ಮೈಸೂರು

ಕಿತ್ತೂರಿನಲ್ಲಿ ಕೆನರಾ ಬ್ಯಾಂಕ್ ಶಾಖೆ ಚಾಲನೆ

Published On :

ಕ.ಪ್ರ.ವಾರ್ತೆ ಕಿತ್ತೂರು ಆ. 31
ಬ್ಯಾಂಕಿನಿಂದ ಸಿಗುವ ವಿವಿಧ ಸಾಲ ಸೌಲಭ್ಯಗಳನ್ನು ಪಡೆದುಕೊಂಡು ತಾವೂ ಅಭಿವೃದ್ಧಿಯಾಗುವುದರ ಜತೆಗೆ ಬ್ಯಾಂಕ್ ಅನ್ನು ಅಭಿವೃದ್ಧಿಪಡಿಸಬೇಕು ಎಂದು ಮೈಸೂರು ಕೆನರಾ ಬ್ಯಾಂಕ್ ವೃತ್ತ ಕಚೇರಿಯ ವಿಭಾಗಿಯ ಪ್ರಬಂಧಕ ಸುರೇಶ್ ಸೇಥಿಯಾ ಹೇಳಿದರು.
ಗ್ರಾಮದಲ್ಲಿ ಕೆನರಾ ಬ್ಯಾಂಕ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶಾದ್ಯಂತ ಕೆನರಾ ಬ್ಯಾಂಕ್ 4,349 ಶಾಖೆಗಳನ್ನು ಹೊಂದಿದ್ದು, ದೇಶದಲ್ಲಿ ಎಲ್ಲ ದೀನದಲಿತರ, ರೈತರ ಉದ್ಧಾರಕ್ಕಾಗಿ ಹಲವಾರು ರೀತಿಯ ಸಾಲ ಸೌಲಭ್ಯ ನೀಡಲಾಗುತ್ತಿದೆ. ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಕೊಂಡು ಜೀವನದಲ್ಲಿ ಮುಂದೆ ಬರಬೇಕು. ಆಗ ದೇಶದ ಉದ್ದಾರ ಸಾಧ್ಯ ಎಂದು ತಿಳಿಸಿದರು.
ಕಿತ್ತೂರು ಶಾಖೆಯ ಬ್ಯಾಂಕ್ ವ್ಯವಸ್ಥಾಪಕ ಕೆ.ಶಂಕರ್ ಮಾತನಾಡಿ, ಈ ಗ್ರಾಮದಲ್ಲಿ ನೂತನವಾಗಿ ಬ್ಯಾಂಕ್ ತೆರೆಯಲಾಗಿದೆ, ತಂಬಾಕು ಬೆಳೆಗಾರರು, ವರ್ತಕರು ಹಾಗೂ ಇನ್ನಿತರರು ಸರಿಯಾದ ಸಮಯಕ್ಕೆ ಸಾಲ ಸೌಲಭ್ಯ ಪಡೆದು ತೀರಿಸಲು ಸಹ ಮುಂದಾಗಬೇಕು ಎಂದು ಹೇಳಿದರು.
ಎಪಿಎಂಸಿ ಅಧ್ಯಕ್ಷ ಕೆ.ಹೊಲದಪ್ಪ, ಮುಖಂಡ ಕೆ.ಜೆ. ವೆಂಕಟೇಶ್, ಎಂ.ಎಸ್. ಮಂಜುನಾಥ್, ಅಶೋಕ್, ಮಲ್ಲೇಗೌಡ, ಸ್ವಾಮಿಗೌಡ, ಪುಟ್ಟಸ್ವಾಮಿಗೌಡ, ಬೆಟ್ಟದಪುರ ಬ್ಯಾಂಕ್ ವ್ಯವಸ್ಥಾಪಕ ನಿಂಗೇಗೌಡ, ವ್ಯವಸ್ಥಾಪಕ ಎಚ್. ಅಮರನಾಥ್ ಇದ್ದರು.

ಮರ ಬಿದ್ದು ಶಾಲಾ ಕಾಂಪೌಂಡ್‌ಗೆ ಹಾನಿ
ಹುಣಸೂರು:
ತಾಲೂಕಿನ ಹನಗೋಡಿನಲ್ಲಿ ಕಳೆದ ರಾತ್ರಿ ಸುರಿದ ಭಾರಿ ಗಾಳಿ-ಮಳೆಗೆ ಶಾಲಾ ಆವರಣದಲ್ಲಿದ್ದ ಮರವೊಂದು ಬಿದ್ದು ಶಾಲಾ ಕಾಂಪೌಂಡ್‌ಗೆ ಹಾನಿಯುಂಟಾಗಿರುವ ಘಟನೆ ನಡೆದಿದೆ. ಹನಗೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬೆಳೆಸಲಾದ ಮರವೊಂದು ಕಳೆದ ರಾತ್ರಿ ಬೀಸಿದ ಭಾರಿ ಗಾಳಿ ಮಳೆಗೆ ಬೇರು ಸಮೇತ ಬಿದ್ದು, ಕಾಂಪೌಂಡ್ ಸಂಪೂರ್ಣ ಹಾನಿಯಾಗಿದೆ. ಸ್ಥಳಕ್ಕೆ ಹನಗೋಡು ಗ್ರಾಪಂ ಅಧ್ಯಕ್ಷೆ ಮಂಜುಳಾ ಮಹೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಪಾಷಾ ಸೇರಿದಂತೆ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು.
ಹನಗೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬೆಳೆಸಲಾದ ಹತ್ತಾರು ಮರಗಳಿಗೆ ತುಂಬಾ ವರ್ಷಗಳಾಗಿದ್ದು, ಬೇರುಗಳೆಲ್ಲಾ ಶಿಥಿಲಗೊಂಡಿದ್ದು, ಮಳೆ ಗಾಳಿಗೆ ಅಕ್ಕ-ಪಕ್ಕದ ಮನೆಗಳು ಹಾಗೂ ವಿದ್ಯುತ್ ಕಂಬಗಳ ಮೇಲೆ ಬೀಳುವ ಹಂತದಲ್ಲಿದೆ. ಶೀಘ್ರವೆ ಹಳೆಯ ಮರಗಳನ್ನು ತೆರವುಗೊಳಿಸಬೇಕೆಂದು ಅಧಿಕಾರಿಗಳನ್ನು ಹನಗೋಡಿನ ಶಿವಕುಮಾರ್ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.