ಮೈಸೂರು

ನೇಗಿಲಯೋಗಿ ಕಟ್ಟಡಕ್ಕೆ ಯೋಗೇಶ್ವರ್ ಚಾಲನೆ

Published On :

ಮೈಸೂರು:  ನೇಗಿಲ ಯೋಗಿ ಮರಳೇಶ್ವರ ವಸತಿ ನಿಲಯ, ಸಭಾಂಗಣ ಹಾಗೂ ಕಚೇರಿ ಕಟ್ಟಡವನ್ನು ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್ ಶನಿವಾರ ಉದ್ಘಾಟಿಸಿದರು.
ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೇಗಿಲಯೋಗಿ ಮರುಳೇಶ್ವರ ಸೇವಾ ಭವನದ ಶಂಕುಸ್ಥಾಪನೆ ಕಾರ್ಯವನ್ನು ಸಹ ಅವರು ನೆರವೇರಿಸಿದರು.
ಪ್ರಗತಿಪರ ರೈತ ಎನ್.ಸಿ. ಪಟೇಲ್, ವಿಕ್ಟೋರಿಯಾ ಆಸ್ಪತ್ರೆಯ ನೆಫ್ರೋ ಯೂರಾಲಜಿ ವಿಭಾಗದ ನಿರ್ದೇಶಕ ಡಾ. ಜಿ.ಕೆ. ವೆಂಕಟೇಶ್ ಹಾಗೂ ಹಿರಿಯ ಪತ್ರಿಕೋದ್ಯಮಿ ಬಿ.ಎಸ್. ಸತ್ಯನಾರಾಯಣ ಅವರನ್ನು ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಸನ್ಮಾನಿಸಿದರು. ಈ ಸಂದರ್ಭ ಕಟ್ಟಡಕ್ಕೆ ನೆರವಾದ ದಾನಿಗಳನ್ನು ಸಚಿವರು ಗೌರವಿಸಿದರು.
'ನೇಗಿಲ ಭಾಗ್ಯ' ಮಾಸಪತ್ರಿಕೆಯ ತೃತೀಯ ವಾರ್ಷಿಕೋತ್ಸವದ ವಿಶೇಷ ಸಂಚಿಕೆ ಜಾನಪದ ವಿದ್ವಾಂಸ ಡಾ. ಹಿ.ಶಿ. ರಾಮಚಂದ್ರೇಗೌಡ ಅನಾವರಣಗೊಳಿಸಿದರು.
ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಶಾಸಕ ಎಂ. ಸತ್ಯನಾರಾಯಣ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ. ಬಸವೇಗೌಡ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಪಿ. ಮಂಜುನಾಥ್ ಮುಖ್ಯ ಅತಿಥಿಗಳಾಗಿದ್ದರು.
ಟ್ರಸ್ಟ್ ಅಧ್ಯಕ್ಷ ಡಾ. ಎಲ್.ದೇವೇಗೌಡ ಅಧ್ಯಕ್ಷತೆ ವಹಿಸಿದ್ದರು. ಮರುಳೇಶ್ವರ ಧರ್ಮದರ್ಶಿ ಟ್ರಸ್ಟ್ ಅಧ್ಯಕ್ಷ ಡಾ. ಮಹದೇವಯ್ಯ, ನೇಗಿಲ ಯೋಗಿ ಬಳಗದ ಡಿ. ರವಿಕುಮಾರ್, ಬೆಕ್ಯಾ ರವಿಕುಮಾರ್, ಸತೀಶ್ ಜವರೇಗೌಡ, ಎಂ.ಪಿ. ಸುರೇಶ್ ಮತ್ತಿತರರಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಡಾ. ವೈ.ಡಿ. ರಾಜಣ್ಣ ಸ್ವಾಗತಿಸಿದರು. ಪ್ರಾಧ್ಯಾಪಕಿ ಜಯಕುಮಾರಿ ನಿರೂಪಿಸಿದರು.
ಬಿ.ಪಿ. ಮಂಜುನಾಥ್ ಅವರು 'ಭಕ್ತ ಕುಂಬಾರ' ಚಿತ್ರದ 'ಎಲ್ಲಿ ಮರೆಯಾದೆ ವಿಠಲ...' ಎಂಬ ಗೀತೆಯನ್ನು ಹಾಡಿ ಸಭಿಕರ ಪ್ರಶಂಸೆಗೆ ಪಾತ್ರರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.