ಟ್ರಸ್ಟ್ ವಿವಾದ; ತಹಸೀಲ್ದಾರ್ ವಿರುದ್ಧ ದಂಪತಿ ಪ್ರತಿಭಟನೆ
ಕ.ಪ್ರ.ವಾರ್ತೆ ನಂಜನಗೂಡು ಆ. 5
ದೇವಾಲಯ ಟ್ರಸ್ಟ್ನ ಹಕ್ಕಿಗೆ ಒತ್ತಾಯಿಸಿ ಮತ್ತು ತಹಸೀಲ್ದಾರ್ ಧೋರಣೆ ಖಂಡಿಸಿ ತಾಲೂಕಿನ ಬಿದರಗೂಡು ಗ್ರಾಮದ ಕುಟುಂಬ ಒಂದರ ಸದಸ್ಯರು ಸೋಮವಾರ ತಹಸೀಲ್ದಾರ್ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಮಹದೇಶ್ವರ ಸ್ವಾಮಿ ದೇಗುಲಕ್ಕೆ ಸೇರಿದ ಶಿವಣ್ಣ ಎಂಬುವರ ಪತ್ನಿ ರತ್ನಮ್ಮ ಧರಣಿ ನಡೆಸಿದವರು.
ದೇಗುಲ ಅಭಿವೃದ್ಧಿಗೆ ತನು-ಮನ, ಧನ ಸಮರ್ಪಿಸಿ ದೇವಾಲಯ ನಿರ್ಮಾಣ ಮಾಡಿ, ಜೀರ್ಣೋದ್ಧಾರಕ್ಕಾಗಿ ಕೋಟಿಗೊಬ್ಬ ಶರಣ ಮಹದೇಶ್ವರ ಸ್ವಾಮಿ ಟ್ರಸ್ಟ್ ರಚಿಸಿಕೊಂಡು, ಭಕ್ತಾದಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಗ್ರಾಮದ ಕೆಲವರು ನಮ್ಮ ಏಳಿಗೆ ಸಹಿಸದೆ ಶಿವರುದ್ರ ಎಂಬುವರ ನೇತೃತ್ವದಲ್ಲಿ ಮಹದೇಶ್ವರ ಟ್ರಸ್ಟ್ ಹುಟ್ಟು ಹಾಕಿ ನಮ್ಮನ್ನು ಹೊರಹಾಕಿದ್ದಾರೆ. ಇದರ ಬಗ್ಗೆ ನ್ಯಾಯ ಕೇಳಲು ತಹಸೀಲ್ದಾರ್ ಬಳಿ ಹೋದಾಗ ಸೌಜನ್ಯದಿಂದ ವರ್ತಿಸಲಿಲ್ಲ, ಹಾಗಾಗಿ ಪ್ರತಿಭಟನೆ ನಡೆಸುತ್ತಿರುವುದಾಗಿ ದಂಪತಿ ತಿಳಿಸಿದರು.
ತಹಸೀಲ್ದಾರ್ ಅರುಳ್ ಕುಮಾರ್ ಮಾತನಾಡಿ, ಪ್ರಸ್ತುತ ದೇವಾಲಯದಲ್ಲಿ ಗ್ರಾಮದ ಮಹದೇಶ್ವರ ಟ್ರಸ್ಟ್ನವರು ಸೇವಾ ಕೈಂಕರ್ಯ ನಡೆಸುತ್ತಿದ್ದಾರೆ. ದೇಗುಲದ 5 ಎಕರೆ ನಿವೇಶನದ ದಾಖಲೆ ಮಹದೇಶ್ವರ ಸ್ವಾಮಿ ದೇವರ ಹೆಸರಿನಲ್ಲಿದೆ. ಈ ದೇವಾಲಯದ ವ್ಯಾಜ್ಯ ಬಗೆಹರಿಸಲು 2 ಬಾರಿ ಗ್ರಾಮಕ್ಕೆ ತೆರಳಿದ ಸಂದರ್ಭದಲ್ಲಿ ಶಿವಣ್ಣ ಹಾಜರಿರುವುದಿಲ್ಲ. ಟ್ರಸ್ಟ್ ನೀತಿ ನಿಯಮಾವಳಿ ದೇವಾಲಯದ ಆದಾಯ ದಾಖಲೆ ಪರಿಶೀಲಿಸಿ, ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸುವ ಸಾಧ್ಯತೆ ಕುರಿತಂತೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

