ಮೈಸೂರು

ಬೆಂಗಳೂರು ಚಲೋ 29ಕ್ಕೆ

Published On :

ಮೈಸೂರು:  ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಶನ್ ವತಿಯಿಂದ ಜ.29ರಂದು ನಡೆಯುವ ಬೆಂಗಳೂರು ಚಲೋ ಚಳವಳಿಯಲ್ಲಿ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯ ಎಲ್ಲಾ ಕಾರ್ಯಕರ್ತೆಯರೂ ಹಾಗೂ ಸಹಾಯಕಿಯರು ಭಾಗವ ಹಿಸುವಂತೆ ಜಿಲ್ಲಾ ಸಮಿತಿ ಮನವಿ ಮಾಡಿದೆ.
ನಾಳೆ ಕಾರ್ಯಾಗಾರ
ಮೈಸೂರು: ಸರ್ಕಾರದ ಉದ್ಯಮವಾದ ಕಿಯೋನಿಕ್ಸ್ ಸಂಸ್ಥೆಯಲ್ಲಿ ನಗರದ ಡಿಪ್ಲೋಮಾ, ಎಂಜಿನಿಯರಿಂಗ್ ಕಡೆಯ ಸೆಮಿಸ್ಟರ್‌ನ ಅಭ್ಯರ್ಥಿಗಳಿಗಾಗಿ ಜ.27ರಿಂದ ಬೆಳಗ್ಗೆ 9 ರಿಂದ 1 ರವರೆಗೆ ಉಚಿತ ಪ್ರಾಜೆಕ್ಟ್ ಕಡೆಗೆ ಪಯಣದ ಬಗ್ಗೆ ಕಾರ್ಯಾಗಾರ ಹಮ್ಮಿಕೊಂಡಿದೆ. ಮಾಹಿತಿಗಾಗಿ ದೂ. 2363127, ಮೊ. 9880622747 ಸಂಪರ್ಕಿಸಬಹುದು.
30ರಂದು ಮಾಂಸ ಮಾರಾಟ ನಿಷೇಧ
ಸರ್ವೋದಯ ದಿನ ಅಂಗವಾಗಿ ಜ.30ರಂದು ನಗರಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಕುರಿ, ಮೇಕೆ ಕಸಾಯಿ ಖಾನೆ, ಇತರ ಮಾಂಸದ ಅಂಗಡಿ ಮುಚ್ಚುವಂತೆ ಆರೋಗ್ಯಾಧಿಕಾರಿ ಆದೇಶಿಸಿದ್ದಾರೆ.
ನೀರು ಪೂರೈಕೆ ವ್ಯತ್ಯಯ
ನಗರದಲ್ಲಿ ಕಪಿಲಾ ನೀರು ಪೂರೈಕೆ ಯೋಜನೆಗೆ ಚಾಲನೆ ನೀಡಿರುವುದರಿಂದ ವಾರ್ಡ್ ಸಂಖ್ಯೆ 1, 2, 3, 6, 19, 35, 36ಕ್ಕೆ ಸಿಎಸ್‌ಆರ್ ನೀರು ಪೂರೈಸಲು ಸಂಪರ್ಕ ಕಾಮಗಾರಿಗಳು ನಡೆಯುತ್ತಿವೆ. ಇದರಿಂದ ಕೆಲ ಪ್ರದೇಶಗಳಲ್ಲಿ ನೀರು ಪೂರೈಕೆ ವ್ಯತ್ಯಯವಾಗಿದೆ. ಸಂಪರ್ಕ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ, ನೀರು ಸರಬರಾಜನ್ನು ಯಥಾಸ್ಥಿತಿಗೆ ತರಲು ಕ್ರಮಗೊಳ್ಳಲಾಗುತ್ತಿದೆ.
ಯುವಕ ನಾಪತ್ತೆ
ಶಾರದಾದೇವಿ ನಗರದ ನಿವಾಸಿ ಎಂ.ಎಸ್. ಮಂಜು ಎಂಬವರು ಜ.19ರಿಂದ ಕಾಣೆಯಾಗಿದ್ದಾರೆ. ಚಹರೆ: 28 ವರ್ಷ, 5.7 ಅಡಿ ಎತ್ತರ, ದೃಢಕಾಯ ಶರೀರ, ಗೋಧಿ ಬಣ್ಣ, ಕನ್ನಡ, ಹಿಂದಿ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೂಡಲೇ ಸರಸ್ವತಿಪುರಂ ಪೊಲೀಸ್ ಠಾಣೆ ಅಥವಾ ದೂ. 0821- 2418123 ತಿಳಿಸುವಂತೆ ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.