ಮಳಿಗೆ ಕೊಡಿಸುವುದಾಗಿ ವಂಚನೆ: ಒಬ್ಬ ಸೆರೆ
ಕ.ಪ್ರ.ವಾರ್ತೆ ಟಿ.ನರಸೀಪುರ ಆ. 28
ಪಪಂ ವಾಣಿಜ್ಯ ಮಳಿಗೆಗಳ ಹಂಚಿಕೆಯಲ್ಲಿನ ಅವ್ಯವಹಾರ ಬಯಲಾಗಿದ್ದು, ಪೆಟ್ಟಿಗೆ ಅಂಗಡಿ ಮಹಿಳಾ ವ್ಯಾಪಾರಿಯೊಬ್ಬರಿಗೆ ಮಳಿಗೆ ಕೊಡಿಸುವುದಾಗಿ ಹಣ ಪಡೆದುಕೊಂಡು ವಂಚಿಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಬಳೆ ಅಂಗಡಿ ಬೀದಿ ನಿವಾಸಿ ಚಿನ್ನಬುದ್ಧಿ ರಾಜೇ ಅರಸ್ ಬಂಧಿತ ವ್ಯಕ್ತಿ. ಈತ ಹಳೇ ಕುರುಬಗೇರಿಯ ಲೇಟ್ ಜೆ. ಮಹದೇವ ಎಂಬವರ ಪತ್ನಿ ಗೌರಮ್ಮ ಅವರಿಗೆ ಪಪಂ ವಾಣಿಜ್ಯ ಮಳಿಗೆಯನ್ನು ಮಂಜೂರು ಮಾಡಿಸುವುದಾಗಿ 24 ಸಾವಿರ ಲಂಚ ಪಡೆದುಕೊಂಡು ವಂಚಿಸಿದ್ದಾನೆ.
ಹಣ ಕೇಳಿದ್ದಕ್ಕೆ ಬೈದಿದ್ದ: ಪಪಂ ವಾಣಿಜ್ಯ ಮಳಿಗೆಗಳ ಹಂಚಿಕೆಯಲ್ಲಿನ ಅವ್ಯವಹಾರದ ರೂವಾರಿಯಾಗಿರುವ ಚಿನ್ನಬುದ್ಧಿ ರಾಜೇ ಅರಸ್ ಮಳಿಗೆ ವಂಚಿತಳಾದ ಗೌರಮ್ಮ ನೀಡಿದ ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದಕ್ಕೆ ಬೈದು ಕಳುಹಿಸಿದ್ದ, ಈ ಹಿನ್ನೆಲೆ ಗೌರಮ್ಮ ಪೊಲೀಸರಿಗೆ ದೂರು ನೀಡಿದ್ದರು.
ಮಳಿಗೆಯೊಂದಕ್ಕೆ 84 ಸಾವಿರ ಹಣ ನೀಡಬೇಕು. ಅದರಲ್ಲಿ 60 ಸಾವಿರಕ್ಕೆ ಪಪಂ ಹೆಸರಿನಲ್ಲಿ ಡಿ.ಡಿ, ಇನ್ನುಳಿದ 24 ಸಾವಿರ ನಗದು ರೂಪದಲ್ಲಿ ನೇರವಾಗಿ ಸ್ವೀಕರಿಸಿದ್ದ ಈತ, ಮಳಿಗೆಯನ್ನೂ ಮಂಜೂರು ಮಾಡಿಸದೆ ಪಡೆದ ಹಣವನ್ನು ವಾಪಸ್ ಮಾಡದೆ ವಂಚನೆ ಮಾಡಿದ್ದಾನೆ.
ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೆ.ಆರ್. ಗೋಪಿಕೃಷ್ಣ ಅವರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಬಾಲ್ಯವಿವಾಹ ಪಿಡುಗು ನಿರ್ಮೂಲನೆಗೆ ಮುಂದಾಗಿ
ಕೆ.ಆರ್. ನಗರ: ಬಾಲ್ಯವಿವಾಹ ಸಮಾಜಕ್ಕೆ ದೊಡ್ಡ ಪಿಡುಗಾಗಿದ್ದು ಇದರ ನಿರ್ಮೂಲನೆಗೆ ಸಾರ್ವಜನಿಕರು ಪ್ರಯತ್ನಿಸಬೇಕು ಎಂದು ತಹಸೀಲ್ದಾರ್ ಬಿ.ಎನ್. ವೀಣಾ ಕುಮಾರ್ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಬಾಲ್ಯವಿವಾಹ ನಿಷೇಧ ಕುರಿತು ನಡೆದ ಚರ್ಚಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಬಡತನವನ್ನು ದುರುಪಯೋಗಪಡಿಸಿಕೊಂಡು ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಯನ್ನು ಜೀವಂತವಾಗಿಸುವುದನ್ನು ಎಲ್ಲರೂ ವಿರೋಧಿಸಬೇಕು ಎಂದು ಅವರು ಹೇಳಿದರು.
ನಮ್ಮ ಭವಿಷ್ಯದ ರೂವಾರಿಗಳು ನೀವೆ ಆದ್ದರಿಂದ ಬಾಲಕಿಯರು ಇಂತಹ ಸಮಸ್ಯೆಗಳು ಎದುರಾದಾಗ ದಿಟ್ಟತನದಿಂದ ಎದುರಿಸಬೇಕು. ಆಗ ಮಾತ್ರ ಇದರ ಸಂಪೂರ್ಣ ನಿರ್ಮೂಲನೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲು ರಾಮಕೃಷ್ಣ ಮಾತನಾಡಿದರು. ಬಿಇಒ ಎಸ್.ಟಿ. ಜವರೇಗೌಡ, ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಲೀಲಾಂಬಿಕಾ, ಅಂಗನವಾಡಿ ಮೇಲ್ವಿಚಾರಕಿ ಗಾಯತ್ರಿ ಹಂಡಿ, ತೀರ್ಪುಗಾರರಾದ ಸುಮ, ಪೂರ್ಣಿಮಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

