ಮೈಸೂರು

'ಆಧ್ಯಾತ್ಮಿಕತೆ, ಸೇವೆ ಸಮನ್ವಯಗೊಳಿಸಿದ್ದ ಆದಿಶ್ರೀ'

Published On :

ಮೈಸೂರು:  ಆಧ್ಯಾತ್ಮಿಕತೆ ಮತ್ತು ಸಮಾಜ ಸೇವೆಗಳನ್ನು ಸಮನ್ವಯಗೊಳಿಸಿದವರು ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿ ಎಂದು ಹಿರಿಯ ಸಾಹಿತಿ ಡಾ. ಸಿಪಿಕೆ ಅಭಿಪ್ರಾಯಪಟ್ಟರು.
ಕುವೆಂಪುನಗರದ ಮೈಸೂರು ನಾಗರಿಕರ ಸಾಂಸ್ಕೃತಿಕ ವೇದಿಕೆ ವತಿಯಿಂದ ನಡೆದ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಶ್ರಮ, ಕಾರ್ಯದಶಕ್ಷತೆಯಿಂದ ಕುಗ್ರಾಮವನ್ನು ಆದಿಚುಂಚನಗಿರಿ ಕ್ಷೇತ್ರವನ್ನು ವಿಶ್ವದ ಮಟ್ಟಕ್ಕೆ ಕರೆದೊಯ್ದ ರೀತಿ ಪವಾಡಸದೃಶ, ವಿಸ್ಮಯ, ಅವರೊಬ್ಬರು ತಪೋಧನ ಹಾಗೂ ಮಹಾಪುರುಷ ಎಂದು ಬಣ್ಣಿಸಿದರು.
ಹಿರಿಯ ಸಾಹಿತಿ ದೇಜಗೌ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಥ ಸಂಪ್ರದಾಯದ ಅಮರ ಚೇತನ, ಭೇದ ಭಾವವೆಣಿಸದ ಅಪೂರ್ವ ವ್ಯಕ್ತಿತ್ವ, ಸಮರ್ಥ ಉತ್ತರಾಧಿಕಾರಿಯನ್ನು ಆಯ್ದುಕೊಂಡ ದೂರದರ್ಶಿತ್ವ ಗುಣಗಾನ ಮಾಡಿದರಲ್ಲದೆ, ಸ್ವಾಮೀಜಿಗಳು ಒಬ್ಬ ಕರ್ಮಯೋಗಿ ಎಂದು ತಿಳಿಸಿದರು.
ಸಾಹಿತಿ ಡಾ. ಮಳಲಿ ವಸಂತಕುಮಾರ್ ಮಾತನಾಡಿ, ಅಂಧರಿಗೊಂದು ಸಂಸ್ಥೆ ಕಟ್ಟಿದ ಶ್ರೀಗಳ ಮಾನವೀಯತೆಯನ್ನು ನೆನೆದು, ಒಂದು ಸಸಿಗಳನ್ನು ನೆಡಿಸುವುದರ ಮೂಲಕ ಇತಿಹಾಸ ಬರೆದಿದ್ದಾರೆ ಎಂದು ಹೇಳಿದರು.
ಕ್ರಿಸ್ಟಲ್ ಪಾರ್ಕ್ ಇನ್ ಮಾಲೀಕ ಟಿ.ಆರ್. ಚಂದ್ರಶೇಖರ್ ಮಾತನಾಡಿದರು. ವೇದಿಕೆಯ ಅಧ್ಯಕ್ಷ ಕೆ.ಎಸ್. ನಾಗರಾಜು ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.