ಮೈಸೂರು

ಭೂಸ್ವಾಧೀನ ವಿರೋಧಿಸಿ ಡಿಸಿ ಕಚೇರಿ ಎದುರು ಹೊನ್ನವಳ್ಳಿ ಗ್ರಾಮಸ್ಥರ ಪ್ರತಿಭಟನೆ

Published On :

ಹಾಸನ: ಆಲೂರು ತಾಲೂಕಿನ ಹೊನ್ನವಳ್ಳಿಯಲ್ಲಿ ಭೂಸ್ವಾಧೀನ ವಿರೋಧಿಸಿ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.ಹೊನ್ನವಳ್ಳಿಯಲ್ಲಿ ಬಹು ಹಿಂದಿನಿಂದಲೂ ಗ್ರಾಮಸ್ಥರ ಬಳಿ ಪಹಣಿ ಇತ್ತು. ಆದರೆ ಪಹಣಿಯನ್ನು ಪ್ರಸ್ತುತ ರದ್ದು ಪಡಿಸಿರುವುದರಿಂದ ಗ್ರಾಮಸ್ಥರಿಗೆ ತೀರಾ ತೊಂದರೆ ಉಂಟಾಗಿದೆ. ಗ್ರಾಮಸ್ಥರಿಗೆ ತುಂಡು ಜಮೀನನ್ನು ಬಿಟ್ಟರೆ ಉಳುಮೆಗೆ ಬೇರೆ ಭೂಮಿ ಇಲ್ಲ. ಸರ್ಕಾರ ಭೂಮಿಯನ್ನು ವಶಪಡಿಸಿಕೊಂಡರೆ ವ್ಯವಸಾಯಕ್ಕೆ ಭೂಮಿ ಇಲ್ಲದಂತಾಗುತ್ತದೆ ಎಂದು ಅಲವತ್ತುಕೊಂಡರು.
ಭೂಸ್ವಾಧೀನ ಮುನ್ನ ಇಲ್ಲಿ ವಾಸವಾಗಿರುವವರಿಗೆ ಯಾವುದೇ ನೋಟಿಸ್  ನೀಡದೇ ಬುಧವಾರ ತಹಸೀಲ್ದಾರ್  ಸ್ಥಳಕ್ಕೆ ಭೇಟಿ ನೀಡಿ ನಮ್ಮ ಭೂಮಿ ವಶಪಡಿಸಿಕೊಳ್ಳಲಾಗುತ್ತದೆ ಎಂದಿದ್ದಾರೆ. ಕಾರಣ ಕೇಳಿದರೆ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ. ಇದರಿಂದ ಗ್ರಾಮಸ್ಥರಿಗೆ ದಿಕ್ಕು ತೋಚದಂತಾಗಿದೆ. ಇರುವ ತುಂಡು ಭೂಮಿ ವಶಪಡಿಸಿಕೊಳ್ಳುವ ಬದಲು ನೂರಾರು ಎಕರೆ ಹೊಂದಿರುವ ಶ್ರೀಮಂತರ ಜಮೀನನ್ನು ಸರ್ಕಾರ ಸ್ವಾದೀನಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಈ ವಿರುದ್ಧವಾಗಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಡಿ.ಸಿ.ಸಣ್ಣಸ್ವಾಮಿ, ಎಚ್.ಬಿ.ಲೋಕೇಶ್, ದೇವರಾಜ್, ಎಚ್.ಎಲ್.ವಸಂತ್‌ಕುಮಾರ್, ಜಯಮ್ಮ, ರತ್ನ, ಮಂಜುಳ, ಗೌರಮ್ಮ, ಹೊನ್ನಮ್ಮ, ಮಂಜಯ್ಯ, ರಾಧ, ಕಮಲ, ಮಧು, ಚಂದ್ರಶೆಟ್ಟಿ, ಗಿರೀಶ್, ದಿನೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.