ಮೈಸೂರು

ನಾಳೆ ರಾಷ್ಟ್ರೀಯ ವಿಚಾರ ಸಂಕಿರಣ

Published On :

ಮೈಸೂರು: ರಾಜ್ಯ ಮುಕ್ತ ವಿವಿಯ ತೆಲುಗು ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಮಾ.1ರ ಬೆಳಗ್ಗೆ 10.30ಕ್ಕೆ ತುಂಗಭದ್ರ ಸಭಾಂಗಣದಲ್ಲಿ ನಡೆಯುವ ಯೋಗಿ ವೇಮನ ಮತ್ತು ಸರ್ವಜ್ಞರ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆದಾಯ ತೆರಿಗೆ ಆಯುಕ್ತ ಜಿ. ರವೀಂದ್ರನಾಥ ರೆಡ್ಡಿ ಉದ್ಘಾಟಿಸುವರು.
ಭಗವದ್ಗೀತಾ ಉಪನ್ಯಾಸ
ಗೋಕುಲಂ 3ನೇ ಹಂತದಲ್ಲಿರುವ ಶ್ರೀ ಕೃಷ್ಣ ಸೇವಾ ಸಮಿತಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಾ.1ರ ಸಂಜೆ 5.30 ಕ್ಕೆ ಶ್ರೀಕೃಷ್ಣ ದೇವಸ್ಥಾನದ ಆವರಣದ ಚೈತನ್ಯ ಭವನದಲ್ಲಿ ಶ್ರೀರಾಮಕೃಷ್ಣಾಶ್ರಮದ ಸ್ವಾಮಿ ಶ್ರೀ ಕರುಣಾಕರಾನಂದಜೀ ಅವರಿಂದ ಶ್ರೀಮದ್ ಭಗವದ್ಗೀತಾ ಕುರಿತು ಉಪನ್ಯಾಸ ನೀಡುವರು ಎಂದು ಅಧ್ಯಕ್ಷ ಬಿ.ಎಸ್. ಶ್ರೀಧರರಾಜೇ ಅರಸ್ ತಿಳಿಸಿದ್ದಾರೆ.
ವಿವೇಕಾನಂದ ಜಯಂತಿ ನಾಳೆ
ವಿವೇಕಾನಂದ ಸ್ಮಾರಕ ಸಮಿತಿ ವತಿಯಿಂದ ಮಾ.1ರ ಬೆಳಗ್ಗೆ 10.30ಕ್ಕೆ ಅರಮನೆ ಉತ್ತರ ದ್ವಾರದ ಜಿಲ್ಲಾ ಕಸಾಪ ಮಂದಿರದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ವಿವೇಕಾನಂದ ಸ್ಮಾರಕ ಆರಂಭಕ್ಕೆ ಮನವಿ ಸಲ್ಲಿಸುವರು. ಡಾ.ದೇಜಗೌ, ಡಾ.ಪ್ರಭುಶಂಕರ ಭಾಗವಹಿಸುವರು. ಡಾ.ಪ್ರಭುಶಂಕರ ಮುಖ್ಯಅತಿಥಿಗಳಾಗಿ ಭಾಗವಹಿಸುವರು. ಡಾ.ಸಿಪಿಕೆ ಅಧ್ಯಕ್ಷತೆ ವಹಿಸುವರು. ಡಾ. ಮಳಲಿ ವಸಂತಕುಮಾರ್, ಡಾ.ಎ.ವಿ. ನರಸಿಂಹಮೂರ್ತಿ, ಡಿ. ನಾಗಭೂಷಣ್ ಮಾತನಾಡುವರು.
ಮಕ್ಕಳಿಗೆ ಕಥೆ
ಜಯಲಕ್ಷ್ಮೀಪುರಂನ ಆದರ್ಶ ಬಳಗದ ವತಿಯಿಂದ ಮಾ.2ರ ಸಂಜೆ 4.30 ರಿಂದ 5.30 ರವರೆಗೆ 21ನೇ ಮಕ್ಕಳಿಗೆ ಕಥೆ ಹೇಳು ಕಾರ್ಯಕ್ರಮ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.