಾಯಾಲಯದ ಪ್ರಕರಣ ಮತ್ತು ಕೇಸಿನ ಸಂಪೂರ್ಣ ವಿವರ ಪಡೆದುಕೊಳ್ಳುವುದರಿಂದ ಸಮಯ ಮತ್ತು ಹಣ ಉಳಿತಾಯವಾಗುತ್ತದೆ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮೋಹನ ಶ್ರೀಪಾದ ಸಂಕೊಳ್ಳಿ ಹೇಳಿದರು.
ಇಲ್ಲಿನ ನ್ಯಾಯಾಲಯದಲ್ಲಿ ನೂತನವಾಗಿ ಆರಂಭಿಸಿರುವ ವೆಬ್ಸೈಟ್ ಮತ್ತು ಗಣಕಯಂತ್ರ ನ್ಯಾಯಿಕ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿ, ಪ್ರಕರಣಗಳು ಶೀಘ್ರ ವಿಲೇವಾರಿಯಾಗಲು ತಂತ್ರಜ್ಞಾನ ಸಹಕಾರಿಯಾಗಲಿದೆ. ಇದರ ಸೇವೆ ಎಲ್ಲರಿಗೂ ಸದುಪಯೋಗವಾಗಬೇಕು ಎಂದು ತಿಳಿಸಿದರು.
ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯದಲ್ಲಿ ಇದ್ದ ಅಂತರ್ಜಾಲ ಸೇವೆಯನ್ನು ತಾಲೂಕು ನ್ಯಾಯಾಲಯಗಳಿಗೂ ವಿಸ್ತರಿಸಿದ್ದು, ಕಲಾಪಗಳು ಅನಗತ್ಯವಾಗಿ ಮುಂದಕ್ಕೆ ಹೋಗುವುದು ತಪ್ಪುವುದರ ಜೊತೆಗೆ, ಜಿಲ್ಲಾ ಮತ್ತು ರಾಜ್ಯ ಕೇಂದ್ರಗಳಲ್ಲಿ ಕುಳಿತು ನ್ಯಾಯಾಲಯದ ಕಲಾಪ ವೀಕ್ಷಿಸುವ ಅನುಕೂಲ ಲಭ್ಯವಾಗಲಿದೆ ಎಂದು ಹೇಳಿದರು.
ನ್ಯಾಯಾಲಯದಲ್ಲಿ ಅಂತರ್ಜಾಲದ ಸೇವೆ ಒದಗಿಸಿದ ನಂತರ ಆವರಣದಲ್ಲಿ ಟಚ್ ಸ್ಕ್ರೀನ್ ಆಳವಡಿಸಲಿದ್ದು, ಕಕ್ಷಿದಾರರು ತಮ್ಮ ಪ್ರಕರಣದ ಸಂಖ್ಯೆಯನ್ನು ಒತ್ತಿದರೆ ಸಂಪೂರ್ಣ ಮಾಹಿತಿ ಪಡೆಯುವ ವ್ಯವಸ್ಥೆಯು ಶೀಘ್ರದಲ್ಲಿಯೆ ದೊರಕಲಿದ್ದು, ಇದರಿಂದ ಗ್ರಾಮೀಣ ಪ್ರದೇಶದ ಕಕ್ಷಿದಾರರಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದರು.
ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಲ್ಕ ಪಾವತಿಸುವವರು, ಸಮನ್ಸ್ ಶುಲ್ಕ ಮತ್ತು ನಕಲು ಪ್ರತಿ ಪಡೆಯುವ ಸೇವೆಯು ಇನ್ನು ಮುಂದೆ ಸಿಗಲಿದ್ದು, ಈ ಎಲ್ಲ ಸವಲತ್ತುಗಳ ಅನುಕೂಲತೆ ಪಡೆದುಕೊಳ್ಳಿ ಎಂದು ಹೇಳಿದರು.
ಹಿರಿಯ ಶ್ರೇಣಿ ನ್ಯಾಯಾಧೀಶ ಗುರುಮೂರ್ತಿ, ಕಿರಿಯ ಶ್ರೇಣಿ ನ್ಯಾಯಾಧೀಶರಾದ ನೂರುನ್ನೀಸಾ, ವಕೀಲರ ಸಂಘದ ಅಧ್ಯಕ್ಷ ದುರ್ಗೇಶ್, ಕಾರ್ಯದರ್ಶಿ ಡಿ.ಆರ್. ರಮೇಶ್, ಸರ್ಕಾರಿ ವಕೀಲರಾದ ಶ್ರೀನಿವಾಸ್, ಅಪರ ಸರ್ಕಾರಿ ವಕೀಲ ಕೆ.ಸಿ. ಶಿವಕುಮಾರ್, ಹಿರಿಯ ವಕೀಲರಾದ ಶಿವಸ್ವಾಮಿ, ಕೃಷ್ಣರಾಜೇಅರಸ್, ಮಾಜಿ ಅಧ್ಯಕ್ಷರಾದ ಬಿ. ಮಹದೇವ್, ವಿಶ್ವನಾಥ್, ರುದ್ರಮೂರ್ತಿ, ವಕೀಲರಾದ ತಿಮ್ಮೇಗೌಡ, ಚಂದ್ರಮೌಳಿ, ಕೆ.ಪಿ. ಮಂಜುನಾಥ್, ಕೆ.ವಿ. ಮಹೇಶ್, ಪದ್ಮಶ್ರೀ, ಪ್ರಭಾವತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.