ಮಸ್ತಕ ಬೆಳೆಸಲು ಪುಸ್ತಕ ಸಾಧನ'
ಕ.ಪ್ರ.ವಾರ್ತೆ ಮೈಸೂರು ಆ. 4
ಮಸ್ತಕ ಬೆಳೆಸಲು ಪುಸ್ತಕ ಅಮೃತ ಸಾಧನ ಎಂದು ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಪ್ರೊ. ಎಚ್.ಜೆ. ಲಕ್ಕಪ್ಪಗೌಡ ಹೇಳಿದರು.
ಮಹಾರಾಜ ಕಾಲೇಜು ಸ್ನಾತಕ ಗ್ರಂಥಾಲಯವು ಮೈಸೂರು ವಿವಿ ಸಂಜೆ ಕಾಲೇಜು ಎನ್ಎಸ್ಎಸ್ ಘಟಕದಿಂದ ಶನಿವಾರ ಏರ್ಪಡಿಸಿದ್ದ ಪುಸ್ತಕ ಪ್ರೀತಿ ಮಾಸಿಕ ವಿಶೇಷ ಉಪನ್ಯಾಸ ಮಾಲಿಕೆ-1 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಹಳ ಹಿಂದಿನಿಂದಲೂ ಪುಸ್ತಕ ಪೂಜಿಸಿಕೊಂಡು ಬರಲಾಗುತ್ತಿದೆ. ಭಗವದ್ಗೀತೆ, ಬೈಬಲ್, ಕುರಾನ್ ಇವುಗಳನ್ನೇ ಜೀವನ ವಿಧಾನವಾಗಿ, ಆಚರಣೆಯ ಭಾಗವಾಗಿ ಆಚರಿಸುತ್ತಿದ್ದೇವೆ ಎಂದರು.
ಪುಸ್ತಕಗಳು ಮನೆ- ಮಂದಿರಗಳಿಗೆ ಭೂಷಣವಾಗುವ ಮೊದಲು ಮನಸ್ಸಿಗೆ ಭೂಷಣವಾಗಬೇಕು. ಪುಸ್ತಕ ಕೊಂಡು ಒಂದೆರಡು ಹಾಳೆ ಓದಿದ ಬಳಿಕ ಪಕ್ಕಕ್ಕಿಡುವುದು ತಪ್ಪಬೇಕು. ಪುಸ್ತಕ ಓದುತ್ತಿದ್ದರೆ ತಲ್ಲೀನತೆ ಆವರಿಸಬೇಕು. ಆಗ ಓದಿನ ಸ್ವಾದ ತಿಳಿಯುತ್ತದೆ. ಮನೆಯಲ್ಲಿ ಒಂದಷ್ಟು ಪುಸ್ತಕಗಳನ್ನು ಇರಿಸಿದರೆ ಮಕ್ಕಳಾದರೂ ಓದುತ್ತಾರೆ. ಅವರಲ್ಲಿ ಪುಸ್ತಕಪ್ರೇಮ ಬೆಳೆಸಬೇಕು. ನಾವು ಚಿಕ್ಕವರಾಗಿದ್ದಾಗ ಕೇಳಿದ ಲಾಲಿಹಾಡು, ಜೋಗಿ ಹಾಡು, ಗೋವಿನ ಹಾಡು ಇಂದಿಗೂ ಜ್ಞಾಪಕದಲ್ಲಿದೆ. ಆದ್ದರಿಂದ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಓದುವ ಹವ್ಯಾಸ ಬೆಳೆಸಿದರೆ ಮುಂದೊಂದು ಫಲ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.
ರಸಋಷಿ ಕುವೆಂಪು ಅವರು ಬರೆದಿರುವ ಶ್ರೀರಾಮಯಣ ದರ್ಶನಂ ಕೃತಿಯು ದುಷ್ಟರ ಮನ ಪರಿವರ್ತನೆಯ ಗುಣ ಹೊಂದಿದೆ. ಶ್ರೀರಾಮಾಯಣ ದರ್ಶನಂನಲ್ಲಿ ಮೂಲ ರಾಮಾಯಣದ ಪಾತ್ರಗಳ ಆಯಾಮವನ್ನು ಬದಲಿಸಿದ್ದಾರೆ. ಸ್ತ್ರೀ ವ್ಯಾಮೋಹಿ ರಾವಣ ಇಲ್ಲಿ ಮಾಯವಾಗಿದ್ದಾನೆ. ಆತನ ಮತ್ತೊಂದು ಚಿತ್ರಣ ಇಲ್ಲಿ ಕಾಣಸಿಕೊಳ್ಳುತ್ತದೆ ಎಂದು ತಿಳಿಸಿದರು.
ಮೈಸೂರು ವಿವಿ ಸಂಜೆ ಕಾಲೇಜು ಪ್ರಾಂಶಪಾಲ ಡಾ.ಸಿ.ಎಸ್. ರಾಮಾನಾರಾಯಣ್, ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಡಿ. ವಿಜಯಲಕ್ಷ್ಮಿ, ಸಹ ಪ್ರಾಧ್ಯಾಪಕ ಡಾ.ಎನ್. ಶಾಂತನಾಯಕ್, ಮಹಾರಾಜ ಸ್ನಾತಕ ಗ್ರಂಥಾಲಯ ಉಪ ಗ್ರಂಥಪಾಲಕ ಆರ್.ಕೆ. ಸೋಮಶೇಖರ್, ವಿವಿ ಸಂಜೆ ಕಾಲೇಜು ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ. ಸಿ.ಡಿ. ಪರುಶುರಾಮ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

