ಮೈಸೂರು

'ಎಸ್‌ಜೆಎಸ್‌ಆರ್‌ವೈ ಸೌಲಭ್ಯ ಬಳಸಿ'

Published On :

ಮೈಸೂರು:  ಸ್ವರ್ಣ ಜಯಂತಿ ರೋಜ್ಗಾರ್ ಯೋಜನೆಯಡಿ ಸಿಗುವ ಸೌಲಭ್ಯ ಸಮರ್ಪಕವಾಗಿ ಬಳಸಿಕೊಂಡು ಜೀವನ ಶೈಲಿಯನ್ನು ಬದಲಿಸಿಕೊಳ್ಳುವಂತೆ ಪಾಲಿಕೆ ಆಯುಕ್ತ ಡಾ. ಎಂ.ಆರ್. ರವಿ ಕರೆ ನೀಡಿದರು.
ನಗರ ಪಾಲಿಕೆಯು ಮಂಗಳವಾರ ನಗರದ ಐಡಿಯಲ್ ಜಾವಾ ರೋಟರಿ ಶಾಲೆಯಲ್ಲಿ ಏರ್ಪಡಿಸಿದ್ದ ಸ್ವರ್ಣ ಜಯಂತಿ ರೋಜ್ಗಾರ್ ಯೋಜನೆಯಡಿ ವಿವಿಧ ರೀತಿಯ ಕೌಶಲ್ಯಾಭಿವೃದ್ಧಿ ತರಬೇತಿ ಮಾರ್ಗದರ್ಶನ ಶಿಬಿರದಲ್ಲಿ ಮಾತನಾಡಿದ ಅವರು, ಎಸ್‌ಜೆಎಸ್‌ಆರ್‌ವೈನಲ್ಲಿ ನಗರದ ಬಡಜನತೆಗೆ ಉದ್ಯೋಗ ಕಲ್ಪಿಸಲು ಸ್ಟೆಪ್- ಅಪ್ ಕಾರ್ಯಕ್ರಮ ರೂಪಿಸಲಾಗಿದೆ. ಅದರಲ್ಲಿ ನಲವತ್ತಕ್ಕೂ ಅಧಿಕ ವೃತ್ತಿ ಕೌಶಲ್ಯಗಳ ತರಬೇತಿ ನೀಡಲಾಗುತ್ತದೆ ಎಂದರು.
ಉಪಮೇಯರ್ ಮಹದೇವಪ್ಪ ಮಾರ್ಗದರ್ಶನ ಶಿಬಿರ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಿಐಸಿಯ ವರದರಾಜು, ಶ್ರೀಕಂಠಾರಾಧ್ಯ, ಕೋರ್ ಸಂಸ್ಥೆಯ ರವಿಕುಮಾರ್, ಜಿಟಿಟಿಸಿ ಮಂಜುನಾಥ್ ಭಾಗವಹಿಸಿದ್ದ ಅಭ್ಯರ್ಥಿಗಳಿಗೆ ವೃತ್ತಿ ಆಧಾರಿತ ಕೌಶಲ್ಯಾಭಿವೃದ್ಧಿ ತರಬೇತಿ ಬಗ್ಗೆ ಉಪನ್ಯಾಸ ನೀಡಿದರು.
ಪಾಲಿಕೆಯು ಸ್ಟೆಪ್- ಅಪ್ ಯೋಜನೆಯಡಿ 2360 ಫಲಾನುಭವಿಗಳನ್ನು ಗುರುತಿಸಬೇಕಿದೆ. ಈಗ 1200 ಅಭ್ಯರ್ಥಿಗಳು ಸವಲತ್ತು ಕೋರಿ ಅರ್ಜಿ ಸಲ್ಲಿಸಿದ್ದು, ಇನ್ನುಳಿದ ಅಭ್ಯರ್ಥಿಗಳಿಗಾಗಿ ಮಂಗಳವಾರ ಮಾರ್ಗದರ್ಶನ ಶಿಬಿರ ಏರ್ಪಡಿಸಲಾಗಿತ್ತು. ಇದರಲ್ಲಿ 300 ಮಂದಿ ಭಾಗವಹಿಸಿದ್ದರು. ಈಗ ಫಲಾನುಭಿಗಳ ಸಂಖ್ಯೆ 1500 ತಲುಪಿದ್ದು, ಇನ್ನು 860 ಅಭ್ಯರ್ಥಿಗಳನ್ನು ಗುರುತಿಸಬೇಕಾಗಿರುವುದರಿಂದ ನಗರದ ಬಡಜನತೆ ಸವಲತ್ತಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಶಿಬಿರದಲ್ಲಿ ತಿಳಿಸಲಾಯಿತು.
ಸ್ಟೆಪ್- ಅಪ್ ಕಾರ್ಯಕ್ರಮದಡಿ ಸಿಎನ್‌ಸಿ ಟರ್ನಿಂಗ್, ಸಿಎನ್‌ಸಿ ಮಿಲ್ಲಿಂಗ್, ಆಟೋಕ್ಯಾಡ್, ದ್ವಿಚಕ್ರ ಬೇಸಿಕ್ ಆಟೋಮೋಟಿವ್, ಓವರ್‌ಹಾಲಿಂಗ್, ಬೇಸಿಕ್ ಎಲೆಕ್ಟ್ರಿಕಲ್, ಹೌಸ್ ವೈರಿಂಗ್, ಎಲೆಕ್ಟ್ರಾನಿಕ್ಸ್, ಮೈಂಟನೆನ್ಸ್ ಆಫ್ ಮೊಬೈಲ್ ಫೋನ್, ಸ್ಕ್ರೀನ್ ಪ್ರಿಂಟಿಂಗ್, ಬೇಸಿಕ್ ರೆಫ್ರಿಜರೇಷನ್, ಕಾರ್ ಏರ್‌ಕಂಡೀಷನಿಂಗ್, ಕಂಪ್ಯೂಟರ್ ಫಂಡಮೆಂಟಲ್, ಎಂಎಸ್ ಆಫೀಸ್, ಇಂಟರ್ನೆಟ್, ಡಿಟಿಪಿ, ಬ್ಯೂಟಿಷಿಯನ್ ತರಬೇತಿ ನೀಡಲಾಗುತ್ತದೆ.
ಪಾಲಿಕೆ ಸದಸ್ಯರಾದ ಕೆಂಪಣ್ಣ, ಗಿರೀಶ್ ಪ್ರಸಾದ್, ಪಾರ್ವತಿ, ಆಶಾ ಇದ್ದರು. ಸಮುದಾಯ ಅಭಿವೃದ್ಧಿ ಅಧಿಕಾರಿ ಡೀನಾ ಸ್ವಾಗತಿಸಿದರು. ಡಾ. ಭೈರಲಿಂಗಯ್ಯ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.