2013-14 ಬಜೆಚ್ ಮಾತು
ಯಥಾಸ್ಥಿತಿ ಬಜೆಟ್. ಚುನಾವಣೆ ದೃಷ್ಟಿಯಿಂದ ತೆರಿಗೆ ಹೊಣೆ ಜಾಸ್ತಿಯಾಗದಂತೆ ನೋಡಿಕೊಂಡಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ ಬರ ಕಾಣಿಸಿಕೊಂಡಿದ್ದರೂ ಸಹ ರೈತರ ಸಾಲ ಮನ್ನಾ ಮಾಡುವ ಮನಸ್ಸು ಮಾಡಿಲ್ಲ.
- ಬಡಗಲಪುರ ನಾಗೇಂದ್ರ, ರೈತ ಸಂಘ
ಗ್ರಾಮೀಣ ಪ್ರದೇಶದಲ್ಲಿ ಕೈಗಾರೀಕರಣಕ್ಕೆ ಬೆಂಬಲ ಯೋಜನೆ ಪ್ರಕಟಿಸಿರುವುದರಿಂದ ಗ್ರಾಮೀಣ ಉದ್ಯೋಗ ಆಕಾಂಕ್ಷಿಗಳು ನಗರಕ್ಕೆ ವಲಸೆ ಬರುವುದು ತಪ್ಪಲಿದೆ. ಕೇಂದ್ರ ಸರ್ಕಾರ ಉದ್ಯಮಿಗಳ ರಕ್ಷಣೆಗೆ ಯಾವುದೇ ಯೋಜನೆ ಪ್ರಕಟಿಸಿಲ್ಲ.
- ಸುರೇಶ್ಕುಮಾರ್ ಜೈನ್
ಇದು ಆಶಾದಾಯಕವಾದ ಬಜೆಟ್. ಕೃಷಿ, ಗ್ರಾಮೀಣ ಅಭಿವೃದ್ಧಿ, ಹಿಂದುಳಿದ ವರ್ಗಕ್ಕೆ ಹಿತವಾಗುವ ಬಜೆಟ್. ಎಂಎಸ್ಎಂಇಗೆ ವಿಶೇಷ ಸೌಲಭ್ಯ ಕಲ್ಪಿಸಿರುವುದು ಕೈಗಾರಿಕಾ ಕ್ಷೇತ್ರದಲ್ಲಿ ಆರ್ಥಿಕ ಬದಲವಾಣೆ ಕಾಣಬಹುದು.
- ಸುಧಾಕರ್ ಎಸ್. ಶೆಟ್ಟಿ
ಬೆಂಗಳೂರು- ಚೆನ್ನೈ, ಬೆಂಗಳೂರು- ಮುಂಬೈ ಕೈಗಾರಿಕಾ ಕಾರಿಡಾರ್ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದು. ಆದರೆ, ಪರಿಸರ ಸಂರಕ್ಷಣೆ, ಕೃಷಿ ಭೂಮಿ ಮೇಲಿನ ಹಾನಿಗೆ ಬಗ್ಗೆ ಯಾವ ಎಚ್ಚರಿಕೆ ಕ್ರಮಗಳ ಬಗ್ಗೆ ಸ್ಪಷ್ಟತೆ ಇಲ್ಲ.
- ಡಾ.ಎಂ.ಜಿ. ಬಸವರಾಜ
ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿಯತ್ತ ಗಮನ ಹರಿಸಬೇಕಿತ್ತು. ಬಜೆಟ್ನಲ್ಲಿ ಕೋಟ್ಯಂತರ ರು. ಯೋಜನೆ ಘೋಷಿಸಿದರೆ ಸಾಲದು. ಆ ಯೋಜನೆಗಳನ್ನು ಕಾರ್ಯರೂಪಕ್ಕೆ ಬರಬೇಕು.
- ಜಿ.ಎಸ್. ಬದರಿನಾಥ್
ಬೆಂಗಳೂರು- ಮುಂಬೈ ಹಾಗೂ ಬೆಂಗಳೂರು- ಚೆನ್ನೈ ಕಾರಿಡಾರ್ ಅಭಿವೃದ್ಧಿಯಿಂದ ಕೈಗಾರಿಕೆಗಳಿಗೆ ಸ್ಥಾಪನೆಗೆ ಅನುಕೂಲ. ಒಂದು ಕೋಟಿ ರು. ಗೂ ಹೆಚ್ಚಿನ ತೆರಿಗೆ ಪಾವತಿದಾರರಾದ ಶ್ರೀಮಂತರಿಗೆ ಶೇ.10 ಮೇಲ್ತೆರಿಗೆ ವಿಧಿಸಿರುವುದು ಸ್ವಾಗತಾರ್ಹ.
- ಎಂ. ಶ್ರೇಯಸ್
ಕೃಷಿ ಕ್ಷೇತ್ರದ ಜಿಡಿಪಿ ಇಳಿಮುಖವಾಗಿದ್ದರೂ ಈ ಬಗ್ಗೆ ಗಂಭೀರ ಚಿಂತನೆ ನಡೆಸಿದೆ ನಿರ್ಲಕ್ಷಿಸಲಾಗಿದೆ. ರೈತರು ಹಲವು ಸಮಸ್ಯೆ ಎದುರಿಸುತ್ತಿದ್ದರೂ ಇದಕ್ಕೆ ಪರಿಹಾರವನ್ನು ಬಜೆಟ್ನಲ್ಲಿ ಘೋಷಿಸಿಲ್ಲ.
- ಕುರುಬೂರು ಶಾಂತಕುಮಾರ್, ಅಧ್ಯಕ್ಷರು ಕಬ್ಬು ಬೆಳೆಗಾರರ ಸಂಘ
ಮೈಸೂರಿನ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉಪ ಕೇಂದ್ರ ಹಾಗೂ ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಶಾಖಾ ಕಚೇರಿ ಆರಂಭಕ್ಕೆ ಚಾಲನೆ ನೀಡಿರುವುದು ಉದ್ಯಮಿಗಳ ಮತ್ತು ಕಾರ್ಮಿಕರ ಕೌಶಲ ಅಭಿವೃದ್ಧಿಗೆ ಸಹಕಾರಿ.
- ಪಿ. ವಿಶ್ವನಾಥ್
ಇದು ಹೊಸತನ ಇಲ್ಲದ ಮಾಮೂಲಿ ಬಜೆಟ್ ಆಗಿದ್ದು, ನಿರಾಶೆ ಮೂಡಿಸಿದೆ. ಸಾರ್ವಜನಿಕರಿಗೆ ಅನುಕೂಲ ಆಗುವ ಅಂಶಗಳು ಇಲ್ಲ. ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಮಂಡಿಸಿರುವ ನಿರಾಶದಾಯಕ ಬಜೆಟ್.
- ಮೂಗೂರು ನಂಜುಂಡಸ್ವಾಮಿ
ಶಿಕ್ಷಣ ಸಂಸ್ಥೆಗಳ ಮೇಲೆ ಶೇ. 3 ತೆರಿಗೆ ವಿಧಿಸಿರುವುದು ಸರಿಯಲ್ಲ. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲ ಆಗಿದೆ. ಇದನ್ನು ಹೊರತುಪಡಿಸಿ ದೇಶದ ಹಿತದೃಷ್ಟಿಯಿಂದ ಬಜೆಟ್ ಆಶಾದಾಯಕವಾಗಿದೆ.
- ಆರ್. ರಘು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

