ಮೈಸೂರು

ಪ್ರಶಸ್ತಿಗಾಗಿ ಪತ್ರಕರ್ತರಿಂದ ಅರ್ಜಿ ಆಹ್ವಾನ

Published On :

ಹುಣಸೂರು: ಪತ್ರಿಕಾ ದಿನಾಚರಣೆ ಅಂಗವಾಗಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ 2013- 14ನೇ ಸಾಲಿನ ಪ್ರಶಸ್ತಿಗಾಗಿ ಜಿಲ್ಲಾ ಗ್ರಾಮಾಂತರ ಅಭಿವೃದ್ಧಿ ಲೇಖನ ಆಹ್ವಾನಿಸಲಾಗಿದೆ. ಪತ್ರಕರ್ತ ಎಚ್.ಎಸ್. ಸಚ್ಚಿತ್ ಸ್ಥಾಪಿಸಿರುವ ಎಚ್.ಆರ್. ಶ್ರೀನಿವಾಸ್ ವಾರ್ಷಿಕ ಪ್ರಶಸ್ತಿಗೆ ಜುಲೈ 2012 ರಿಂದ ಜೂನ್ 2013 ರೊಳಗಿನ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ಅಭಿವೃದ್ಧಿ ವರದಿಯನ್ನು ಮೂರು ಪ್ರತಿಯಲ್ಲಿ ಆ. 10 ರೊಳಗೆ ಧರ್ಮಾಪುರ ನಾರಾಯಣ್, ಅಧ್ಯಕ್ಷರು, ತಾಲೂಕು ಪತ್ರಕರ್ತರ ಸಂಘ, ಎಂಪೈರ್ ಟವರ್, ಮೊದಲ ಮಹಡಿ, ಕಿರಿಜಾಜಿ ರಸ್ತೆ, ಹುಣಸೂರು. ಇಲ್ಲಿಗೆ ಕಳುಹಿಸುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ದಾ.ರಾ. ಮಹೇಶ್ ತಿಳಿಸಿದ್ದಾರೆ. ಚರ್ಚಾ ಸ್ಪರ್ಧೆ: ಪತ್ರಿಕಾ ದಿನಾಚರಣೆ ಅಂಗವಾಗಿ ಆ.13ರ ಬೆಳಗ್ಗೆ 10.30ಕ್ಕೆ ಹನಗೋಡು ಸರ್ಕಾರಿ ಪಿಯು ಕಾಲೇಜಿನಲ್ಲಿ ದಿ.ಎಚ್.ಆರ್. ಶ್ರೀನಿವಾಸ್, ಹನಗೋಡಿನ ದಿ. ಎಚ್.ಎಸ್. ಮಂಜುನಾಥ್, ದಿ. ಎಂ.ಎ. ಶ್ರೀನಿವಾಸನ್ ಅವರ ಸ್ಮರಣಾರ್ಥ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಸ್ತುತ ಚುನಾವಣೆ ವ್ಯವಸ್ಥೆ ಪ್ರಜಾಭುತ್ವದ ಯಶಸ್ವಿಗೆ ಪೂರಕವೇ ಅಥವಾ ಮಾರಕವೇ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸಮಾಜದ ಮೇಲೆ ಮಾಧ್ಯಮಗಳ ಪ್ರಭಾವ ಪೂರಕವೇ ಅಥವಾ ಮಾರಕವೇ ಎಂಬ ವಿಷಯವಾಗಿ ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರತಿ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಬಹುದು ಎಂದು ತಿಳಿಸಿದ್ದಾರೆ. ಮೊ. 9845653548 ಸಂಪರ್ಕಿಸಿ.

ತಂಬಾಕು ಬ್ಯಾರನ್‌ಗೆ ಬೆಂಕಿ
ಪಿರಿಯಾಪಟ್ಟಣ: ತಂಬಾಕು ಬ್ಯಾರನ್‌ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುಟ್ಟು ಹೋಗಿರುವ ಘಟನೆ ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕಾಳಮ್ಮ ಎಂಬವರಿಗೆ ಸೇರಿದ ಸಿಂಗಲ್ ಬ್ಯಾರನ್‌ನಲ್ಲಿ ಕ್ಯೂರಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದು ಅಂದಾಜು 2 ಲಕ್ಷ ನಷ್ಟ ಸಂಭವಿಸಿದೆ. ಬ್ಯಾರನ್ ಗ್ರಾಮದ ಒಳಗಿರುವುದರಿಂದ ಸುತ್ತಮುತ್ತಲು ವಾಸದ ಮನೆಗಳಿದ್ದು, ಸಕಾಲಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದು, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.