ಮೈಸೂರು

ಉದ್ಯೋಗ ಕೊಡಿಸುವ ವಂಚನೆ; ಸೆರೆ

Published On :

ಟಿ. ನರಸೀಪುರ: ಜನರಿಗೆ ನಿವೇಶನ, ನಿರುದ್ಯೋಗಿಗಳಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡಿ ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ವಾಟಾಳು ಗ್ರಾಮದ ಕುಳ್ಳಪ್ಪ ಎಂಬವರ ಪುತ್ರ ರಾಜು ಆಲಿಯಾಸ್ ಗಿರೀಶ್ (36) ಬಂಧಿತ ಆರೋಪಿ. ಈತ ನ್ಯಾಯಾಧೀಶರೊಬ್ಬರ ಆಪ್ತ ಸಹಾಯಕನೆಂದು ಹೇಳಿಕೊಂಡು, ನಕಲಿ ಸೀಲು ಮತ್ತು ಫೋರ್ಜರಿ ಸಹಿ ಬಳಸಿ ಯುವಕನೊಬ್ಬನಿಗೆ ನಕಲಿ ನೌಕರಿ ಆದೇಶ ನೀಡಿ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಬಂಧಿತ ವಂಚಕ ಗಿರೀಶ್ನಿಂದ 92,300 ನಗದು ಹಣ, ನಂಜನಗೂಡು ಮುಜರಾಯಿ ಇಲಾಖೆಯ ನಕಲಿ ಸೀಲು ಹಾಗೂ ಅನೇಕ ನಕಲಿ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಆ.14ರ ಬುಧವಾರ ಮಧ್ಯಾಹ್ನ ವಿವೇಕಾನಂದ ನಗರದ ಬಾಡಿಗೆ ಮನೆಯ ಮೇಲೆ ಸಬ್ ಇನ್ಸ್ಪೆಕ್ಟರ್ ಕೆ.ಆರ್. ಗೋಪಿಕೃಷ್ಣ, ಪೇದೆ ಜವರೇಶ್ ದಾಳಿ ಮಾಡಿ, ಆರೋಪಿಯನ್ನು ಬಂಧಿಸಿದ್ದಾರೆ.
ನೌಕರಿ ಆದೇಶ ನೀಡಿ ಸಿಕ್ಕಿಬಿದ್ದ: ಯುವನೊಬ್ಬನಿಗೆ ಮುಜರಾಯಿ ಇಲಾಖೆಯಲ್ಲಿ ಕೆಲಸಕ್ಕೆ ನಿಯೋಜಿಸಲಾಗಿದೆ ಎಂಬ ನಕಲಿ ನೌಕರಿ ಆದೇಶ ನೀಡಿ ಗಿರೀಶ್ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಇಲ್ಲಿನ ನಿತಿನ್ಕುಮಾರ್ ಎಂಬ ಯುವಕನಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಯ ಮೇಲೆ ಗಿರೀಶ್ ನಂಜನಗೂಡಿನ ಮುಜರಾಯಿ ದೇವಾಲಯದಲ್ಲಿ ನೌಕರಿ ಕೊಡಿಸುವುದಾಗಿ ಭರವಸೆ ಕೊಟ್ಟು, ಒಂದು ಲಕ್ಷ ರು.ಗಳ ಹಫ್ತಾ ಕೊಡಬೇಕೆಂದು ಹೇಳಿ, 11,700 ಮುಂಗಡ ಪಡೆದುಕೊಂಡು ನೌಕರಿ ಆದೇಶ ಕೊಟ್ಟಿದ್ದ. ಆದೇಶ ಪಡೆದ ಯುವಕ ಉದ್ಯೋಗ ಪಡೆಯಲು ನಂಜನಗೂಡಿನ ದೇವಾಲಯಕ್ಕೆ ತೆರಳಿದಾಗ, ಈತನ ವಂಚನೆ ಬಯಲಾಗಿದೆ. ತನಗಾದ ಅನ್ಯಾಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಕಾರ್ಯಪ್ರವೃತ್ತರಾದ ಪೊಲೀಸರು ಗಿರೀಶನನ್ನು ಬಂಧಿಸಿ, ಆ. 28 ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.