ಕಿತ್ತೂರಿನ ಆಸ್ಪತ್ರೆಗೆ ವೈದ್ಯರ ಕೊರತೆ
ಕಿತ್ತೂರು: ಪಿರಿಯಾಪಟ್ಟಣ ತಾಲೂಕಿನ ರಾಜಕೀಯದಲ್ಲಿ ಪ್ರಮುಖ ಕೇಂದ್ರ ಸ್ಥಾನವಾಗಿರುವ ಕಿತ್ತೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನುರಿತ ವೈದ್ಯರ ಕೊರತೆಯಿಂದಾಗಿ ಸಾಜನಿಕರು ಖಾಸಗಿ ಕ್ಲಿನಿಕ್ಗಳತ್ತ ಮುಖ ಮಾಡುವಂತಾಗಿದೆ.
ಆರು ದಶಕಗಳ ಹಿಂದೆ 1948 ರಲ್ಲಿ ಅಂದಿನ ಕಂದಾಯ ಸಚಿವರಾಗಿದ್ದ ಎಚ್.ಸಿದ್ದಯ್ಯ ಅವರಿಂದ ಈ ಆಸ್ಪತ್ರೆ ಆರಂಭಗೊಂಡಿತು. ನಂತರ 1996ರಲ್ಲಿ ಸಿದ್ದರಾಮಯ್ಯ ಅವರು 20 ಹಾಸಿಗೆಗಳ ಹೆರಿಗೆ ಆಸ್ಪತ್ರೆ ಆರಂಭಿಸಿದ್ದರು. ಈ ಆರೋಗ್ಯ ಕೇಂದ್ರದಿಂದ ಕಿತ್ತೂರಿಗೆ ಮಾತ್ರವಲ್ಲದೆ ಸುತ್ತಮುತ್ತಲಿನ 20 ಗ್ರಾಮಗಳ ಜನತೆಗೆ ಸೇವೆ ಒದಗಿಸಲಾಗುತ್ತಿದೆ.
ಸುಳ್ಳಾದ ಮೇಲ್ದರ್ಜೆಗೇರಿಸುವ ಭರವಸೆ: ಕಳೆದೊಂದು ದಶಕದಿಂದಲೂ ಗ್ರಾಮದವರೇ ಆದ ಜನಪ್ರತಿನಿಧಿಗಳು ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡುತ್ತೇವೆ ಎಂಬ ಪೊಳ್ಳು ಭರವಸೆ ನೀಡುತ್ತಾ ಬಂದಿದ್ದು, ಆಸ್ಪತ್ರೆ ಉದ್ಧಾರ ಮಾಡುವುದು ಒಂದೆಡೆ ಇರಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ವೈದ್ಯರ ಕೊರತೆ: ಹೋಬಳಿಯ ಪ್ರಮುಖ ಕೇಂದ್ರವಾಗಿರುವ ಕಿತ್ತೂರು ಆರೊಗ್ಯ ಕೇಂದ್ರಕ್ಕೆ ಉತ್ತಮ ಆಸ್ಪತ್ರೆಯೆಂಬ ಹೆಸರೂ ಇದೆ. ಆದರೆ, ಕಳೆದ 2 ವರ್ಷಗಳಿಂದಲೂ ಮಹಿಳಾ ವೈದ್ಯರಿಲ್ಲದೆ ಮಹಿಳಾ ರೋಗಿಗಳು, ಗರ್ಭೀಣಿಯರು ಮೈಸೂರು ನಗರದ ಆಸ್ಪತ್ರೆಗಳಿಗೆ ಹೋಗಬೇಕಾಗಿದೆ. ಕಳೆದೆರಡು ತಿಂಗಳ ಹಿಂದೆ ಇದ್ದಂತಹ ವೈದ್ಯರೂ ಕೂಡಾ ಅನಾರೊಗ್ಯದ ನೆಪ ಹೇಳಿ ಜಾಗ ಖಾಲಿ ಮಾಡಿದ್ದು, ಅವರ ಜಾಗಕ್ಕೆ ಮತ್ತೊಬ್ಬರನ್ನು ನೇಮಿಸಿಲ್ಲ. ಸ್ಥಳದಲ್ಲಿ ಯಾವ ವೈದ್ಯರೂ ವಾಸ್ತವ್ಯ ಹೂಡದ ಪರಿಣಾಮ, ಇಲ್ಲಿರುವ ಶುಶ್ರೂಷಕಿಯರು ಕೆಲಮೊಂದು ಸಂದರ್ಭದಲ್ಲಿ ಚುಚ್ಚುಮದ್ದು ನೀಡಲು ಹಿಂದೇಟು ಹಾಕುತ್ತಾರೆ ಎಂದು ಸಾರ್ವಜನಿಕರ ಆರೋಪ.
ಪಿರಿಯಾಪಟ್ಟಣ ಕ್ಷೇತ್ರದ ಶಾಸಕರು ಮತ್ತು ಜಿಪಂ ವಿರೊಧ ಪಕ್ಷದ ನಾಯಕರ ಇದೇ ಗ್ರಾಮದವರಾಗಿದ್ದರೂ ಆಸ್ಪತ್ರೆಗೆ ವೈದ್ಯರನ್ನು ನೇಮಿಸಲು ಮುತುವರ್ಜಿ ವಹಿಸಿಲ್ಲದಿರುವುದು ದುರಂತವೇ ಸರಿ. ಈಗಲಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

