ಮೈಸೂರು

ಲಾರಿ ಮಾಲೀಕರ ಸಂಘದಿಂದ ಸರ್ವಾಧಿಕಾರಿ ಧೋರಣೆ

Published On :

ಟಿ. ನರಸೀಪುರ: ಸರ್ವಾಧಿಕಾರಿ ಧೋರಣೆ ಮೂಲಕ ದಿ ಮೈಸೂರ್ ಸಿಟಿ ಲೋಕಲ್ ಲಾರಿ ಮಾಲೀಕರ ಸಂಘದ ಅಧ್ಯಕ್ಷರು ಕಾರ್ಯಕಾರಿಣಿ ಸಮಿತಿಯ ನಿರ್ದೇಶಕರಿಬ್ಬರನ್ನು ಉಚ್ಚಾಟಿಸಿದ್ದಾರೆ ಎಂದು ಯುವ ಮುಖಂಡ ನಾಗರಾಜು ಆರೋಪಿಸಿದರು.
ಮೈಸೂರು ಸಿಟಿ ಲೋಕಲ್ ಲಾರಿ ಮಾಲೀಕರ ಸಂಘಕ್ಕೆ ಸಹಕಾರ ಇಲಾಖೆಯ ಸೂಚನೆ ಹಾಗೂ ಬೈಲಾದಂತೆ ನಡೆದ ಚುನಾವಣೆಯಲ್ಲಿ ಎನ್.ಲಿಂಗರಾಜು ಹಾಗೂ ಅಸ್ಗರ್ ಅಹ್ಮದ್ ಅವರು ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ. ಯಾವುದೇ ಮುನ್ಸೂಚನೆ ನೀಡದೆ ಅವರನ್ನು ವಜಾಗೊಳಿಸಿರುವ ಅಧ್ಯಕ್ಷ ರೇವಣ್ಣ ಅವರ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ಚುನಾಯಿತ ಪ್ರತಿನಿಧಿಯಾಗಿ ಆಯ್ಕೆಯಾದ ಸಂಘದ ನಿರ್ದೇಶಕರನ್ನು ವಜಾ ಮಾಡುವುದಕ್ಕೆ ಅಧ್ಯಕ್ಷರಿಗೆ ಯಾವುದೇ ಅಧಿಕಾರವಿಲ್ಲ. ಅಷ್ಟಕ್ಕೂ ವಜಾ ಮಾಡುವ ಅಧಿಕಾರವನ್ನು ನೀಡಿದವರು ಯಾರು ಎಂಬುದನ್ನು ಸ್ಪಷ್ಟಪಡಿಸಬೇಕು. ವಾರ್ಷಿಕ ಮಹಾಸಭೆಯಲ್ಲಿಟ್ಟು ಚರ್ಚಿಸಿ, ನಿರ್ಣಯ ಕೈಗೊಂಡು ಕ್ರಮ ಕೈಗೊಳ್ಳಬೇಕು. ಅದನ್ಯಾವುದನ್ನೂ ರೇವಣ್ಣ ಅವರು ಪಾಲಿಸಿಯೇ ಇಲ್ಲವೆಂದು ದೂರಿದ್ದಾರೆ. ಏಕಾಏಕಿ ಉಚ್ಚಾಟನೆ ಮಾಡಿರುವುದು ನಿಜಕ್ಕೂ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆ ಎತ್ತಿ ತೋರಿಸುತ್ತದೆ. ಲಾರಿ ಮಾಲೀಕರ ಸಂಘದ ನಿರ್ದೇಶಕ ಎನ್.ಲಿಂಗರಾಜು ದಲಿತ ಸಮುದಾಯವನ್ನು ಪ್ರತಿನಿಧಿಸುವ ಪ್ರತಿನಿಧಿಯಾಗಿದ್ದರೆ, ಅಸ್ಗರ್ ಅಹಮದ್ ಅಲ್ಪಸಂಖ್ಯಾತ ಸಮುದಾಯ ಪ್ರತಿನಿಧಿಸುತ್ತಾರೆ. ಇಂತಹವರನ್ನು ಮನಸೋ ಇಚ್ಛೆ ಉಚ್ಚಾಟಿಸುವರ ಅಧ್ಯಕ್ಷರ ಕ್ರಮದ ವಿರುದ್ಧ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ನಾಗ ರಾಜು, ಪ್ರಭುಸ್ವಾಮಿ ಎಚ್ಚರಿಸಿದ್ದಾರೆ.

ಶಾಲಾ ಮಕ್ಕಳಿಗೆ ಲೋಟ ವಿತರಣೆ
ಹೊಸೂರು: ಗ್ರಾಮೀಣ ಶಾಲೆಗಳ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಜಾರಿಗೆ ತಂದಿರುವ ಕ್ಷೀರ ಭಾಗ್ಯ ಯೋಜನೆಯಿಂದ ವಿದ್ಯಾರ್ಥಿಗಳು ಸದೃಢರಾಗಲು ಸಹಕಾರಿ ಆಗುತ್ತದೆ ಎಂದು ಕುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷ ಸಿ.ಕೆ. ಬಾಲಮನೋಹರ ಹೇಳಿದರು.
ಚುಂಚನಕಟ್ಟೆ ಹೋಬಳಿ ಮುದ್ದನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 75 ಮಂದಿ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಲೋಟ ವಿತರಿಸಿ ಮಾತನಾಡಿದ ಅವರು, ಈ ಯೋಜನೆ ಶಾಶ್ವತವಾಗಿ ಅನುಷ್ಠಾನಗೊಳ್ಳಬೇಕಾದರೆ ಗುಣಮಟ್ಟದ ಹಾಲು ವಿತರಣೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹೊಸೂರು ಎ.ಕುಚೇಲ್, ಎಸ್‌ಡಿಎಂಸಿ ಅಧ್ಯಕ್ಷ ಸುರೇಂದ್ರ, ಉಪಾಧ್ಯಕ್ಷೆ ಲೈಲ, ಸದಸ್ಯರಾದ ಸೋಮಪ್ಪ, ರಾಜೇಗೌಡ, ಶಿಕ್ಷಕರಾದ ಸ್ವಾಮಿ, ಜನಾರ್ಧನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.