ಆಸ್ಪತ್ರೆಗೆ 3 ಎಕರೆ ಜಮೀನು ದಾನ
ಸುತ್ತೂರು: ನಂಜನಗೂಡು ತಾಲೂಕಿನ ಬಿಳುಗಲಿ ಗ್ರಾಮದಲ್ಲಿ ಸಾರ್ವಜನಿಕ ಆಸ್ಪತ್ರೆ ನಿರ್ಮಿಸಲು ಮೂರು ಎಕರೆ ಭೂಮಿಯನ್ನು ದಾನವಾಗಿ ನೀಡಿರುವ ಲೇ. ಬಸಪ್ಪನವರ ಕುಟುಂಬದವರನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸನ್ಮಾನಿಸಿದರು.
ಕುಟುಂಬದ ಸದಸ್ಯರಾದ ಸದಾಶಿವಮೂರ್ತಿ, ನಾಗರಾಜು, ಬಸವಣ್ಣ, ಕುಮಾರಪ್ಪ ಅವರನ್ನು ಸನ್ಮಾನಿಸಿದ ಮಾತನಾಡಿ ಅವರು, ಎಂಟು ಜನ ಮಕ್ಕಳನ್ನು ತಾಯಿ ಸಾಕುತ್ತಾಳೆ. ಆದರೆ, ಆ ಒಬ್ಬ ತಾಯಿಯನ್ನು ಮಕ್ಕಳು ಸಾಕಲಾರದೆ, ವೃದ್ಧಾಶ್ರಮಗಳಿಗೆ ಸೇರಿಸುತ್ತಿರುವ ಈ ಕಾಲದಲ್ಲಿ ಆಸ್ತಿಗಾಗಿ ಅಣ್ಣ- ತಮ್ಮನನ್ನು, ತಮ್ಮ- ಅಣ್ಣನನ್ನು ಕೊಲೆ ಮಾಡುತ್ತಿರುವ ಇಂತಹ ಕಾಲದಲ್ಲಿ ಆಸ್ಪತ್ರೆ ನಿರ್ಮಿಸಲು ಜಾಗ ನೀಡಿದ್ದು ಶ್ಲಾಘನೀಯ ಎಂದರು. ಶಾಸಕ ಡಾ.ಎಚ್.ಸಿ. ಮಹದೇವಪ್ಪ, ಜಿಪಂ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಎಲ್. ಮಾದಪ್ಪ, ತಾಪಂ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ಸದಸ್ಯ ಪುರುಷೋತ್ತಮ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

