ಮೈಸೂರು

ನ್ಯಾಯ, ಸಾಹಿತ್ಯ ಕೋ.ಚೆ. ಹೃದಯ

Published On :

ಮೈಸೂರು:  ಬಹುಮುಖ ಪ್ರತಿಭೆಯ ಕೋ. ಚೆನ್ನಬಸಪ್ಪ ಅವರು ವೃತ್ತಿಯಲ್ಲಿ ನ್ಯಾಯ, ಪ್ರವೃತ್ತಿಯಲ್ಲಿ ಸಾಹಿತ್ಯ ಅನುಸರಿಸಿದ ಸಹೃದಯಿ ಎಂದು ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಡಾ. ಕೆ.ಚಿದಾನಂದಗೌಡ ಬಣ್ಣಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜೆಎಸ್ಎಸ್ ಮಹಾವಿದ್ಯಾಪೀಠ ಹಾಗೂ ಸಂವಹನ ಪ್ರಕಾಶನ ಆಶ್ರಯದಲ್ಲಿ ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಕೋ. ಚೆನ್ನಬಸಪ್ಪರ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡಮ್ಮನ ಮುಡಿಗೆ ಅನೇಕ ಅನರ್ಘ್ಯ ರತ್ನ ತೊಡಿಸಿರುವ ಚೆನ್ನಬಸಪ್ಪ ಅವರದು ಷಣ್ಮುಖ ಪ್ರತಿಭೆ. ವೃತ್ತಿಯಲ್ಲಿ ನ್ಯಾಯವಾದಿ, ಪ್ರವೃತ್ತಿಯಲ್ಲಿ ಸಾಹಿತಿ, ಅಧ್ಯಾತ್ಮಿಕ ದೃಷ್ಟಿ, ಕಾವ್ಯ ಸೌಂದರ್ಯದ ಪ್ರಜ್ಞೆ, ವಿಮರ್ಶಾತ್ಮಕ ಅಲೋಚನೆ ಹಾಗೂ ಸಹೃದಯವಂತರು ಎಂದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ. ನೀಲಗಿರಿ ತಳವಾರ್, ಕೋ. ಚೆನ್ನಬಸಪ್ಪ ಅವರ 'ಕುವೆಂಪು ಭಾಷಣಗಳು - ಬಿನ್ನವತ್ತಳೆಗಳು' ಎಂಬ ಸಂಪಾದಿತ ಕೃತಿ ಹಾಗೂ 'ಈ ಕಳ್ಳನ ಕೈ ಆ ಕಳ್ಳನ ಜೇಬಿನಲ್ಲಿ' ಎಂಬ ಅಂಕಣ ಸಂಕಲನ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಕೋ. ಚೆನ್ನಬಸಪ್ಪ ಅವರನ್ನು ಸನ್ಮಾನಿಸಿದರು.  ಸಾಹಿತಿ ಡಾ. ಸಿಪಿಕೆ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಚಂದ್ರಶೇಖರ್ ಸ್ವಾಗತಿಸಿದರು. ಅಧ್ಯಾಪಕ ನಂದೀಶ್ ಹಂಚೆ ನಿರೂಪಿಸಿದರು. ಸಂವಹನ ಪ್ರಕಾಶನದ ಡಿ.ಎನ್. ಲೋಕಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.