ಸಚಿವ ಎಚ್ಕೆ ಪಾಟೀಲರಿಗೆ ಕಾದು ನಿರಾಶರಾದರು
ಕ.ಪ್ರ.ವಾರ್ತೆ ಕೆ.ಆರ್. ನಗರ ಆ. 31
ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸಚಿವರಿಗಾಗಿ ಗಂಟೆಗಟ್ಟಲೆ ಕಾದು, ಬಸವಳಿದು ಹತಾಶೆಯಿಂದ ಹಿಂದಿರುಗಿದ ಘಟನೆ ಇಲ್ಲಿನ ಪ್ರವಾಸಿ ಮಂದಿರದ ಬಳಿ ಶನಿವಾರ ನಡೆಯಿತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ನಗರದ ಪ್ರವಾಸಿ ಮಂದಿರಕ್ಕೆ ಬರುತ್ತಾರೆ ಎಂದು ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್. ಚನ್ನಬಸಪ್ಪ, ಮಾಜಿ ಸದಸ್ಯ ಡಿ.ರವಿಶಂಕರ್, ಎಪಿಎಂಸಿ ಉಪಾಧ್ಯಕ್ಷ ತೋಟಪ್ಪನಾಯಕ, ಮಾಜಿ ನಿರ್ದೇಶಕ ಹೆಬ್ಬಾಳು ರಾಜಶೇಖರ್, ಅಹಿಂದ ಸಂಚಾಲಕ ಪ್ರಕಾಶ್ ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಮುಖಂಡರು ಮತ್ತು ಕಾರ್ಯಕರ್ತರು ಕಾದು ಕುಳಿತಿದ್ದರು.
ಸಚಿವರು ಬರುವ ವಿಷಯ ಪತ್ರಕರ್ತರಿಗೆ ಮತ್ತು ಕಾರ್ಯಕರ್ತರಿಗೆ ಸ್ವತಃ ಚನ್ನಬಸಪ್ಪನವರೆ ತಿಳಿಸಿದ್ದರಲ್ಲದೆ, ಸಚಿವರ ಸ್ವಾಗತಕ್ಕಾಗಿ ಹಾರ-ತುರಾಯಿಗಳನ್ನು ಹಿಡಿದು ಗಂಟೆಗಟ್ಟಲೆ ಕಾರ್ಯಕರ್ತರೊಡನೆ ಕಾದು ತಾಲೂಕಿನ ಕೆಲವು ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಚರ್ಚಿಸಲು ಉತ್ಸುಕರಾಗಿದ್ದರು.
ಕೆಲವು ಕಾರ್ಯಕರ್ತರಂತೂ ಊಟವನ್ನು ಮಾಡದೆ ಸಚಿವರ ದರ್ಶನಕ್ಕಾಗಿ ಬಸವಳಿದು ಕುಳಿತಿದ್ದರು. ಬೆಳಗ್ಗೆ 11 ರಿಂದ ಸಂಜೆ 4.30ರವರೆಗೆ ಕಾದಿದ್ದ ಎಲ್ಲರಿಗೂ ಎಸ್ಐ ಎಂ.ಆರ್. ಲವ ಬಂದು ಸಚಿವರ ಕಾರು ಪ್ರವಾಸಿ ಮಂದಿರಕ್ಕೆ ಬಾರದೆ ನೇರ ಮೈಸೂರಿಗೆ ತೆರಳಿದ್ದರಿಂದ, ಸಚಿವರು ಬರಲಿಲ್ಲ ಎಂದಾಗ ಕಾದಿದ್ದವರು ಹಿಂದಿರುಗಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

