ದಾರ್ಶನಿಕರ ಮೌಲ್ಯ ಅನುಷ್ಠಾನ ಅವಶ್ಯ: ಶ್ರೀನಿವಾಸಪ್ರಸಾದ್
ಕ.ಪ್ರ.ವಾರ್ತೆ ನಂಜನಗೂಡು ಆ. 4
ದಾರ್ಶನಿಕರ ಹೆಸರಿನ ವೈಭವೀಕರಣಕ್ಕಿಂತಲೂ ಅವರ ಮೌಲ್ಯಗಳ ಚಿಂತನೆ ಮತ್ತು ಅನುಷ್ಠಾನ ಹೆಚ್ಚು ಅಗತ್ಯ ಎಂದು ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಕ್ರಾಂತಿಕಾರಿ ವೀರಶೈವ ಬಳಗ ಉದ್ಘಾಟಿಸಿ ಮಾತನಾಡಿ, ಉದಾತ್ತ ಮೌಲ್ಯ ಹೊಂದಿರುವ ವೀರಶೈವ ಧರ್ಮ ಕೇವಲ ಜಾತಿಗೆ ಸೀಮಿತವಾಗಿರುವ ಕಾರಣಕ್ಕಾಗಿಯೇ ವಿಶ್ವಧರ್ಮವಾಗಬಹುದಾದ ಎಲ್ಲಾ ಅವಕಾಶದಿಂದ ವಂಚಿತವಾಗಿದೆ ಎಂದ ಅವರು, ಬಸವಣ್ಣನ ಚಿಂತನೆಗಳ ಅನುಷ್ಠಾನಕ್ಕೆ ಹೆಚ್ಚು ಪ್ರಯತ್ನಿಸುವಂತೆ ವೀರಶೈವ ಸಮುದಾಯಕ್ಕೆ ಸಲಹೆ ನೀಡಿದರು.
ನಂಜನಗೂಡು ಪಟ್ಟಣದಲ್ಲಿ ಬಸವ ಭವನ ನಿರ್ಮಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದ ಸಚಿವರು ಸಂಬಂಧಪಟ್ಟವರ ಜತೆ ಚರ್ಚಿಸಿ ಭವನ ನಿರ್ಮಾಣಕ್ಕೆ ಶೀಘ್ರ ನಿರ್ಧಾರ ತಳೆಯುವುದಾಗಿ ಹೇಳಿದರು.
ಸಚಿವರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿ ಮಾತನಾಡಿದ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊರಬದ ಮಲ್ಲಿಕಾರ್ಜುನ, ವೀರಶೈವ ಧರ್ಮ ಕೇವಲ ಜಾತಿಗೆ ಸೀಮಿತವಾಗಬಾರದು ಎಂದರು.
ದಕ್ಷಿಣಕಾಶಿ ನಂಜನಗೂಡು ಪುಣ್ಯಕ್ಷೇತ್ರವಾಗಿದೆ. ವೀರಶೈವ ಧರ್ಮದ ಸುತ್ತೂರು, ದೇವನೂರು, ಮಲ್ಲನಮೂಲೆ ಮಠಗಳನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡು ಸಮುದಾಯದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದೆ. ಮಠಾಧೀಶರು ಸಮಾಜದ ಉನ್ನತಿಗಾಗಿ ಶಿಕ್ಷಣ, ದಾಸೋಹ ಸೇವೆಯಲ್ಲಿ ತೊಡಗಿದ್ದಾರೆ. ಸಂಘ- ಸಂಸ್ಥೆಗಳು ಕೇವಲ ಉದ್ಘಾಟನೆಗಾಗಿ ಸೀಮಿತಗೊಳ್ಳದೆ ಸಮಾಜ ಉನ್ನತಿಗಾಗಿ ಶ್ರಮಿಸಬೇಕೆಂದು ಎಂದರು.
ಮೈಸೂರು ನಗರಪಾಲಿಕೆ ಸದಸ್ಯ ಎಂ. ಪ್ರದೀಪ್ ಕುಮಾರ್ ಹಾಗೂ ಮೈಸೂರು ವಿಶ್ವವಿದ್ಯಾನಲಯದಿಂದ 8 ಚಿನ್ನದ ಪದಕ, ಪುರಸ್ಕೃತರಾದ ಎಂ. ಅಕ್ಷತ ಅವರನ್ನು ಬಳಗದಿಂದ ಸನ್ಮಾನಿಸಲಾಯಿತು.
ಸುತ್ತೂರು ಮಠಾಧೀಶರಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ದೇವನೂರು ಮಠದ ಮಹಾಂತ ಸ್ವಾಮೀಜಿ, ಮಲ್ಲನಮೂಲೆ ಮಠದ ಚೆನ್ನಬಸವೇಶ್ವರ ಸ್ವಾಮೀಜಿ ಹಾಗೂ ಶರಣ ಸಂಗಮ ಮಠದ ನಾಗರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ಜಿಪಂ ಸದಸ್ಯರಾದ ಕಾ.ಪು. ಸಿದ್ದವೀರಪ್ಪ, ಸಿಂಧುವಳ್ಳಿ ಕೆಂಪಣ್ಣ, ಚಿಕ್ಕರಂಗನಾಯಕ, ಸಮಾಜ ಸೇವಕ ಯು.ಎನ್. ಪದ್ಮನಾಭರಾವ್, ಎಪಿಎಂಸಿ ಅಧ್ಯಕ್ಷ ಗುರುಸ್ವಾಮಿ, ಮಾಜಿ ಪುರಸಭಾ ಅಧ್ಯಕ್ಷ ಆರ್.ವಿ. ಮಹದೇವಸ್ವಾಮಿ, ಮಾಜಿ ಪುರಸಭಾ ಅಧ್ಯಕ್ಷ ಎಂ. ಶ್ರೀಧರ್, ಕೆ.ವಿ. ಶಿವಕುಮಾರ್, ಮಾಜಿ ಮೇಯರ್ ದಕ್ಷಿಣಮೂರ್ತಿ, ನಾರಾಯಣರೆಡ್ಡಿ, ವಕೀಲ ನಂಜುಂಡಸ್ವಾಮಿ, ಬಸವರಾಜು, ಶಿವಪಾದಸ್ವಾಮಿ, ಗದ್ದಿಗೆ ಅಧ್ಯಕ್ಷ ಮಾದಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಚಿನ್ನಂಬಳ್ಳಿ ಮಂಜುನಾಥ್, ಟಿಎಪಿಎಂಎಸ್ನ ಮಾಜಿ ಅಧ್ಯಕ್ಷ ಕುರಹಟ್ಟಿ ಮಹೇಶ್, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಂ. ಮಹೇಶ್, ಸಂಘದ ಗೌರವಾಧ್ಯಕ್ಷ ನಾಗರಾಜಪ್ಪ ಜಿ. ಮರಳ್ಳಿ, ಅಧ್ಯಕ್ಷ ಎನ್. ಮಹೇಶ್, ಮುಖಂಡರಾದ ಜಗದೀಶ್, ಪುರಸಭಾ ಸದಸ್ಯೆ ಅನುಸೂಯ ಗಣೇಶ್, ಎನ್.ಸಿ. ಬಸವಣ್ಣ, ಜಿ. ಮಹದೇವಪ್ರಸಾದ್, ಎಸ್. ಮಹೇಶ್, ಬಸವಣ್ಣ ತಗಡೂರು, ಶಿವರುದ್ರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

