ಬ್ರೈನ್ಸ್ಟಾರಂ ಸಲಹಾ ಕೇಂದ್ರಕ್ಕೆ ಚಾಲನೆ
ಮೈಸೂರು: ವಿದೇಶದಲ್ಲಿ ವ್ಯಾಸಂಗ ಮಾಡುವ ಸಲುವಾಗಿ ತೆಗೆದುಕೊಳ್ಳುವ ಪ್ರವೇಶ ಪರೀಕ್ಷೆಗಳಿಗೆ ಸೂಕ್ತ ಸಲಹೆ ನೀಡಲು ಬ್ರೈನ್ಸ್ಟಾರಂ ತರಬೇತಿ ಶಾಖಾ ಕೇಂದ್ರ ಶುಕ್ರವಾರ ಆರಂಭಗೊಂಡಿತು.
ಎಸ್ಜೆಸಿಇ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ. ಸಂಗಮೇಶ್ವರ, ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿ, ವಿದೇಶದಲ್ಲಿ ಉನ್ನತ ಶಿಕ್ಷಣದ ಕನಸುಗಳನ್ನು ಕಾಣುತ್ತಿರುವ ಯುವಜನತೆಯ ಆಶಯ ಈಡೇರಿಸುವಲ್ಲಿ ಈ ಕೇಂದ್ರ ಉತ್ತಮ ಕಾರ್ಯನಿರ್ವಹಿಸುವಂತಾಗಲಿ. ಆ ಮೂಲಕ ಮೈಸೂರಿನ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಸಹಾಯ ನೀಡುವಂತಾಗಲಿ. ಉದ್ಯಮಶೀಲರನ್ನಾಗಿಸುವಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಇಂತಹ ಕಾರ್ಯಕ್ಕೆ ಮುಂದಾಗಿರುವುದು ಅಭಿನಂದನೀಯ ಎಂದರು.
ಜಿಆರ್ಇ, ಡಿಎಂಎಟಿ, ಐಇಎಲ್ಟಿಎಸ್, ಟಿಒಇಎಫ್ಎಲ್ ಮತ್ತು ಎಸ್ಎಟಿ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಇಲ್ಲಿ ಸೂಕ್ತ ತರಬೇತಿ ನೀಡಲಾಗುವುದು. ಪರೀಕ್ಷೆಯಲ್ಲಿ ಯಶಸ್ಸು ಹೊಂದಿದವರಿಗೆ ವಿದೇಶದಲ್ಲಿನ ಸಂಬಂಧಿಸಿದ ವಿವಿಯಲ್ಲಿ ಪ್ರವೇಶಾತಿ ಹಾಗೂ ವಿದೇಶಕ್ಕೆ ತೆರಳಲು ಅಗತ್ಯವಾದ ಸಹಕಾರ ಸಂಸ್ಥೆ ನೀಡಲಿದೆ.
15 ವರ್ಷಗಳಿಂದ ವಿದೇಶ ಶಿಕ್ಷಣ ರಂಗಕ್ಕೆ ಅತ್ಯುತ್ತಮ ಅಭ್ಯರ್ಥಿಗಳನ್ನು ತಯಾರು ಮಾಡುತ್ತಿರುವ ಈ ಬ್ರೈನ್ಸ್ಟ್ರಾಮ್ ಸಂಸ್ಥೆ ಮುಖ್ಯ ಕಚೇರಿಯು ಬೆಂಗಳೂರಿನಲ್ಲಿದೆ. ಎಸ್ಜೆಸಿಇ ಹಳೆಯ ವಿದ್ಯಾರ್ಥಿ ಸಂಘದ ಅಜಯ್ ಮೈಸೂರು ಕೇಂದ್ರದ ನೇತೃತ್ವ ವಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

